Friday, 3 December 2021

ಜವಾದ್ ಚಂಡಮಾರುತ: ಒಡಿಶಾ ಕರಾವಳಿಯಲ್ಲಿ ಭಾರೀ ಮಳೆ, 19 ಜಿಲ್ಲೆಗಳಲ್ಲಿ ಶಾಲೆಗಳು ಬಂದ್

ಜವಾದ್ ಚಂಡಮಾರುತ:
ಒಡಿಶಾ ಕರಾವಳಿಯಲ್ಲಿ ಭಾರೀ ಮಳೆ, 19 ಜಿಲ್ಲೆಗಳಲ್ಲಿ ಶಾಲೆಗಳು ಬಂದ್

ಹೊಸದಿಲ್ಲಿ: ಜವಾದ್ ಚಂಡಮಾರುತವು ಕರಾವಳಿಯುದ್ದಕ್ಕೂ ಚಲಿಸುತ್ತಿದ್ದಂತೆ ಶನಿವಾರ ಬೆಳಗ್ಗೆ ಒಡಿಶಾದ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆ ಹಾಗೂ  ವೇಗದ ಗಾಳಿ ಬೀಸಿತು. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ ಕರಾವಳಿ ಆಂಧ್ರಪ್ರದೇಶ ಹಾಗೂ  ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ಇಂದು ಭಾರೀ ಮಳೆಯಾಗುವ ಮುನ್ಸೂಚನೆ ಇದೆ.

ರವಿವಾರ ಮಧ್ಯಾಹ್ನ ಪುರಿ ಸಮೀಪ ಭೂಕುಸಿತ ಉಂಟುಮಾಡುವ ನಿರೀಕ್ಷೆಯಿರುವ ಚಂಡಮಾರುತವು ಕ್ರಮೇಣ ದುರ್ಬಲಗೊಳ್ಳುವ ಸಾಧ್ಯತೆಯಿದೆ ಹಾಗೂ  ಮುಂದಿನ 12 ಗಂಟೆಗಳಲ್ಲಿ ಉತ್ತರದ ಕಡೆಗೆ ಚಲಿಸುವ ಸಾಧ್ಯತೆಯಿದೆ ಮತ್ತು ನಂತರ ಉತ್ತರ-ಈಶಾನ್ಯಕ್ಕೆ ಒಡಿಶಾ ಕರಾವಳಿಯುದ್ದಕ್ಕೂ ಡಿಸೆಂಬರ್ 5 ಮಧ್ಯಾಹ್ನದ ಸುಮಾರಿಗೆ ಡೀಪ್ ಡಿಪ್ರೆಶನ್ ಆಗಿ ಪುರಿ ಸಮೀಪ ತಲುಪುತ್ತದೆ.

ಭಾರೀ ಮಳೆಯಿಂದಾಗಿ ಒಡಿಶಾದ 19 ಜಿಲ್ಲೆಗಳಾದ್ಯಂತ ಶಾಲೆಗಳನ್ನು ಮುಚ್ಚಲಾಗುವುದು ಎಂದು ANI ವರದಿ ಮಾಡಿದೆ. ಏತನ್ಮಧ್ಯೆ, ಆಂಧ್ರಪ್ರದೇಶದಲ್ಲಿ, ಶ್ರೀಕಾಕುಳಂ, ವಿಜಯನಗರಂ ಹಾಗೂ  ವಿಶಾಖಪಟ್ಟಣಂ ಜಿಲ್ಲೆಗಳಿಂದ 54,008 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.SHARE THIS

Author:

0 التعليقات: