Friday, 3 December 2021

ಜವಾದ್ ಚಂಡಮಾರುತ; ಆಂಧ್ರಪ್ರದೇಶದ ಮೂರು ಜಿಲ್ಲೆಗಳಿಂದ 54,008 ಜನರ ಸ್ಥಳಾಂತರ


ಜವಾದ್ ಚಂಡಮಾರುತ;  ಆಂಧ್ರಪ್ರದೇಶದ ಮೂರು ಜಿಲ್ಲೆಗಳಿಂದ 54,008 ಜನರ ಸ್ಥಳಾಂತರ

ನವದೆಹಲಿ: ಜವಾದ್ ಚಂಡಮಾರುತ ಶನಿವಾರ ಉತ್ತರ ಆಂಧ್ರಪ್ರದೇಶಕ್ಕೆ ಅಪ್ಪಳಿಸುವ ಸಾಧ್ಯತೆಯಿರುವುದರಿಂದ, ರಾಜ್ಯ ಸರ್ಕಾರವು ಮೂರು ಜಿಲ್ಲೆಗಳಿಂದ 54,008 ಜನರನ್ನು ಸ್ಥಳಾಂತರಿಸಿದೆ.

ರಕ್ಷಣಾ ತಂಡವು ಶ್ರೀಕಾಕುಳಂ ಜಿಲ್ಲೆಯಿಂದ 15,755 ಜನರನ್ನು, ವಿಜಯನಗರದಿಂದ 1,700 ಮತ್ತು ವಿಶಾಖಪಟ್ಟಣದಿಂದ 36,553 ಜನರನ್ನು ಸ್ಥಳಾಂತರಿಸಿದೆ.

ಶಾಲೆಗಳು ಮತ್ತು ಸಮುದಾಯ ಭವನಗಳಲ್ಲಿ ಸರ್ಕಾರ 197 ಪರಿಹಾರ ಶಿಬಿರಗಳನ್ನು ಸ್ಥಾಪಿಸಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ಪಡೆಯ (ಎನ್‌ಡಿಆರ್‌ಎಫ್) 11 ತಂಡಗಳನ್ನು ನಿಯೋಜಿಸಲಾಗಿದ್ದು, ರಾಜ್ಯ ವಿಪತ್ತು ಪರಿಹಾರ ದಳದ (ಎಸ್‌ಡಿಆರ್‌ಎಫ್) ಐದು ತಂಡಗಳು ಮತ್ತು ಕೋಸ್ಟ್ ಗಾರ್ಡ್‌ನ ಆರು ತಂಡಗಳು ಸ್ಥಳದಲ್ಲಿವೆ.

ಗ್ರಾಮ ಕಾರ್ಯದರ್ಶಿಗಳು ಮತ್ತು ಜಿಲ್ಲಾಧಿಕಾರಿಗಳು ರಾತ್ರಿಯಿಡೀ ಕಾರ್ಯನಿರ್ವಹಿಸಲಿದ್ದಾರೆ.ಎರಡು ಹೆಲಿಕಾಪ್ಟರ್‌ಗಳು ಸನ್ನದ್ಧ ಸ್ಥಿತಿಯಲ್ಲಿವೆ. ಯಾವುದೇ ಅನಿರೀಕ್ಷಿತ ಪರಿಸ್ಥಿತಿ ಎದುರಿಸಲು ₹ 1 ಕೋಟಿ ಬಿಡುಗಡೆ ಮಾಡಲಾಗಿದೆ. 


SHARE THIS

Author:

0 التعليقات: