Thursday, 30 December 2021

ಝೀವಾನ್ ದಾಳಿಯಲ್ಲಿ ಭಾಗಿಯಾಗಿದ್ದ 3 ಜೆಇಎಂ ಉಗ್ರರ ಹತ್ಯೆ


ಝೀವಾನ್ ದಾಳಿಯಲ್ಲಿ ಭಾಗಿಯಾಗಿದ್ದ 3 ಜೆಇಎಂ ಉಗ್ರರ ಹತ್ಯೆ

ಶ್ರೀನಗರ,ಡಿ.31- ನಗರದ ಪಂಥಾ ಚೌಕ್ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‍ಕೌಂಟರ್‍ನಲ್ಲಿ ಜೈಷ್-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಮೂವರು ಉಗ್ರಗಾಮಿಗಳು ಹತರಾಗಿ ನಾಲ್ವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ ಉಗ್ರರಲ್ಲಿ ಓರ್ವ ಇಲ್ಲಿಗೆ ಸಮೀಪದ ಝೇವಾನ್ ಪ್ರದೇಶದಲ್ಲಿ ಡಿ.13ರಂದು ನಡೆದ ಬಸ್ ಮೇಲಿನ ದಾಳಿಯಲ್ಲಿ ಭಾಗಿಯಾಗಿದ್ದ ಎಂದು ಅವರು ಹೇಳಿದ್ದಾರೆ. ಹತ ಉಗ್ರರಲ್ಲಿ ಓರ್ವನನ್ನು ನಿಷೇಧಿತ ಉಗ್ರಗಾಮಿ ಸಂಘನೆ ಜೆಇಎಂನ ಸುಹೈಲ್ ಅಹ್ಮದ್ ರಾಥರ್ ಎಂದು ಗುರುತಿಲಾಗಿದೆ.

ಈತ ಝೆವಾನ್ ದಾಳಿಯಲ್ಲಿ ಪಾಲ್ಗೊಂಡಿದ್ದ ಎಂಬುದಾಗಿ ಕಾಶ್ಮೀರದ ಪೊಲೀಸ್ ಮಹಾನಿರೀಕ್ಷಕ ವಿಜಯಕುಮಾರ್ ನುಡಿದಿದ್ದಾರೆ.

ಝೆವಾನ್ ದಾಳಿಯಲ್ಲಿ ಪಾತ್ರ ವಹಿಸಿದ್ದ ಎಲ್ಲ ಉಗ್ರರನ್ನು ದಮನ ಮಾಡಲಾಗಿದೆ. ಆ ದಾಳಿ ನಡೆಸಿದ್ದ ಇಬ್ಬರು ಉಗ್ರರು ಗುರುವಾದ ಅನಂತನಾಗ್‍ನಲ್ಲಿ ನಡೆದ ಎನ್‍ಕೌಂಟರ್‍ನಲ್ಲಿ ಬಲಿಯಾಗಿದ್ದರು.SHARE THIS

Author:

0 التعليقات: