Thursday, 2 December 2021

'ಜೆಡಿಎಸ್ ನವರು ಎಲ್ಲಿ ಲಾಭ ಇರುತ್ತೋ ಅಲ್ಲಿಗೆ ಹೋಗ್ತಾರೆ': ಸಿದ್ದರಾಮಯ್ಯ


 'ಜೆಡಿಎಸ್ ನವರು ಎಲ್ಲಿ ಲಾಭ ಇರುತ್ತೋ ಅಲ್ಲಿಗೆ ಹೋಗ್ತಾರೆ': ಸಿದ್ದರಾಮಯ್ಯ

ಬೆಂಗಳೂರು: ದೇವೇಗೌಡರು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದಾರೆ. ಜೆಡಿಎಸ್ ನದ್ದು ಅನುಕೂಲಕರ ರಾಜಕಾರಣ, ಎಲ್ಲಿ ಲಾಭ ಇರುತ್ತೋ ಅಲ್ಲಿಗೆ ಹೋಗ್ತಾರೆ ಎಂದು ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. 

ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿರುವ ಅವರು, ಜೆಡಿಸ್ ಬಿಜೆಪಿಯ ಬಿ ಟೀಂ ಆಗಿದೆ. ಅವರಿಗೆ ಯಾವುದೇ ಸಿದ್ಧಾಂತಗಳಿಲ್ಲ. ನಾವು ಅಧಿಕಾರದಲ್ಲಿ ಇಲ್ಲದಿರಬಹುದು ಆದರೆ ನಮ್ಮ ಸಿದ್ಧಾಂತವನ್ನ ಬಿಟ್ಟುಕೊಟ್ಟಿಲ್ಲ. ಅಧಿಕಾರ ಶಾಶ್ವತವಲ್ಲ, ಬರುತ್ತೆ, ಹೋಗುತ್ತೆ ಎಂದರು.

ಯಡಿಯೂರಪ್ಪ ಅವರು 2008 ರಲ್ಲಿ ಆಪರೇಷನ್ ಕಮಲ ಮಾಡಿ ಎಲ್ಲರನ್ನು ಕೊಂಡುಕೊಳ್ತೇವೆ ಅಂತಾರೆ, ದುಡ್ಡು ಎಲ್ಲಿಂದ ಬರುತ್ತಪ್ಪ ಇವರಿಗೆ? ಲಂಚಕ್ಕೆ ಇನ್ನೊಂದು ಹೆಸರೇ ಬಿಜೆಪಿ. ಬಿಜೆಪಿ ಅಂದರೆ ಭ್ರಷ್ಟ ಜನತಾ ಪಾರ್ಟಿ ಎಂದು ಸಿದ್ದರಾಮಯ್ಯ ಆರೋಪಿಸಿದರು. 


SHARE THIS

Author:

0 التعليقات: