Thursday, 16 December 2021

ಮೈಸೂರು: ನಂದಿನಿ ಹೆಸರಿನ ನಕಲಿ ತುಪ್ಪ ತಯಾರಿಕಾ ಘಟಕದ ಮೇಲೆ ದಾಳಿ


 ಮೈಸೂರು: ನಂದಿನಿ ಹೆಸರಿನ ನಕಲಿ ತುಪ್ಪ ತಯಾರಿಕಾ ಘಟಕದ ಮೇಲೆ ದಾಳಿ

ಮೈಸೂರು:  ನಂದಿನಿ ತುಪ್ಪವನ್ನೇ ನಕಲಿಯಾಗಿ ತಯಾರಿಸುವ ಘಟಕ ಒಂದು ಹೊಸಹುಂಡಿಬಳಿ ಪತ್ತೆಯಾಗಿದ್ದು, ಕಳೆದ ನಾಲ್ಕು ತಿಂಗಳಿನಿಂದ ನಂದಿನಿ ತುಪ್ಪವನ್ನು ತಯಾರಿಸುತ್ತಿದ್ದ ಗೋಡೌನ್ ಮೇಲೆ ಹ್ಯೂಮನ್ ರೈಟ್ಸ್ ತಂಡ ದಾಳಿ ನಡೆಸಿದೆ.

ಬುಧವಾರ ಬೆಳಿಗ್ಗೆ ಚಾಮುಂಡಿ ಬೆಟ್ಟದ ಹೊಸಹುಂಡಿಯಲ್ಲಿರುವ ನಕಲಿ ನಂದಿನಿ ತುಪ್ಪ ತಯಾರಿಕಾ ಘಟಕದ ಮೇಲೆ  ಹ್ಯೂಮನ್ ರೈಟ್ಸ್ ತಂಡ ದಾಳಿ ನಡೆಸಿದೆ. 

ದಾಲಿ ಬಳಿಕ ಹ್ಯೂಮನ್ ರೈಟ್ಸ್ ತಂಡದ ಉಪಾಧ್ಯಕ್ಷ ಪ್ರದೀಪ್ ಮಾತನಾಡಿ,  ಹೊಸಹುಂಡಿಯಲ್ಲಿ ಈ ರೀತಿ ನಂದಿನಿ ತುಪ್ಪವನ್ನು ನಕಲಿ ತಯಾರಿಸಿ ಲೋಡ್ ಮಾಡಿ ಮೈಸೂರು ನಗರದಾದ್ಯಂತ ವಿತರಣೆ ಮಾಡುತ್ತಿರುವ ಬಗ್ಗೆ ಬೆಳಗಿನ ಜಾವ ನಮಗೆ ಒಂದು ದೂರವಾಣಿ ಕರೆ ಬಂತು. ಅದರಂತೆ ನಮ್ಮ ತಂಡ ಘಟನಕದ ಮೇಲೆ ದಾಳಿ ನಡೆಸಿದಾಗ ಇಲ್ಲಿ ಲಾಕ್ ಮಾಡಿ ಒಳಗಡೆ ಕೆಲಸ ಮಾಡುತ್ತಿದ್ದರು. ಒಳಗಡೆ ಬಂದು ನೋಡಿದಾಗ ನಕಲಿ ತುಪ್ಪ ಪತ್ತೆಯಾಗಿದೆ. ಕೆಲವು ಅಸಲಿ ನಂದಿನಿ ತುಪ್ಪವನ್ನೂ ಇಟ್ಟುಕೊಂಡಿದ್ದಾರೆ.

ನಂದಿನಿ ತುಪ್ಪದ ರೂಪವೇ ಬರಲೆಂದು ಅದಕ್ಕೆ ಡಾಲ್ಡಾ ತುಪ್ಪ ಮಿಕ್ಸ್ ಮಾಡಿ  ಅದಕ್ಕೆ ಟನಲ್ ನಲ್ಲಿ ತುಂಬಿಸಿ, ಪ್ಯಾಕಿಂಗ್ ಮಿಷನ್ ನಲ್ಲಿ ಒಂದಾದ ನಂತರ ಒಂದು ಟಿನ್ ಗಟ್ಟಲೆ ತುಂಬಿದ್ದಾರೆ. ಈ ತರ ಎಲ್ಲೆಲ್ಲಿ ವಿತರಣೆ ಮಾಡಿದ್ದಾರೋ, ಏನಾಗಿದೆಯೋ, ಈಗ ವಿಚಾರ ಮಾಡಿದಾಗ ಕಳೆದ ನಾಲ್ಕು ತಿಂಗಳಿನಿಂದ ಹೊಸಹುಂಡಿಯಲ್ಲಿ ನಡೆಯುತ್ತಿದೆಯೆಂದು ತಿಳಿದು ಬಂತು.

ಈ ಕುರಿತು ಉನ್ನತ ಮಟ್ಟದಲ್ಲಿ ತನಿಖೆ ಆಗಬೇಕು. ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾದವರಿಗೂ ಈಗಾಗಲೇ ತಿಳಿಸಿದ್ದೇವೆ. ಕೆಎಂಎಫ್ ಎಂಡಿಯವರು ಬಂದಿದ್ದಾರೆ. ಅದರ ಬಗ್ಗೆ ಉನ್ನತಮಟ್ಟದ ತನಿಖೆ ನಡೆಯುತ್ತಿದೆ ಎಂದರು.

ಇದಕ್ಕೆ ಸಂಬಂಧಪಟ್ಟ  ಯಾವ ಅಧಿಕಾರಿಗಳು ಶಾಮೀಲಾಗಿದ್ದಾರೆ. ಸ್ಥಳೀಯರು ಯಾರು ಶಾಮೀಲಾಗಿದ್ದಾರೆ ಅವರಿಗೆ ಕಾನೂನು ಪ್ರಕಾರ ಶಿಕ್ಷೆ ವಿಧಿಸಲೇಬೇಕು. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇವೆ. ಇಲ್ಲಿನ ಸ್ಥಳೀಯ ಶಾಸಕರಿಗೂ ಮನವಿ ಸಲ್ಲಿಸುತ್ತೇವೆ. ಅವರಿಗೆ ಕಾನೂನು ಪ್ರಕಾರವೇ ಶಿಕ್ಷೆಯಾಗಬೇಕು ಎಂದು ಹೋರಾಟ ಮಾಡುವುದಾಗಿ ಹ್ಯೂಮನ್ ರೈಟ್ಸ್ ಜಿಲ್ಲಾಧ್ಯಕ್ಷರು ತಿಳಿಸಿದರು.

ಒಟ್ಟಿನಲ್ಲಿ ಈ ಪ್ರಕರಣದ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ನಂದಿನಿ ತುಪ್ಪ ಪ್ರಿಯರ ಕಣ್ಣಿಗೆ ನಿದ್ದೆ ಹತ್ತದಂತಾಗಿದೆ. 


SHARE THIS

Author:

0 التعليقات: