Sunday, 19 December 2021

ಚೀನಾದ 135 ವರ್ಷ ವಯಸ್ಸಿನ ಹಿರಿಯಜ್ಜಿ ಅಲಿಮಿಹಾನ್ ಸೆಯಿಟಿ ನಿಧನ

ಚೀನಾದ 135 ವರ್ಷ ವಯಸ್ಸಿನ ಹಿರಿಯಜ್ಜಿ ಅಲಿಮಿಹಾನ್ ಸೆಯಿಟಿ ನಿಧನ

ಬೀಜಿಂಗ್,ಡಿ.18: ಚೀನಾದ ಅತ್ಯಂತ ಹಿರಿಯ ವಯಸ್ಸಿನ ವ್ಯಕ್ತಿ ಎಂಬ ದಾಖಲೆಗೆ ಪಾತ್ರರಾಗಿದ್ದ 135 ವಯಸ್ಸಿನ ಮಹಿಳೆ ಅಲಿಮಿಹಾನ್ ಸೆಯಿಟಿ ಶನಿವಾರ ನಿಧನರಾಗಿದ್ದಾರೆ. ಉಯಿಘರ್ ಸ್ವಾಯತ್ತ ಪ್ರಾಂತದಲ್ಲಿರುವ ಕ್ಸಿನ್‌ಜಿಯಾಂಗ್‌ನಲ್ಲಿರುವ  ಸ್ವಗೃಹದಲ್ಲಿ ಆಕೆ ಕೊನೆಯುಸಿರೆಳೆದರೆಂದು ಸ್ಥಳೀಯ ಆಡಳಿತವು ತಿಳಿಸಿದೆ.

ಕಾಶಗರ್ ಪ್ರಸ್ಥಭೂಮಿಯ ಶುಲೆ ರಾಜ್ಯದಲ್ಲಿರುವ 1886ರ ಜೂನ್ 25ರಂದು ಅವರು ಜನಿಸಿದ್ದರು. 2013ರಲ್ಲಿ ಚೀನಾದ ವೃದ್ಧಾಪ್ಯ ಶಾಸ್ತ್ರ ಹಾಗೂ ವೈದ್ಧಾಪ್ಯ ರೋಗ ಚಿಕಿತ್ಸಾ ಶಾಸ್ತ್ರ ಸಂಘಟವು ಬಿಡುಗಡೆಗೊಳಿಸಿದ ಚೀನಾದ ಅತ್ಯಂತ ಹಿರಿಯ ವಯಸ್ಸಿನ ವ್ಯಕ್ತಿಗಳ ಪಟ್ಟಿಯಲ್ಲಿ ಅಲಿಮಿಹಾನ್ ಮೊದಲ ಸ್ಥಾನ ಪಡೆದಿದ್ದರು. ತನ್ನ ನಿಧನದವರೆಗೂ ಅಲಿಮಿನಾಹ್ ಅವರು ಅತ್ಯಂತ ಸರಳ ಜೀನ ನಡೆಸಿದ್ದರು. ಅವರು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುತ್ತಿದ್ದರು ಹಾಗೂ ತನ್ನ ಮನೆಯ ಹಿತ್ತಲಲ್ಲಿ ಸೂರ್ಯನ ಬಿಸಿಲಿಗೆ ಮೈಯೊಡ್ಡುತ್ತಿದ್ದರು. ಅಲಿಮಿನಾಹ್ ಅವರು ವಾಸವಾಗಿದ್ದ ಕೊಮುಕ್ಸೆರಿಕ್ ಪಟ್ಟಣವು ‘ದೀರ್ಘಾಯುಷಿಗಳ ಪಟ್ಟಣ’ವೆಂದೇ ಹೆಸರಾಗಿತ್ತು.

ಆರೋಗ್ಯ ಸೇವೆಗಳ ಸುಧಾರಣೆಯು ಕೂಡಾ ಈ ನಗರದ ನಿವಾಸಿಗಳ ದೀರ್ಘಾಯುಷ್ಯಕ್ಕೆ ಭಾಗಶಃ ಕೊಡುಗೆ ನೀಡಿದೆಯೆಂದು ವರದಿಯೊಂದುತಿಳಿಸಿದೆ.


 SHARE THIS

Author:

0 التعليقات: