Monday, 13 December 2021

'ಬನಾರಸ್ ರೈಲ್ವೆ ನಿಲ್ದಾಣ'ಕ್ಕೆ ಮಧ್ಯರಾತ್ರಿ 'ಪ್ರಧಾನಿ ನರೇಂದ್ರ ಮೋದಿ' ಭೇಟಿ:

'ಬನಾರಸ್ ರೈಲ್ವೆ ನಿಲ್ದಾಣ'ಕ್ಕೆ ಮಧ್ಯರಾತ್ರಿ 'ಪ್ರಧಾನಿ ನರೇಂದ್ರ ಮೋದಿ' ಭೇಟಿ:

ಉತ್ತರ ಪ್ರದೇಶ: ರಾಜ್ಯದಲ್ಲಿನ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕಾಶಿ ವಿಶ್ವನಾಥ ಕಾರಿಡಾರ್ ನನ್ನು ನಿನ್ನೆ ಉದ್ಘಾಟಿಸಿದರು. ಈ ಬಳಿಕ ಅಲ್ಲಿಯೇ ಉಳಿದಿರುವಂತ ಪಿಎಂ ಮೋದಿ, ಮಧ್ಯರಾತ್ರಿಯಲ್ಲಿ ಬನಾರಸ್ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಹೌದು.. ಬನಾರಸ್ ರೈಲ್ವೆ ನಿಲ್ದಾಣಕ್ಕೆ ಕಳೆದ ಮಧ್ಯರಾತ್ರಿ ಭೇಟಿ ನೀಡಿದಂತ ಪ್ರಧಾನಿ ನರೇಂದ್ರ ಮೋದಿಯವರು, ರೈಲ್ವೆ ನಿಲ್ದಾಣದಲ್ಲಿ ಒಂದು ಸುತ್ತು ಸುತ್ತಾಡಿದರು. ಅಲ್ಲಿನ ಅಂಗಡಿ ಮುಂಗಟ್ಟುಗಳ ಜನರನ್ನು ಪ್ರೀತಿಯಿಂದ ಮಾತನಾಡಿಸಿದಂತ ಮೋದಿ, ಅವರ ಸಮಸ್ಯೆಗಳನ್ನು ಆಲಿಸಿದರು.

ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೆ ಯುಪಿ ಸಿಎಂ ಯೋಗಿ ಆದಿತ್ಯ ನಾಥ್ ಕೂಡ ಸಾಥ್ ನೀಡಿದರು. ಮಧ್ಯರಾತ್ರಿ ಬನಾರಸ್ ರೈಲ್ವೆ ಸ್ಟೇಷನ್ ಭೇಟಿ ನೀಡಿದ ಬಳಿಕ, ಅಲ್ಲಿನ ಸ್ವಚ್ಛತೆ, ಮೂಲ ಸೌಕರ್ಯದ ಬಗ್ಗೆ ಗಮನಹರಿಸಲು, ಕೇಂದ್ರ ಸರ್ಕಾರ ಶ್ರಮಿಸೋದಾಗಿ ಮಧ್ಯರಾತ್ರಿ 1.23ರಲ್ಲಿ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.


SHARE THIS

Author:

0 التعليقات: