Friday, 17 December 2021

ಪ್ರತಿಭಟನೆಗೆ ಮಾತ್ರ ಅವಕಾಶ, ಆಯೋಜಕರಿಗೆ ಸ್ಪಷ್ಟ ಪಡಿಸಲಾಗಿದೆ: ಕಮಿಷನರ್ ಶಶಿಕುಮಾರ್‌


 ಪ್ರತಿಭಟನೆಗೆ ಮಾತ್ರ ಅವಕಾಶ, ಆಯೋಜಕರಿಗೆ ಸ್ಪಷ್ಟ ಪಡಿಸಲಾಗಿದೆ: ಕಮಿಷನರ್ ಶಶಿಕುಮಾರ್‌

ಮಂಗಳೂರು: ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಯವರು ಎಸ್‌ಪಿ ಕಚೇರಿ ಚಲೋ ಎಂಬ ಪ್ರತಿಭಟನಾ ರ‍್ಯಾಲಿಗೆ ಕರೆ ನೀಡಿದ್ದು, ಪ್ರತಿಭಟನೆಗೆ ಮಾತ್ರ ಅವಕಾಶ, ಯಾವುದೇ ರೀತಿ ರ‍್ಯಾಲಿ ನಡೆಸಬಾರದು ಎಂದು ಆಯೋಜಕರಿಗೆ ಸ್ಪಷ್ಟಪಡಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ತಾಲೂಕು ಕಚೇರಿ ಎದುರು ಕ್ಲಾಕ್ ಟವರ್ ಬಳಿ ಪ್ರತಿಭಟನೆಗೆ ಅವಕಾಶ ನೀಡಲಾಗಿದೆ. ಯಾವುದೇ ರೀತಿಯ ಮೆರವಣಿಗೆ ನಡೆಸಲು ಅವಕಾಶ ಇರುವುದಿಲ್ಲ. ಪ್ರತಿಭಟನೆ ಮಾಡುವ ಸಂದರ್ಭ ಎಸ್ಪಿಯವರು ಬಂದು ಮನವಿ ಸ್ವೀಕರಿಸಬೇಕು ಎಂದು ಸಂಬಂಧಪಟ್ಟವರಲ್ಲಿ ಸಂಘಟನೆಯ ಮುಖಂಡರು ಮನವಿ ಮಾಡಿದ್ದಾರೆ. ಅವರು ಕೂಡಾ ಮನವಿ ಸ್ವೀಕರಿಸುವುದಾಗಿ ಹೇಳಿರುವುದಾಗಿ ತಿಳಿದುಬಂದಿದೆ. ಪ್ರತಿಭಟನೆಯಲ್ಲಿ ಭಾಗವಹಿಸುವವರು ಮೆರವಣಿಗೆ ನಡೆಸುವಂತಿಲ್ಲ. ಶಾಂತಿಯುತವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕು. ಯಾವುದೇ ರೀತಿಯಲ್ಲಿ ಕಾನೂನು ಉಲ್ಲಂಘಿಸಲು ಅವಕಾಶ ಇರುವುದಿಲ್ಲ. ಅಧಿಕಾರಿ, ಸಿಬ್ಬಂದಿಯನ್ನು ಈ ನಿಟ್ಟಿನಲ್ಲಿ ನಗರದಲ್ಲಿ ನಿಯೋಜಿಸಲಾಗಿದೆ. ಶಾಂತಿಯುತವಾಗಿ ಪ್ರತಿಭಟನೆ ಮಾಡುವ ಮೂಲಕ ಪೊಲೀಸ್ ಇಲಾಖೆ ಜತೆ ಸಹಕರಿಸುವ ವಿಶ್ವಾಸವಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಪ್ರತಿಕ್ರಿಯಿಸಿದ್ದಾರೆ.


SHARE THIS

Author:

0 التعليقات: