Friday, 10 December 2021

ವಲಸಿಗರನ್ನು ಸಾಗಿಸುತ್ತಿದ್ದ ಟ್ರಕ್ ಪಲ್ಟಿ; 53 ಮಂದಿ ಸಾವು, 58 ಮಂದಿಗೆ ಗಾಯ


 ವಲಸಿಗರನ್ನು ಸಾಗಿಸುತ್ತಿದ್ದ ಟ್ರಕ್ ಪಲ್ಟಿ; 53 ಮಂದಿ ಸಾವು, 58 ಮಂದಿಗೆ ಗಾಯ

ಮೆಕ್ಸಿಕೊ ಸಿಟಿ: ಮೆಕ್ಸಿಕೋದಲ್ಲಿ ಗುರುವಾರ  ನಡೆದ ಟ್ರಕ್ ಅಪಘಾತದಲ್ಲಿ ಕನಿಷ್ಠ 53 ಜನರು ಸಾವನ್ನಪ್ಪಿದ್ದಾರೆ ಹಾಗೂ  58 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಎಪಿ ವರದಿ ಮಾಡಿದೆ.

100 ಕ್ಕೂ ಹೆಚ್ಚು ಜನರಿದ್ದ ಸರಕು ಸಾಗಣೆ ಟ್ರಕ್ ಚಿಯಾಪಾಸ್ ರಾಜ್ಯದ ರಾಜಧಾನಿ ಟುಕ್ಸ್ಟ್ಲಾ ಗುಟೈರೆಜ್ ಕಡೆಗೆ ಹೋಗುವ ಹೆದ್ದಾರಿಯಲ್ಲಿ ಪಾದಚಾರಿ ಸೇತುವೆಯ ಮೇಲೆ ಉರುಳಿದಾಗ ಈ ಅಪಘಾತ ಸಂಭವಿಸಿದೆ.

ಪ್ರತ್ಯಕ್ಷ ಸಾಕ್ಷಿಗಳ ಪ್ರಕಾರ ಟ್ರಕ್ ಹೆಚ್ಚಿನ ವೇಗದಲ್ಲಿ ಹೋಗುತ್ತಿತ್ತು.  ತೀಕ್ಷ್ಣವಾದ ತಿರುವು ತೆಗೆದುಕೊಳ್ಳುವಾಗ ಪಲ್ಟಿಯಾಗಿದೆ ಎಂದು ಎಂದು ರಾಜ್ಯ ನಾಗರಿಕ ರಕ್ಷಣಾ ಸೇವೆಯ ಮುಖ್ಯಸ್ಥ ಲೂಯಿಸ್ ಮ್ಯಾನುಯೆಲ್ ಗಾರ್ಸಿಯಾ ಮೊರೆನೊ ಹೇಳಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಮೃತಪಟ್ಟವರನ್ನು ಮಧ್ಯ ಅಮೆರಿಕದಿಂದ ವಲಸೆ ಬಂದವರು ಎಂದು ನಂಬಲಾಗಿದೆ. ಆದರೆ ಅವರ ಗುರುತನ್ನು ಇನ್ನೂ ದೃಢೀಕರಿಸಲಾಗಿಲ್ಲ. ಬದುಕುಳಿದವರಲ್ಲಿ ಕೆಲವರು ನೆರೆಯ ದೇಶವಾದ ಗ್ವಾಟೆಮಾಲಾದಿಂದ ಬಂದವರು ಎಂದು ಮೊರೆನೊ  ಹೇಳಿದರು.


SHARE THIS

Author:

0 التعليقات: