Tuesday, 7 December 2021

24 ಗಂಟೆಯಲ್ಲಿ ಶೇ.23ರಷ್ಟು ಹೆಚ್ಚಾದ ಕೋವಿಡ್ ಕೇಸ್: 8,439 ಜನರಿಗೆ ಕೊರೋನಾ ದೃಢ


24 ಗಂಟೆಯಲ್ಲಿ ಶೇ.23ರಷ್ಟು ಹೆಚ್ಚಾದ ಕೋವಿಡ್ ಕೇಸ್: 8,439 ಜನರಿಗೆ ಕೊರೋನಾ ದೃಢ

ನವದೆಹಲಿ: ಒಮಿಕ್ರಾನ್ ವೈರಸ್ ಆತಂಕದ ಜೊತೆಗೆ ಜೊತೆಗೆ ದೇಶದಲ್ಲಿ ಕೊರೋನಾ ವೈರಸ್  ಪ್ರಕರಣಗಳ ಸಂಖ್ಯೆ ಕೂಡ ಗಣನೀಯವಾಗಿ ದೇಶದಲ್ಲಿ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಯಲ್ಲಿ 8,439 ಜನರಿಗೆ ಕೊರೋನಾ ವೈರಸ್ ಶಾಕ್ ಕೊಟ್ಟಿದೆ.

ನಿನ್ನೆಗಿಂತ ಶೇ.23ರಷ್ಟು ಕೋವಿಡ್ ಪ್ರಕರಣಗಳು ಭಾರತದಲ್ಲಿ ವರದಿಯಾಗಿವೆ.

44 ಮಹಿಳೆಯರ ಮೇಲೆ ವಿಮಾನ ನಿಲ್ದಾಣ ಅಧಿಕಾರಿಗಳು ಪೊಲೀಸರಿಗೆ ದೂರು

ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಭಾರತದಲ್ಲಿ ಇಂದು ಹೊಸದಾಗಿ 8,439 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿವೆ. ಇದು ನಿನ್ನೆಗಿಂತ ಶೇ.23ರಷ್ಟು ಹೆಚ್ಚು ಕೇಸ್ ಗಳಾಗಿರೋದಾಗಿ ತಿಳಿಸಿದೆ.

ಕಳೆದ 24 ಗಂಟೆಯಲ್ಲಿ 8,439 ಜನರಿಗೆ ಕೋವಿಡ್ ದೃಢಪಟ್ಟ ಕಾರಣ, ದೇಶದಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 93,733ಕ್ಕೆ ಏರಿಕೆಯಾಗಿದೆ. ಇದು 555 ದಿನಗಳಲ್ಲಿಯೇ ಅತ್ಯಂತ ಕಡಿಮೆ ಸಂಖ್ಯೆಯಾಗಿದೆ. ಇಂದು ಸೋಂಕಿನಿಂದ 195 ಜನರು ಸಾವನ್ನಪ್ಪಿದ್ದಾರೆ. ಹೀಗಾಗಿ ದೇಶದಲ್ಲಿ ಇದುವರೆಗೆ ಸಾವನ್ನಪ್ಪಿದವರ ಸಂಖ್ಯೆ 4,73,952ಕ್ಕೆ ಏರಿಕೆಯಾಗಿದೆ ಎಂದು ಹೇಳಿದೆ.


SHARE THIS

Author:

0 التعليقات: