Friday, 31 December 2021

ಅಡುಗೆ ಎಣ್ಣೆ ಬೆಲೆ 30-40 ರೂ ಇಳಿಕೆ, ದರ ನಿಗಾ ವಹಿಸುವಂತೆ ರಾಜ್ಯಗಳಿಗೆ ಕೇಂದ್ರ ಸೂಚನೆ


ಅಡುಗೆ ಎಣ್ಣೆ ಬೆಲೆ 30-40 ರೂ ಇಳಿಕೆ, ದರ ನಿಗಾ ವಹಿಸುವಂತೆ ರಾಜ್ಯಗಳಿಗೆ ಕೇಂದ್ರ ಸೂಚನೆ

ಅಡುಗೆ ಎಣ್ಣೆ ಬೆಲೆ 30-40 ರೂ.ಗಳಷ್ಟು ಕಡಿಮೆಯಾದ ನಂತರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಕಾರ್ಯದರ್ಶಿ ಡಾ. ಸುಧಾಂಶು ಪಾಂಡೆ ಅವರು ತಮ್ಮ ರಾಜ್ಯಗಳಲ್ಲಿ ಸರಿಯಾದ MRP ದರದಲ್ಲಿ ಮಾರಾಟ ಮಾಡಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದ್ದಾರೆ.

ಸರ್ಕಾರವು ಅಡುಗೆ ಎಣ್ಣೆಯ ಆಮದು ಸುಂಕವನ್ನು ಬಹುತೇಕ ಶೂನ್ಯಕ್ಕೆ ಇಳಿಸಿದೆ. ಇದರಿಂದ ತೈಲ ಬೆಲೆಯಲ್ಲಿ ಶೇ.15ರಿಂದ ಶೇ.20ರಷ್ಟು ಇಳಿಕೆಯಾಗಿದೆ. ಎಲ್ಲಾ ಪ್ರಮುಖ ಖಾದ್ಯ ತೈಲ ಬ್ರಾಂಡ್‌ಗಳು 30-40 ರೂಪಾಯಿ ಕಡಿತಗೊಳಿಸಿವೆ. ಉದಾಹರಣೆಗೆ, ರುಚಿ ಸೋಯಾ ಇಂಡಸ್ಟ್ರೀಸ್ ಸೋಯಾಬೀನ್ ಎಣ್ಣೆಯ ಚಿಲ್ಲರೆ ಬೆಲೆಯನ್ನು ಲೀಟರ್‌ಗೆ 30 ರೂ ಕಡಿಮೆ ಮಾಡಿವೆ. 1 ಲೀಟರ್‌ಗೆ 152 ರೂ ಗೆ ಮಾರಾಟ ಮಾಡಲಾಗುತ್ತಿದೆ.

ಅದಾನಿ ವಿಲ್ಮಾರ್ ಫಾರ್ಚೂನ್ ಸೋಯಾ ಎಣ್ಣೆಯ ಚಿಲ್ಲರೆ ಬೆಲೆ ಲೀಟರ್‌ಗೆ 155 ರೂ ಇದೆ. . 30-40 ರೂ ಕಡಿತಗೊಳಿಸಿದ ನಂತರ, ರಾಜ್ಯ ಸರ್ಕಾರಗಳು ತಮ್ಮ ರಾಜ್ಯಗಳಲ್ಲಿ MRP ದರದ ಮಾರಾಟವನ್ನು ಖಚಿತಪಡಿಸಿಕೊಳ್ಳಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಪಾಂಡೆ ಹೇಳಿದರು.SHARE THIS

Author:

0 التعليقات: