Saturday, 4 December 2021

ಭದ್ರತಾ ಪಡೆಯ ಗುಂಡಿನ ದಾಳಿಗೆ ಕನಿಷ್ಠ 11 ಮಂದಿ ಗ್ರಾಮಸ್ಥರು ಬಲಿ ದಂಗೆಕೋರರೆಂದು 'ತಪ್ಪಾಗಿ ಭಾವಿಸಿ' ಫೈರಿಂಗ್

ಭದ್ರತಾ ಪಡೆಯ ಗುಂಡಿನ ದಾಳಿಗೆ ಕನಿಷ್ಠ 11 ಮಂದಿ ಗ್ರಾಮಸ್ಥರು ಬಲಿ       ದಂಗೆಕೋರರೆಂದು 'ತಪ್ಪಾಗಿ ಭಾವಿಸಿ' ಫೈರಿಂಗ್

ಹೊಸದಿಲ್ಲಿ: ಮ್ಯಾನ್ಮಾರ್‌ನ ಗಡಿಗೆ ಹೊಂದಿಕೊಂಡಿರುವ ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯ ಓಟಿಂಗ್ ಗ್ರಾಮದಲ್ಲಿ ಇಂದು ಕನಿಷ್ಠ 11 ಮಂದಿ  ಗ್ರಾಮಸ್ಥರನ್ನು ದಂಗೆಕರೋರರೆಂದು 'ತಪ್ಪಾಗಿ ಭಾವಿಸಿ'  ಹತ್ಯೆಗೈಯ್ಯಲಾಗಿದ್ದು, ಘಟನೆಯಲ್ಲಿ ಓರ್ವ ಭದ್ರತಾ ಪಡೆಯ ಯೋಧ ಕೂಡ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ, ಶಾಂತವಾಗಿರಲು ಮನವಿ ಮಾಡಿದ್ದು, ರಾಜ್ಯದಲ್ಲಿ 'ನಾಗರಿಕರ ಹತ್ಯೆಗೆ' ಕಾರಣವಾದ 'ದುರದೃಷ್ಟಕರ ಘಟನೆ' ಕುರಿತು ಇಂದು ಬೆಳಿಗ್ಗೆ ಟ್ವೀಟ್ ಮಾಡಿದ್ದಾರೆ. ಉನ್ನತ ಮಟ್ಟದ ವಿಶೇಷ ತನಿಖಾ ತಂಡ ತನಿಖೆ ನಡೆಸಲಿದೆ ಎಂದು ಮುಖ್ಯಮಂತ್ರಿ ಹೇಳಿದರು.

"ಮೋನ್ ಜಿಲ್ಲೆಯ  ಓಟಿಂಗ್‌ನಲ್ಲಿ ನಾಗರಿಕರ ಹತ್ಯೆಗೆ ಕಾರಣವಾದ ದುರದೃಷ್ಟಕರ ಘಟನೆಯು  ಅತ್ಯಂತ ಖಂಡನೀಯ. ದುಃಖಿತ ಕುಟುಂಬಗಳಿಗೆ ಸಂತಾಪ ಹಾಗೂ  ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ. ಉನ್ನತ ಮಟ್ಟದ ಎಸ್‌ಐಟಿ ಘಟನೆಯ ತನಿಖೆ ನಡೆಸುತ್ತದೆ ಹಾಗೂ  ನೆಲದ ಕಾನೂನಿನ ಪ್ರಕಾರ ನ್ಯಾಯವನ್ನು ನೀಡುತ್ತದೆ. ಎಲ್ಲಾ ವಿಭಾಗಗಳಿಂದ ಶಾಂತಿಗಾಗಿ ಮನವಿ ಮಾಡುತ್ತೇನೆ”ಎಂದು ಮುಖ್ಯಮಂತ್ರಿ ರಿಯೊ ಟ್ವೀಟ್ ಮಾಡಿದ್ದಾರೆ.

ಸುಳಿವಿನ ಮೇರೆಗೆ ಭದ್ರತಾ ಪಡೆಗಳು ತಿರು-ಓಟಿಂಗ್ ರಸ್ತೆಯಲ್ಲಿ ಹೊಂಚುದಾಳಿ ನಡೆಸಲು ಯೋಜಿಸಿದ್ದರು. ಆದರೆ ಗ್ರಾಮಸ್ಥರನ್ನು ದಂಗೆಕೋರರು ಎಂದು ತಪ್ಪಾಗಿ ಭಾವಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಗುಂಡಿನ ದಾಳಿಯಲ್ಲಿ ಗ್ರಾಮಸ್ಥರು ಸಾವನ್ನಪ್ಪುತ್ತಿದ್ದಂತೆ ಸ್ಥಳೀಯರು ಆಕ್ರೋಶಗೊಂಡು ಗುಂಪು ಸೇರಿ ಭದ್ರತಾ ಪಡೆಗಳನ್ನು ಸುತ್ತುವರೆದರು. ಪಡೆಗಳು 'ಆತ್ಮ ರಕ್ಷಣೆ'ಗಾಗಿ ಜನಸಮೂಹದ ಮೇಲೆ ಗುಂಡು ಹಾರಿಸಬೇಕಾಯಿತು ಮತ್ತು ಹಲವಾರು ಗ್ರಾಮಸ್ಥರು ಗುಂಡಿನ ದಾಳಿ ನಡೆಸಿದರು. ಕೆಲವು ಭದ್ರತಾ ವಾಹನಗಳಿಗೂ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.SHARE THIS

Author:

0 التعليقات: