ಎಲ್ಎಲ್ಬಿ ಪರೀಕ್ಷೆ ರದ್ದು ಕೋರಿ ಅರ್ಜಿ ಸಲ್ಲಿಕೆ: ಹೈಕೋರ್ಟ್ ನಲ್ಲಿ ಡಿ.20ಕ್ಕೆ ವಿಚಾರಣೆ
ಬೆಂಗಳೂರು: ಐದು ವರ್ಷಗಳ ಕಾನೂನು ಪದವಿಯ 2ನೆ ಮತ್ತು 4ನೆ ಸೆಮಿಸ್ಟರ್ ಪರೀಕ್ಷೆ ನಡೆಸುವ ಸಂಬಂಧ ವಿಶ್ವವಿದ್ಯಾಲಯವು 2021ರ ಡಿ.1ರಂದು ಹೊರಡಿಸಿದ ಅಧಿಸೂಚನೆ ರದ್ದು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಡಿ.20ರಂದು ವಿಚಾರಣೆಗೆ ಬರಲಿದೆ.
ಐದು ವರ್ಷಗಳ ಕಾನೂನು ಪದವಿಯ 2ನೆ ಮತ್ತು 4ನೆ ಸೆಮಿಸ್ಟರ್ ಪರೀಕ್ಷೆ ನಡೆಸುವ ಸಂಬಂಧ ವಿಶ್ವವಿದ್ಯಾಲಯವು 2021ರ ಡಿ.1ರಂದು ಹೊರಡಿಸಿದ ಅಧಿಸೂಚನೆ ರದ್ದು ಕೋರಿ ಕೆ.ಪಿ. ಪ್ರಭುದೇವ್ ಮತ್ತಿತರ ವಿದ್ಯಾರ್ಥಿಗಳು ಸಲ್ಲಿಸಿರುವ ತಕರಾರು ಅರ್ಜಿ ವಿಚಾರಣೆ ನ್ಯಾ. ಅಶೋಕ್ ಎಸ್. ಕಿಣಗಿ ಅವರಿದ್ದ ಪೀಠದಲ್ಲಿ ನಡೆಯಲಿದೆ.
ಸಾಕಷ್ಟು ವಿದ್ಯಾರ್ಥಿಗಳು ಆನ್ಲೈನ್ ತರಗತಿಗೆ ಹಾಜರಾಗಿಲ್ಲ. ತರಗತಿ ಆಲಿಸಲು ಲ್ಯಾಪ್ಟಾಪ್, ಡೆಸ್ಕ್ಟಾಪ್ ಮತ್ತು ಇಂಟರ್ನೆಟ್ ಸೇರಿ ಇತರೆ ಅಗತ್ಯ ಸೌಲಭ್ಯಗಳಿರಲಿಲ್ಲ. ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾದ ಶಿಕ್ಷಣ ದೊರೆತಿಲ್ಲ. ಇದೇ ಕಾರಣಕ್ಕೆ ಮೂರು ವರ್ಷದ ಕಾನೂನು ಪದವಿಯ 2ನೆ ಮತ್ತು 4ನೆ ಸೆಮಿಸ್ಟರ್ ಪರಿಕ್ಷೆ ನಡೆಸಲು ವಿವಿ ಹೊರಡಿಸಿದ್ದ ಅಧಿಸೂಚನೆಯನ್ನು ಧಾರವಾಡ ಹೈಕೋರ್ಟ್ ಪೀಠ ಡಿ.14ರಂದು ರದ್ದುಪಡಿಸಿದೆ.
ಇದೇ ರೀತಿ 5 ವರ್ಷದ ಕಾನೂನು ಪದವಿಯ 2ನೆ ಮತ್ತು 4ನೆ ಸೆಮಿಸ್ಟರ್ ಪರೀಕ್ಷೆಯನ್ನು ಕೂಡ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
0 التعليقات: