Friday, 31 December 2021

ವಿಶ್ವದ ಜನಸಂಖ್ಯೆಯಲ್ಲಿ 74 ಮಿಲಿಯನ್ ಹೆಚ್ಚಳ


ವಿಶ್ವದ ಜನಸಂಖ್ಯೆಯಲ್ಲಿ 74 ಮಿಲಿಯನ್ ಹೆಚ್ಚಳ

ವಾಷಿಂಗ್ಟನ್, ಡಿ.31: ವಿಶ್ವದ ಜನಸಂಖ್ಯೆ ಕಳೆದ ವರ್ಷಕ್ಕಿಂತ 74 ಮಿಲಿಯನ್ ಹೆಚ್ಚಿದ್ದು ಹೊಸ ವರ್ಷದ ಆರಂಭದ ದಿನ(2022 ಜನವರಿ 1ರಂದು) ವಿಶ್ವದ ಜನಸಂಖ್ಯೆಯ ಪ್ರಮಾಣ 7.8 ಬಿಲಿಯನ್ ಎಂದು ಅಂದಾಜಿಸಿರುವುದಾಗಿ ಅಮೆರಿಕದ ಜನಗಣತಿ ಇಲಾಖೆ ಹೇಳಿದೆ.

2021ರ ಜನವರಿ 1ಕ್ಕೆ ಹೋಲಿಸಿದರೆ ಇದು ಶೇ.0.9% ಅಥವಾ 74 ಮಿಲಿಯನ್ ಹೆಚ್ಚಳವಾಗಿದೆ. ಹೊಸ ವರ್ಷದ ಆರಂಭದಿಂದ ವಿಶ್ವದಾದ್ಯಂತ ಪ್ರತೀ ಸೆಕೆಂಡಿಗೆ 4.3 ಜನನ, 2 ಮರಣ ಸಂಭವಿಸುವುದೆಂದು ಅಂದಾಜಿಸಲಾಗಿದೆ ಎಂದು ಜನಗಣತಿ ಇಲಾಖೆ ಹೇಳಿದೆ.

ಈ ಮಧ್ಯೆ, ಕಳೆದ ವರ್ಷಕ್ಕೆ ಹೋಲಿಸಿದರೆ ಅಮೆರಿಕದ ಜನಸಂಖ್ಯೆಗೆ 7,07,000 ಹೆಚ್ಚುವರಿ ಸೇರ್ಪಡೆಯಾಗಿದೆ. 2022ರ ಜನವರಿ 1ರಂದು ಅಮೆರಿಕದ ಜನಸಂಖ್ಯೆ ಕಳೆದ ವರ್ಷದಿಂದ ಶೇ.0.2 ಅಭಿವೃದ್ಧಿ ಹೊಂದಿದೆ . ಹೊಸ ವರ್ಷದ ಆರಂಭದಿಂದ ಅಮೆರಿಕದಲ್ಲಿ ಪ್ರತೀ 9 ಸೆಕೆಂಡಿಗೆ ಒಂದು ಜನನ, ಪ್ರತೀ 11 ಸೆಕೆಂಡಿಗೆ 1 ಮರಣ ಪ್ರಕರಣ ದಾಖಲಾಗಲಿದೆ. ಜೊತೆಗೆ, ಅಂತರಾಷ್ಟ್ರೀಯ ವಲಸೆ ಪ್ರಕ್ರಿಯೆಯಿಂದ ಪ್ರತೀ 130 ಸೆಕೆಂಡ್‌ಗೆ ಹೆಚ್ಚುವರಿ ವ್ಯಕ್ತಿಯ ಸೇರ್ಪಡೆಯಾಗಲಿದೆ ಎಂದು ವರದಿ ಹೇಳಿದೆ.SHARE THIS

Author:

0 التعليقات: