Friday, 24 December 2021

ಬೆಂಗಳೂರು: ಮಸೀದಿಯಲ್ಲಿ ಸಿಲಿಂಡರ್ ಸ್ಫೋಟ; ತಪ್ಪಿದ ಭಾರೀ ಅನಾಹುತ


 ಬೆಂಗಳೂರು: ಮಸೀದಿಯಲ್ಲಿ ಸಿಲಿಂಡರ್ ಸ್ಫೋಟ; ತಪ್ಪಿದ ಭಾರೀ ಅನಾಹುತ

ಬೆಂಗಳೂರು: ಹೆಬ್ಬಾಳದ ನಾಗವಾರ ಬಳಿ ಮಸೀದಿಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡಿದ್ದು,  ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. 

ಶುಕ್ರವಾರ ಮಧ್ಯಾಹ್ನ ಮಸೀದಿಯ ಆವರಣದಲ್ಲಿರುವ ಗ್ಯಾಸ್ ಸ್ಟೌವ್ ರಿಪೇರಿಯ ಅಂಗಡಿಯೊಂದರಲ್ಲಿ ಗ್ಯಾಸ್ ಲೀಕ್​ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಘಟನೆ ನಡೆಯುವ ವೇಳೆ ಮಸೀದಿಯ ಒಳಗೆ ಇದ್ದವರೆಲ್ಲರೂ ಹೊರಗೆ ಬಂದಿದ್ದಾರೆ. ನಂತರ ಸಿಲಿಂಡರ್ ಸ್ಫೋಟವಾಗಿದೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.


SHARE THIS

Author:

0 التعليقات: