Sunday, 12 December 2021

ಏಷ್ಯನ್ ರೋಯಿಂಗ್ ಚಾಂಪಿಯನ್‌ಶಿಪ್:ಅಂತಿಮ ದಿನ 1 ಚಿನ್ನ, 3 ಬೆಳ್ಳಿ ಪದಕ ಗೆದ್ದ ಭಾರತದ ರೋವರ್ಸ್ ಗಳು

Photo: Twitter/SAI

ಏಷ್ಯನ್ ರೋಯಿಂಗ್ ಚಾಂಪಿಯನ್‌ಶಿಪ್:ಅಂತಿಮ ದಿನ 1 ಚಿನ್ನ, 3 ಬೆಳ್ಳಿ ಪದಕ ಗೆದ್ದ ಭಾರತದ ರೋವರ್ಸ್ ಗಳು

ಹೊಸದಿಲ್ಲಿ: ಹಿರಿಯ ರೋವರ್ ಅರವಿಂದ್ ಸಿಂಗ್ ಲೈಟ್ ವೇಟ್ ಪುರುಷರ ಸಿಂಗಲ್ಸ್ ಸ್ಕಲ್ಸ್‌ನಲ್ಲಿ ಚಿನ್ನ ಗೆದ್ದುಕೊಂಡರು.  2 ಚಿನ್ನ ಹಾಗೂ  4 ಬೆಳ್ಳಿ ಪದಕಗಳೊಂದಿಗೆ ಭಾರತವು ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಯಶಸ್ವಿಯಾಗಿ ಕೊನೆಗೊಳಿಸಿದೆ.

ಹಿರಿಯ ರೋವರ್‌ ಅರವಿಂದ್‌ ಸಿಂಗ್‌ ಅವರು ಲೈಟ್‌ವೇಟ್‌ ಪುರುಷರ ಸಿಂಗಲ್ಸ್‌ ಸ್ಕಲ್ಸ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದರೆ, ಅವರ ಸಹಪಾಠಿಗಳು ಮೂರು ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿದ್ದಾರೆ.

 ಅರವಿಂದ್ 7:55.942 ಸೆಕೆಂಡ್‌ಗಳಲ್ಲಿ ತಮ್ಮ ಎದುರಾಳಿಗಳನ್ನು ಹಿಮ್ಮೆಟ್ಟಿಸಿದರು. ಅರವಿಂದ್ ಅವರು ಅರ್ಜುನ್ ಲಾಲ್ ಜಾಟ್ ಅವರೊಂದಿಗೆ ಪುರುಷರ ಲೈಟ್‌ವೇಟ್ ಡಬಲ್ ಸ್ಕಲ್ಸ್‌ನಲ್ಲಿ  ಉಜ್ಬೇಕಿಸ್ತಾನ್, ಚೀನಾ, ವಿಯೆಟ್ನಾಂ, ಇಂಡೋನೇಷ್ಯಾ ಹಾಗೂ  ಥಾಯ್ಲೆಂಡ್‌ನ ಪ್ರತಿಸ್ಪರ್ಧಿಗಳನ್ನು ಸೋಲಿಸಿದರು. ಪುರುಷರ ಲೈಟ್‌ವೇಟ್ ಡಬಲ್ ಸ್ಕಲ್ಸ್, ಪುರುಷರ ಕ್ವಾಡ್ರುಪಲ್ ಸ್ಕಲ್ಸ್ ಹಾಗೂ  ಪುರುಷರ ಕಾಕ್ಸ್‌ಲೆಸ್ ನಾಲ್ಕು ಈವೆಂಟ್‌ಗಳಲ್ಲಿ ಭಾರತ ಇನ್ನೂ ಮೂರು ಬೆಳ್ಳಿ ಪದಕಗಳೊಂದಿಗೆ ಚಾಂಪಿಯನ್‌ಶಿಪ್‌ಗೆ ತೆರೆ ಎಳೆದಿದೆ.

ಒಟ್ಟಾರೆಯಾಗಿ, ಭಾರತವು ಕಾಂಟಿನೆಂಟಲ್ ಈವೆಂಟ್‌ನಿಂದ ಎರಡು ಚಿನ್ನ ಮತ್ತು ನಾಲ್ಕು ಬೆಳ್ಳಿ ಪದಕಗಳೊಂದಿಗೆ ಮರಳಿದೆ.


SHARE THIS

Author:

0 التعليقات: