Sunday, 5 December 2021

ತೆಲಂಗಾಣ: 43 ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೋವಿಡ್-19

ತೆಲಂಗಾಣ: 43 ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೋವಿಡ್-19

ಹೈದರಾಬಾದ್: ತೆಲಂಗಾಣದ ಕರೀಂನಗರ ಜಿಲ್ಲೆಯ ಬೊಮ್ಮಕಲ್‌ನಲ್ಲಿರುವ ಚಲ್ಮೇಡಾ ಆನಂದ್ ರಾವ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕನಿಷ್ಠ 43 ವೈದ್ಯಕೀಯ ವಿದ್ಯಾರ್ಥಿಗಳು ಕೋವಿಡ್-19 ಗೆ ಸೋಂಕಿಗೆ ಒಳಗಾಗಿದ್ದಾರೆ., ತರಗತಿಗಳನ್ನು ಅಮಾನತುಗೊಳಿಸುವಂತೆ ಹಾಗೂ  ಕ್ಯಾಂಪಸ್ ಅನ್ನು ಮುಚ್ಚುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಒಂದು ವಾರದ ಹಿಂದೆ ಕಾಲೇಜು ತನ್ನ ವಾರ್ಷಿಕ ದಿನದ ಉತ್ಸವವನ್ನು ನಡೆಸಿತ್ತು ಹಾಗೂ  ಅದು ವೈರಸ್ ಹರಡಲು ಮೂಲವಾಗಿರಬಹುದು ಎನ್ನಲಾಗಿದೆ.

ಕರೀಂನಗರ ಜಿಲ್ಲಾ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ.ಜುವೇರಿಯಾ ಮಾತನಾಡಿ, ವಾರ್ಷಿಕ ದಿನದ ಕಾರ್ಯಕ್ರಮಕ್ಕಾಗಿ ಇಷ್ಟು ಜನರು ಒಟ್ಟು ಸೇರುವ ಉದ್ದೇಶದ ಬಗ್ಗೆ ಸರಕಾರಕ್ಕೆ ಮಾಹಿತಿ ನೀಡಲಾಗಿಲ್ಲ. ಸಮಾರಂಭದಲ್ಲಿ ಹಲವರು ಮಾಸ್ಕ್ ಧರಿಸಿರಲಿಲ್ಲ ಎನ್ನಲಾಗಿದೆ.

"ಇದುವರೆಗೆ 200 ಜನರನ್ನು ಪರೀಕ್ಷಿಸಲಾಗಿದೆ. ಸೋಮವಾರ, ಕ್ಯಾಂಪಸ್‌ನಲ್ಲಿರುವ ಎಲ್ಲಾ 1,000 ಜನರನ್ನು ಪರೀಕ್ಷಿಸಲು ವಿಶೇಷ ಶಿಬಿರ ನಡೆಯಲಿದೆ" ಎಂದು ಡಾ.ಜುವೇರಾ ಹೇಳಿದರು.



SHARE THIS

Author:

0 التعليقات: