ಮಂಗಳೂರು: ನರ್ಸಿಂಗ್ ಕಾಲೇಜಿನ 7 ವಿದ್ಯಾರ್ಥಿಗಳಿಗೆ ಕೊರೋನ ಸೋಂಕು
ಮಂಗಳೂರು: ನಗರದ ನರ್ಸಿಂಗ್ ಕಾಲೇಜಿನ 7 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆ ಕಾಲೇಜನ್ನು ಕಂಟೈನ್ಮೆಂಟ್ ವಲಯ ಎಂದು ಘೋಷಿಸಲಾಗಿದೆ.
ಕಾಲೇಜಿನ ಪ್ರಥಮ ವರ್ಷದ ತರಗತಿಯ 43 ವಿದ್ಯಾರ್ಥಿಗಳ ಸ್ವಾಬ್ ಪರೀಕ್ಷೆ ಮಾಡಲಾಗಿತ್ತು. ಆ ಪೈಕಿ ಶುಕ್ರವಾರ ಕೇರಳ ಮೂಲದ 7 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕಾಗಿದೆ. ಹಾಗಾಗಿ ಈ ನರ್ಸಿಂಗ್ ಕಾಲೇಜನ್ನು ಕಂಟೈನ್ಮೆಂಟ್ ವಲಯ ಎಂದು ಗುರುತಿಸಿರುವ ದ.ಕ.ಜಿಲ್ಲಾ ಆರೋಗ್ಯ ಇಲಾಖೆಯು ವಿಶೇಷ ನಿಗಾ ಇರಿಸಿದೆ.
0 التعليقات: