Friday, 3 December 2021

ನಾಳೆ 2021ರ ಕೊನೆಯ ಸೂರ್ಯಗ್ರಹಣ;

ನಾಳೆ 2021ರ ಕೊನೆಯ ಸೂರ್ಯಗ್ರಹಣ;

ಸೂರ್ಯಗ್ರಹಣವು ಬೆಳಿಗ್ಗೆ 10:59 ರಿಂದ ಪ್ರಾರಂಭವಾಗುತ್ತದೆ ಮತ್ತು ಮಧ್ಯಾಹ್ನ 3:7 ಕ್ಕೆ ಕೊನೆಗೊಳ್ಳುತ್ತದೆ. ಈ ಸೂರ್ಯಗ್ರಹಣವು ಅಂಟಾರ್ಟಿಕಾ ಮತ್ತು ದಕ್ಷಿಣ ಅಮೇರಿಕಾ, ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸೇರಿದಂತೆ ಜಗತ್ತಿನ ಕೆಲವು ಭಾಗಗಳಿಗೆ ಗೋಚರವಾಗಲಿದೆ.

ಅಮಾವಾಸ್ಯೆಯ ದಿನ ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬ೦ದಾಗ ಸೂರ್ಯ ಗ್ರಹಣ ಸ೦ಭವಿಸುತ್ತದೆ. ಈ ವರ್ಷದ ಎರಡನೇ ಸೂರ್ಯಗ್ರಹಣ ಮತ್ತು 2021ರ ಕೊನೆಯ ಸೂರ್ಯಗ್ರಹಣವು ಶನಿವಾರ, ಡಿಸೆಂಬರ್ 4 ರಂದು ಸಂಭವಿಸಲಿದೆ. ಈ ಗ್ರಹಣ ಸುಮಾರು 4 ಗಂಟೆಗಳ ಕಾಲ ಇರಲಿದೆ. ಸೂರ್ಯಗ್ರಹಣವು ಬೆಳಿಗ್ಗೆ 10:59 ರಿಂದ ಪ್ರಾರಂಭವಾಗುತ್ತದೆ ಮತ್ತು ಮಧ್ಯಾಹ್ನ 3:7 ಕ್ಕೆ ಕೊನೆಗೊಳ್ಳುತ್ತದೆ. ಈ ಸೂರ್ಯಗ್ರಹಣವು ಅಂಟಾರ್ಟಿಕಾ ಮತ್ತು ದಕ್ಷಿಣ ಅಮೇರಿಕಾ, ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸೇರಿದಂತೆ ಜಗತ್ತಿನ ಕೆಲವು ಭಾಗಗಳಿಗೆ ಗೋಚರವಾಗಲಿದೆ. ಭೂಮಿಯ ಮೇಲ್ಮೈಯಲ್ಲಿ ಸೂರ್ಯಗ್ರಹಣದ ಹಾದಿಯನ್ನು ಪತ್ತೆಹಚ್ಚುವ ನಕ್ಷೆಯನ್ನು ನಾಸಾ ಬಿಡುಗಡೆ ಮಾಡಿದ್ದು, ಇದರ ಆಧಾರದಲ್ಲಿ ಡಿಸೆಂಬರ್ 4 ರ ಸೂರ್ಯಗ್ರಹಣವು ಭಾರತದಿಂದ ಗೋಚರಿಸುವುದಿಲ್ಲ.

ಈ ವರ್ಷದ ಕೊನೆಯ ಸೂರ್ಯಗ್ರಹಣ 

2021 ರ ಕೊನೆಯ ಸೂರ್ಯಗ್ರಹಣವು ಈ ಮೊದಲು ಅಂದರೆ ಇದೇ ವರ್ಷ ಜೂನ್​ 10 ರಂದು ಸಂಭವಿಸಿದ ಮಾದರಿಯಲ್ಲಿಯೇ ಇರಲಿದೆ. ಬೆಳಿಗ್ಗೆ 10.59ಕ್ಕೆ ಪ್ರಾರಂಭವಾಗುತ್ತದೆ. ಮಧ್ಯಾಹ್ನ 12:30 ಕ್ಕೆ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗುತ್ತದೆ. 01:03 ಕ್ಕೆ ಗರಿಷ್ಠವಾಗಿರುತ್ತದೆ ಮತ್ತು 01:36 ಕ್ಕೆ ಕೊನೆಗೊಳ್ಳುತ್ತದೆ. ಅಂತಿಮವಾಗಿ 3.07ಕ್ಕೆ ಮುಕ್ತಾಯವಾಗುತ್ತದೆ.



SHARE THIS

Author:

0 التعليقات: