Wednesday, 1 December 2021

ಕಬಕ ಉಸ್ತಾದ್ ನೇತೃತ್ವದ 31ನೇ ಜಲಾಲಿಯತ್ ರಾತೀಬ್


 ಕಬಕ ಉಸ್ತಾದ್ ನೇತೃತ್ವದ 31ನೇ ಜಲಾಲಿಯತ್ ರಾತೀಬ್

ವಿಟ್ಲ :  ಕಬಕ ಉಸ್ತಾದ್ ರವರ ನೇತೃತ್ವದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ 31ನೇ ಜಲಾಲಿಯತ್ ರಾತೀಬ್,  ಕೊಳ್ನಾಡು -ಬಾರೆಬೆಟ್ಟುವಿನ ನೀರಪಳಿಕೆ ಕಬಕ ಉಸ್ತಾದ್ ರವರ ನಿವಾಸದಲ್ಲಿ ರವಿವಾರ ನಡೆಯಿತು.

ಶೈಖುನಾ ಅಲ್ ಹಾಜ್ ಬಿ.ಎನ್.ಮುಹಮ್ಮದ್ ಮದನಿ (ಕಬಕ ಉಸ್ತಾದ್) ಜಲಾಲಿಯತ್ ರಾತೀಬ್ ನ ನೇತೃತ್ವ ವಹಿಸಿದ್ದರು. ಉಡುಪಿ ಸಂಯುಕ್ತ ಖಾಝಿ ಝೈನುಲ್ ಉಲಮಾ ಶೈಖುನಾ ಅಲ್ ಹಾಜ್ ಅಬ್ದುಲ್ ಹಮೀದ್ ಮುಸ್ಲಿಯಾರ್ ದುಆ ನೆರವೇರಿಸಿದರು.

ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ, ಇಬ್ರಾಹಿಮ್ ಮುಸ್ಲಿಯಾರ್ ಬೀಟಿಗೆ, ಅಬೂಬಕ್ಕರ್, ಸುನ್ನಿ ಪೈಝಿ ಪೆರುವಾಯಿ, ಹಾಗೂ ಹಲವಾರು ಉಲಮಾ, ಉಮರಾ ನಾಯಕರುಜಲಾಲಿಯ್ಯ ರಾತೀಬ್ ನಲ್ಲಿ  ಪಾಲ್ಗೊಂಡರು. 

ಕಾರ್ಯಕ್ರಮದಲ್ಲಿ ಸುರಿಬೈಲ್ ದಾರುಲ್ ಅಶ್ಅರಿಯ್ಯಃ ಮೆನೇಜರ್ ಮುಹಮ್ಮದ್ ಅಲಿ ಸಖಾಫಿ, ಬಾರೆಬೆಟ್ಟು ಜುಮಾ ಮಸೀದಿ  ಖತೀಬ್ ಮುಹಮ್ಮದ್ ಸಅದಿ, ಕಲ್ಲೇಗ ಜುಮಾ ಮಸೀದಿ ಖತೀಬ್ ಅಬೂಬಕ್ಕರ್ ಸಿದ್ದೀಖ್ ಜಲಾಲಿ ರಾತೀಬ್ ನ ಮಹತ್ವದ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿದರು.




SHARE THIS

Author:

0 التعليقات: