Thursday, 9 December 2021

11 ಮಂದಿ ಸ್ಥಳೀಯರ ಕೈಗಳನ್ನು ಕಟ್ಟಿ, ಬೆಂಕಿಹಚ್ಚಿ ಸುಟ್ಟು ಕೊಂದ ಮ್ಯಾನ್ಮಾರ್‌ ಸೇನೆ

11 ಮಂದಿ ಸ್ಥಳೀಯರ ಕೈಗಳನ್ನು ಕಟ್ಟಿ, ಬೆಂಕಿಹಚ್ಚಿ ಸುಟ್ಟು ಕೊಂದ ಮ್ಯಾನ್ಮಾರ್‌ ಸೇನೆ

ಯಾಂಗಾನ್, ಡಿ.9: ಸೇನೆಯ ವಾಹನ ಸಾಲಿನ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ ಮ್ಯಾನ್ಮಾರ್ನ ಸೇನಾಪಡೆ 11 ಗ್ರಾಮಸ್ಥರನ್ನು ಜೀವಂತವಾಗಿ ಸುಟ್ಟುಹಾಕಿದೆ ಎಂದು ಪ್ರತ್ಯಕ್ಷದರ್ಶಿಗಳು ಹಾಗೂ ಮಾಧ್ಯಮಗಳು ವರದಿ ಮಾಡಿವೆ.

ವಾಯವ್ಯ ಪ್ರಾಂತದ ಡೋನ್ ತಾವ್  ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮಕ್ಕೆ ನುಗ್ಗಿದ ಸೇನಾ ಯೋಧರು, ಸ್ಥಳೀಯರನ್ನು ಸುತ್ತುವರಿದು ಅವರ ಕೈಗಳನ್ನು ಕಟ್ಟಿಹಾಕಿದರು. ಬಳಿಕ ಅವರಿಗೆ ಬೆಂಕಿಹಚ್ಚಿ ಸುಟ್ಟುಹಾಕಿದ್ದಾರೆ ಎಂದು ವರದಿಯಾಗಿದೆ. ಸುಟ್ಟು ಕರಕಲಾಗಿರುವ 11 ಮಂದಿಯ ಮೃತದೇಹವಿರುವ ವೀಡಿಯೊ ವೈರಲ್ ಆಗಿದ್ದು ಘಟನೆಯ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಘಟನೆಯನ್ನು ಖಂಡಿಸಿರುವ ಮಾನವ ಹಕ್ಕು ನಿಗಾ ಸಮಿತಿ, ಪ್ರತೀಕಾರ ಕ್ರಮಕ್ಕೆ ಆದೇಶ ನೀಡಿರುವ ಸೇನಾ ಕಮಾಂಡರ್‌ಗಳನ್ನು  ಉದ್ದೇಶಿತ ನಿರ್ಬಂಧಗಳ ಪಟ್ಟಿಗೆ ಸೇರಿಸುವಂತೆ ಮತ್ತು ಸೇನೆಗೆ ಯಾವುದೇ ರೀತಿಯ ನೆರವು ಒದಗಿಸದಂತೆ ಅಂತರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದೆ. ನಮಗೆ ದೊರಕಿದ ಮಾಹಿತಿಯಂತೆ, ಮೃತಪಟ್ಟವರು ತಪ್ಪು ಸಮಯದಲ್ಲಿ ತಪ್ಪು ಸ್ಥಳದಲ್ಲಿ ಸಿಕ್ಕಿಬಿದ್ದ ಎಳೆಯ ಪ್ರಾಯದ ಯುವಕ, ಯುವತಿಯರು. ಇಂತಹ ಹಲವು ಘಟನೆ ನಿರಂತರ ನಡೆಯುತ್ತಿದೆ. ಆದರೆ ಈ ಘಟನೆಯ ಬಗ್ಗೆ ವೀಡಿಯೊ ಸಾಕ್ಷ್ಯ ದೊರಕಿದೆ. ಇದು ನಾಚಿಕೆಗೆಟ್ಟ ವಿಷಯ ಎಂದು ಮಾನವಹಕ್ಕು ನಿಗಾ ಸಮಿತಿಯ ವಕ್ತಾರೆ ಮ್ಯಾನಿ ಮೌಂಗ್ ಪ್ರತಿಕ್ರಿಯಿಸಿದ್ದಾರೆ.

ಡೋನ್ ತಾವ್ ಗ್ರಾಮದಲ್ಲಿ ಸಾಗುತ್ತಿದ್ದ ಸೇನೆಯ ವಾಹನದ ಮೇಲೆ ಬಾಂಬ್ ದಾಳಿ ನಡೆದಿದ್ದು ಇದಕ್ಕೆ ಪ್ರತಿಯಾಗಿ ಸೇನೆ ನಾಗರಿಕರ ಮೇಲೆ ದಾಳಿ ನಡೆಸಿದೆ ಎಂದು ಮ್ಯಾನ್ಮಾರ್ನ ಭೂಗತ ನ್ಯಾಷನಲ್ ಯೂನಿಟಿ ಸರಕಾರ ಖಂಡಿಸಿದೆ.


ಆದರೆ ಯೋಧರು ಈ ಕೃತ್ಯ ನಡೆಸಿಲ್ಲ ಎಂದು ಸರಕಾರ ಹೇಳಿದೆ.SHARE THIS

Author:

0 التعليقات: