Thursday, 2 December 2021

ಉಡುಪಿ: ಕೆನರಾ ಬ್ಯಾಂಕಿನಲ್ಲಿ 44 ಖೋಟಾ ನೋಟುಗಳು ಪತ್ತೆ


 ಉಡುಪಿ: ಕೆನರಾ ಬ್ಯಾಂಕಿನಲ್ಲಿ 44 ಖೋಟಾ ನೋಟುಗಳು ಪತ್ತೆ

ಉಡುಪಿ: ಉಡುಪಿ ಕೋರ್ಟ್ ರಸ್ತೆಯಲ್ಲಿರುವ ಕೆನರಾ ಬ್ಯಾಂಕಿನ ಕರೆನ್ಸಿ ಚೆಸ್ಟ್ ನಲ್ಲಿ ಪರಿಶೀಲನೆ ವೇಳೆ 44 ಖೋಟಾ ನೋಟುಗಳು ಪತ್ತೆಯಾಗಿವೆ.

ಕೆನರಾ ಬ್ಯಾಂಕ್ ಕರೆನ್ಸಿ ಚೆಸ್ಟ್ ನಲ್ಲಿ ಜು.14ರಿಂದ ಜು.15ರವರೆಗೆ ಆರ್‌ಬಿಐ ಡಿಪಾರ್ಟಮೆಂಟ್ ಬೆಂಗಳೂರು ಇವರು ಪರಿವೀಕ್ಷಣೆ ಮಾಡುವ ಸಂದರ್ಭದಲ್ಲಿ 2018ರ ನ.17ರಿಂದ 2021ರ ಆ.31ರವರೆಗೆ ವಿವಿಧ ಶಾಖೆಗಳಿಂದ ಕೆನರಾ ಬ್ಯಾಂಕ್ ಕರೆನ್ಸಿ ಚೆಸ್ಟ್ ಗೆ 44 ಖೋಟಾ ನೋಟುಗಳು ಬಂದಿರುವುದು ತಿಳಿದು ಬಂದಿದೆ.

ದುಷ್ಕರ್ಮಿಗಳು ನಕಲಿ ನೋಟುಗಳನ್ನು ತಯಾರಿ ಮಾಡಿ, ನೈಜ ನೋಟು ಗಳಂತೆ ಚಲಾವಣೆ ಮಾಡಿರುವುದಾಗಿ ಕರೆನ್ಸಿ ಚೆಸ್ಟ್‌ನ ಹಿರಿಯ ವ್ಯವಸ್ಥಾಪಕ ಸಂದೇಶ್ ರೋಡ್ರಿಗಸ್ ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.


SHARE THIS

Author:

0 التعليقات: