Sunday, 5 December 2021

ಮಹಾರಾಷ್ಟ್ರದಲ್ಲಿ ಒಂದೇ ದಿನ 7 ಒಮೈಕ್ರಾನ್ ಪ್ರಕರಣ ಪತ್ತೆ

 

ಮಹಾರಾಷ್ಟ್ರದಲ್ಲಿ ಒಂದೇ ದಿನ 7 ಒಮೈಕ್ರಾನ್ ಪ್ರಕರಣ ಪತ್ತೆ

ಮುಂಬೈ: ಮಹಾರಾಷ್ಟ್ರದಲ್ಲಿ ರವಿವಾರ  ಒಂದೇ ದಿನ 7 ಮಂದಿಗೆ ಒಮೈಕ್ರಾನ್ ಸೋಂಕು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಒಮೈಕ್ರಾನ್ ಸೋಂಕಿತರ ಸಂಖ್ಯೆ 8ಕ್ಕೇರಿದೆ.

ಇದುವರೆಗೆ ದೇಶದಲ್ಲಿ ಒಟ್ಟು 12 ಪ್ರಕರಣ  ಪತ್ತೆಯಾಗಿದೆ.

 ಮಹಾರಾಷ್ಟ್ರದಲ್ಲಿ ಏಳು ಜನರ ಪೈಕಿ ನಾಲ್ವರು ವಿದೇಶದಿಂದ ವಾಪಸಾಗಿದ್ದಾರೆ. ಇವರೊಂದಿಗೆ ಇನ್ನೂ ಮೂವರು ಸಂಪರ್ಕಕ್ಕೆ ಬಂದಿದ್ದರು. ನೈಜೀರಿಯಾದಿಂದ ದೇಶಕ್ಕೆ ಬಂದಿರುವ ಮಹಿಳೆ ಹಾಗೂ ಅವರ ಇಬ್ಬರು ಹೆಣ್ಣುಮಕ್ಕಳು, ಪುಣೆಯ ಪಿಂಪ್ರಿ-ಚಿಂಚ್‌ವಾಡಾದಲ್ಲಿರುವ ಮಹಿಳೆಯ ಸಹೋದರ ಹಾಗೂ ಅವರ ಇಬ್ಬರು ಹೆಣ್ಣುಮಕ್ಕಳು, ಫಿನ್‌ಲ್ಯಾಂಡ್‌ನಿಂದ ಆಗಮಿಸಿರುವ ಓರ್ವ ಪುರುಷನಿಗೆ ಹೊಸ ಕೋವಿಡ್ ರೂಪಾಂತರ ಒಮೈಕ್ರಾನ್ ಪತ್ತೆಯಾಗಿದೆ ಎಂದು NDTV ವರದಿ ಮಾಡಿದೆ.


SHARE THIS

Author:

0 التعليقات: