Friday, 17 December 2021

ದಿಲ್ಲಿ:ಮಾಲಿನ್ಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ನಿರ್ಮಾಣ ಸಂಸ್ಥೆಗೆ 1 ಕೋಟಿ ರೂ. ದಂಡ


 ದಿಲ್ಲಿ:ಮಾಲಿನ್ಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ನಿರ್ಮಾಣ ಸಂಸ್ಥೆಗೆ 1 ಕೋಟಿ ರೂ. ದಂಡ

ಹೊಸದಿಲ್ಲಿ: ಎನ್‌ಬಿಸಿಸಿ ಇಂಡಿಯಾ ನಿರ್ಮಾಣ ಸೈಟ್‌ಗೆ ರಾತ್ರಿಯಲ್ಲಿ ಕಾರ್ಯ ನಿರ್ವಹಿಸಲು ಹಾಗೂ  ಸುಪ್ರೀಂ ಕೋರ್ಟ್‌ನ ಮಾಲಿನ್ಯ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸೀಲಿಂಗ್‌ಗೆ ಆದೇಶಿಸಿದ್ದಾರೆ. ಮಾಲಿನ್ಯ ನಿಯಮ ಉಲ್ಲಂಘನೆಗಾಗಿ 1 ಕೋಟಿ ರೂ. ದಂಡ ವಿಧಿಸಲು ಸಚಿವರು ಆದೇಶ ನೀಡಿದ್ದಾರೆ.

ಮಾಲಿನ್ಯವನ್ನು ತಡೆಯಲು ಸುಪ್ರೀಂ ಕೋರ್ಟ್ ನಿಗದಿಪಡಿಸಿದ ನಿಯಮಗಳ ಬಹಿರಂಗ ಉಲ್ಲಂಘನೆಯ ವೀಡಿಯೊಗಳು ಹಾಗೂ  ಚಿತ್ರಗಳನ್ನು ಸೆರೆಹಿಡಿದಿರುವ ತನಿಖಾ ವರದಿಯನ್ನು ‘ಇಂಡಿಯಾ ಟುಡೇ ‘ ಬಿಡುಗಡೆ ಮಾಡಿದ ಒಂದು ದಿನದ ನಂತರ ಈ ಆದೇಶ ಬಂದಿದೆ.

ಹಿಂದಿನ ದಿನ ಸುಪ್ರೀಂ ಕೋರ್ಟ್‌ನ ಮಾಲಿನ್ಯ ನಿಯಮಗಳ ಉಲ್ಲಂಘನೆಯ ಕುರಿತು ಗೋಪಾಲ್ ರೈ ಅವರು ಉನ್ನತ ಅಧಿಕಾರಿಗಳ ತುರ್ತು ಸಭೆಯನ್ನು ಕರೆದರು. ಸಭೆಯಲ್ಲಿ ದಿಲ್ಲಿ ಸಂಚಾರ ಪೊಲೀಸ್ ಇಲಾಖೆ, ಪರಿಸರ ಇಲಾಖೆ, ಸಾರಿಗೆ ಇಲಾಖೆ, ದಿಲ್ಲಿ  ಮಾಲಿನ್ಯ ನಿಯಂತ್ರಣ ಸಮಿತಿ (ಡಿಪಿಸಿಸಿ) ಹಾಗೂ  ಎನ್ ಬಿಸಿಸಿ ಇಂಡಿಯಾದ ಅಧಿಕಾರಿಗಳು ಭಾಗವಹಿಸಿದ್ದರು.


SHARE THIS

Author:

0 التعليقات: