Friday, 31 December 2021

ಜಮ್ಮು ವೈಷ್ಣೋದೇವಿ ದೇಗುಲದಲ್ಲಿ ಕಾಲ್ತುಳಿತ: ಮೃತಪಟ್ಟವರ ಸಂಖ್ಯೆ 12ಕ್ಕೇರಿಕೆ

ಜಮ್ಮು ವೈಷ್ಣೋದೇವಿ ದೇಗುಲದಲ್ಲಿ ಕಾಲ್ತುಳಿತ: ಮೃತಪಟ್ಟವರ ಸಂಖ್ಯೆ 12ಕ್ಕೇರಿಕೆ

ಜಮ್ಮು ವೈಷ್ಣೋದೇವಿ ದೇಗುಲದಲ್ಲಿ ಕಾಲ್ತುಳಿತ: ಮೃತಪಟ್ಟವರ ಸಂಖ್ಯೆ 12ಕ್ಕೇರಿಕೆ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಮಾತಾ ವೈಷ್ಣೋದೇವಿ ದೇಗುಲದಲ್ಲಿ ಶನಿವಾರ ಮುಂಜಾನೆ ನೂಕುನುಗ್ಗಲು ಉಂಟಾಗಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಖೆ 12 ಕ್ಕೇರಿದ್ದು,  ಹನ್ನೆರಡು ಮಂದಿ ಗಾಯಗೊಂಡಿದ್ದಾರೆ.

ಭಕ್ತಾದಿಗಳ ನೂಕುನುಗ್ಗಲಿನಿಂದಾಗಿ ಕಾಲ್ತುಳಿತ ಉಂಟಾಗಿದೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ದುರಂತ ಪರಿಸ್ಥಿತಿಯನ್ನು "ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ" ಎಂದು ಅವರ ಕಚೇರಿಯ ಸಚಿವರೊಬ್ಬರು ತಿಳಿಸಿದ್ದಾರೆ.

ಕಾಲ್ತುಳಿತದಲ್ಲಿ 12 ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ ಹಾಗೂ  ಕನಿಷ್ಠ 14 ಮಂದಿ ಗಾಯಗೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಥವಾ ಎಡಿಜಿಪಿ ಮುಖೇಶ್ ಸಿಂಗ್ ಖಚಿತಪಡಿಸಿದ್ದಾರೆ. ಎಲ್ಲಾ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ತ್ರಿಕೂಟ ಬೆಟ್ಟದ ಗರ್ಭಗುಡಿಯ ಹೊರಭಾಗದಲ್ಲಿ ಈ ಘಟನೆ ನಡೆದಿದೆ. ಕಾಲ್ತುಳಿತದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೇಳಿದ್ದಾರೆ.

ಹೊಸ ವರ್ಷದ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ವೈಷ್ಣೋದೇವಿ ಭವನವನ್ನು ಪ್ರವೇಶಿಸಿದಾಗ ನೂಕುನುಗ್ಗಲು ಉಂಟಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಮಂತ್ರಿಗಳ ಕಾರ್ಯಾಲಯವು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ ರೂ. 2 ಲಕ್ಷ ಮೊತ್ತವನ್ನು ಘೋಷಿಸಿತು. ಮಾತಾ ವೈಷ್ಣೋದೇವಿ ಭವನದಲ್ಲಿ ಕಾಲ್ತುಳಿತದಿಂದ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಈ ಮೊತ್ತವನ್ನು ನೀಡಲಾಗುವುದು. ಗಾಯಾಳುಗಳಿಗೆ ರೂ. 50,000 ನೀಡಲಾಗುವುದು ಎಂದು ಪ್ರಧಾನಿ ಕಚೇರಿ ತಿಳಿಸಿದೆ.

10 ಲಕ್ಷ ರೂ.ಪರಿಹಾರ ಘೋಷಿಸಿದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ

“ವೈಷ್ಣೋದೇವಿ ದೇಗುಲದಲ್ಲಿ ಸಂಭವಿಸಿದ ಕಾಲ್ತುಳಿತದಿಂದ ಪ್ರಾಣ ಕಳೆದುಕೊಂಡವರ ಸಂಬಂಧಿಕರಿಗೆ ತಲಾ 10 ಲಕ್ಷ ರೂಪಾಯಿಗಳನ್ನು ಹಾಗೂ  ಗಾಯಗೊಂಡವರಿಗೆ 2 ಲಕ್ಷ ರೂ.ಗಳನ್ನು ನೀಡಲಾಗುವುದು ಎಂದು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್  ಮನೋಜ್ ಸಿನ್ಹಾ ಅವರು ಘೋಷಿಸಿದ್ದಾರೆ. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ದೇಗುಲದ ಆಡಳಿತ ಮಂಡಳಿ ಭರಿಸಲಿದೆ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.


ದೆಹಲಿ: ಕೋವಿಡ್ ಸೋಂಕು ಏಳು ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ

ದೆಹಲಿ: ಕೋವಿಡ್ ಸೋಂಕು ಏಳು ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ

ದೆಹಲಿ: ಕೋವಿಡ್ ಸೋಂಕು ಏಳು ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ

ಹೊಸದಿಲ್ಲಿ: ಹೊಸ ವರ್ಷದ ಆರಂಭದ ಮುನ್ನಾ ದಿನವಾದ ಶುಕ್ರವಾರ ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, 1796 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದು ಗುರುವಾರದ ಸಂಖ್ಯೆಗೆ (1313) ಹೋಲಿಸಿದರೆ ಶೇಕಡ 36ರಷ್ಟು ಅಧಿಕ. ಒಮೈಕ್ರಾನ್ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಈ ಏರಿಕೆ ಪ್ರವೃತ್ತಿ ಕಂಡುಬಂದಿದೆ.

ದೆಹಲಿಯಲ್ಲಿ ಒಂದೇ ದಿನ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸೋಂಕು ಏರಿಕೆಯಾಗಿರುವುದು ಏಳು ತಿಂಗಳಲ್ಲಿ ಇದೇ ಮೊದಲು. ಹೊಸ ಪ್ರಬೇಧದ ವೈರಸ್ ಸೋಂಕು ನಿಧಾನವಾಗಿ ಸಮುದಾಯಕ್ಕೆ ಹರಡುತ್ತಿದ್ದು, ದೆಹಲಿಯಲ್ಲಿ ವಿಶ್ಲೇಷಣೆಗೆ ಗುರಿಪಡಿಸಿದ ಪ್ರಕರಣಗಳ ಪೈಕಿ ಶೇಕಡ 54ರಷ್ಟು ಪ್ರಕರಣಗಳು ಹೊಸ ಪ್ರಬೇಧಕ್ಕೆ ಸೇರಿದವು ಎಂದು ರಾಜ್ಯದ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಪ್ರಕಟಿಸಿದ್ದಾರೆ.

ಈ ಬೆಳವಣಿಗೆಗಳ ಬೆನ್ನಲ್ಲೇ ರಾಷ್ಟ್ರ ರಾಜಧಾನಿಯಲ್ಲಿ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದ್ದು, ಹೊಸ ವರ್ಷದ ಶುಭಾಶಯ ವಿನಿಮಯ ಸೇರಿದಂತೆ ಎಲ್ಲ ಸಭೆ ಸಮಾರಂಭಗಳನ್ನು ರದ್ದುಪಡಿಸಲಾಗಿದೆ. ಶಾಲೆ ಮತ್ತು ಸಿನಿಮಾ ಮಂದಿರಗಳನ್ನು ಮುಚ್ಚಲಾಗಿದ್ದು, ಎಲ್ಲೆಡೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದೆಹಲಿಯಲ್ಲಿ ಧನಾತ್ಮಕತೆ ದರ ಈಗಾಗಲೇ 2.44ನ್ನು ತಲುಪಿದೆ.

ಅಂತರರಾಷ್ಟ್ರೀಯ ವಿಮಾನಗಳಿಂದಾಗಿ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ ಎಂದು ಆರೋಗ್ಯ ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಹಿಂದಿನ ಅಲೆಗಳ ಸಂದರ್ಭದಲ್ಲಿ ಕೂಡಾ ಒಳಬರುವ ವಿಮಾನಗಳ ಮೂಲಕ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿದ್ದವು. ಹಲವು ಮಂದಿಯ ತಪಾಸಣೆ ನಡೆಸಿದಾಗ ವಿಮಾನ ನಿಲ್ದಾಣಗಳಲ್ಲಿ ನೆಗೆಟಿವ್ ಬಂದ ತಕ್ಷಣ ಅವರನ್ನು ಮನೆಗಳಿಗೆ ಹೋಗಲು ಅವಕಾಶ ನೀಡಲಾಗುತ್ತದೆ. ಮನೆಗೆ ತಲುಪಿದ ಬಳಿಕ ಅವರನ್ನು ಪರೀಕ್ಷೆಗೆ ಗುರಿಡಿಸಿದಾಗ ಪಾಸಿಟಿವ್ ಪತ್ತೆಯಾಗಿದೆ. ಈ ಹಂತದಲ್ಲಿ ಅವರು ಕುಟಂಬ ಸದಸ್ಯರಿಗೆ ಸೋಂಕು ಹರಡಿರುತ್ತಾರೆ ಎಂದು ವಿಶ್ಲೇಷಿಸಿದ್ದಾರೆ.

ಕಳೆದ ವಾರದ ವರೆಗೂ ವಾರಕ್ಕೆ ಕೇವಲ 100-200 ಪ್ರಕರಣಗಳು ಮಾತ್ರ ದೆಹಲಿಯಲ್ಲಿ ವರದಿಯಾಗಿತ್ತು. ಕಳೆದ ಕೆಲ ದಿನಗಳಿಂದ ದಿಢೀರ್ ಏರಿಕೆಯಾಗಿದ್ದು, ಗುರುವಾರ ಸೋಂಕಿತರ ಸಂಖ್ಯೆ 1000ದ ಗಡಿ ದಾಟಿತ್ತು.

ಮುಂಬೈನಲ್ಲಿ 5428 ಹೊಸ ಪ್ರಕರಣಗಳು ವರದಿಯಾಗಿದ್ದು, ದೇಶಾದ್ಯಂತ 1200ಕ್ಕೂ ಹೆಚ್ಚು ಒಮೈಕ್ರಾನ್ ಪ್ರಕರಣಗಳು ದೃಢಪಟ್ಟಿವೆ.


ಭತ್ತದ ಕೊಯ್ಲು ಮುಗಿಸಿ ಬರುತ್ತಿದ್ದ ಆರು ಮಂದಿ ದುರ್ಮರಣ

ಭತ್ತದ ಕೊಯ್ಲು ಮುಗಿಸಿ ಬರುತ್ತಿದ್ದ ಆರು ಮಂದಿ ದುರ್ಮರಣ

ಭತ್ತದ ಕೊಯ್ಲು ಮುಗಿಸಿ ಬರುತ್ತಿದ್ದ ಆರು ಮಂದಿ ದುರ್ಮರಣ

ಬಿಹಾರ್‌: ಹೊಸ ವರ್ಷದ ಹೊಸ್ತಿನಲ್ಲಿ ಇರುವಾಗಲೇ ನಿನ್ನೆ ಮಧ್ಯರಾತ್ರಿ ಭೀಕರ ಅಪಘಾತವೊಂದು ನಡೆದಿದ್ದು, ಆರು ಮಂದಿ ಕೂಲಿ ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಔರಂಗಾಬಾದ್‌ನ ಹರಿಹರಗಂಜ್​​ನ ರಾಷ್ಟ್ರೀಯ ಹೆದ್ದಾರಿ 98ರಲ್ಲಿ ಈ ಅಪಘಾತ ಸಂಭವಿಸಿದೆ.

ಒಬ್ರಾ ಪೊಲೀಸ್ ಠಾಣಾ ಪ್ರದೇಶದಲ್ಲಿ ಎರಡು ಪಿಕಪ್​ ವ್ಯಾನ್​​ಗಳಲ್ಲಿ ಕಾರ್ಮಿಕರು ಬರುತ್ತಿದ್ದರು. ಈ ಸಂದರ್ಭದಲ್ಲಿ ಹರಿಹರಗಂಜ್​​​ ಬಳಿ ನಿಯಂತ್ರಣ ತಪ್ಪಿದ ಟ್ರಕ್​ವೊಂದು ಪಿಕಪ್​ ವ್ಯಾನ್​ಗೆ​​ ಡಿಕ್ಕಿ ಹೊಡೆದು, ಪಲ್ಟಿಯಾಗಿದೆ. ಈ ಅವಘಡದಲ್ಲಿ ವ್ಯಾನ್‌ನಲ್ಲಿದ್ದ ಆರು ಮಂದಿ ಮೃತಪಟ್ಟಿದ್ದಾರೆ.

ಇವರೆಲ್ಲರೂ ಶಿಹುಡಿ ಗ್ರಾಮದಲ್ಲಿ ಭತ್ತದ ಕೊಯ್ಲು ಮುಗಿಸಿ ಮನೆಗೆ ವಾಪಸಾಗುತ್ತಿದ್ದ ಕಾರ್ಮಿಕರು ಎಂದು ಪೊಲೀಸರು ಹೇಳಿದ್ದಾರೆ. ಗಾಯಗೊಂಡವರನ್ನು ಮೇದಿನಿರೈ ವೈದ್ಯಕೀಯ ಕಾಲೇಜ್​​ ಮತ್ತು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೃತಪಟ್ಟವರನ್ನು ಕಲೋಕುಮಾರಿ, ರೀಟಾ, ಬಸಂತಿ, ನೀಲಂ, ಅಪರ್ಣಾ, ಕಮಲೇಶ್​ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.


ವಿಶ್ವದ ಜನಸಂಖ್ಯೆಯಲ್ಲಿ 74 ಮಿಲಿಯನ್ ಹೆಚ್ಚಳ

ವಿಶ್ವದ ಜನಸಂಖ್ಯೆಯಲ್ಲಿ 74 ಮಿಲಿಯನ್ ಹೆಚ್ಚಳ


ವಿಶ್ವದ ಜನಸಂಖ್ಯೆಯಲ್ಲಿ 74 ಮಿಲಿಯನ್ ಹೆಚ್ಚಳ

ವಾಷಿಂಗ್ಟನ್, ಡಿ.31: ವಿಶ್ವದ ಜನಸಂಖ್ಯೆ ಕಳೆದ ವರ್ಷಕ್ಕಿಂತ 74 ಮಿಲಿಯನ್ ಹೆಚ್ಚಿದ್ದು ಹೊಸ ವರ್ಷದ ಆರಂಭದ ದಿನ(2022 ಜನವರಿ 1ರಂದು) ವಿಶ್ವದ ಜನಸಂಖ್ಯೆಯ ಪ್ರಮಾಣ 7.8 ಬಿಲಿಯನ್ ಎಂದು ಅಂದಾಜಿಸಿರುವುದಾಗಿ ಅಮೆರಿಕದ ಜನಗಣತಿ ಇಲಾಖೆ ಹೇಳಿದೆ.

2021ರ ಜನವರಿ 1ಕ್ಕೆ ಹೋಲಿಸಿದರೆ ಇದು ಶೇ.0.9% ಅಥವಾ 74 ಮಿಲಿಯನ್ ಹೆಚ್ಚಳವಾಗಿದೆ. ಹೊಸ ವರ್ಷದ ಆರಂಭದಿಂದ ವಿಶ್ವದಾದ್ಯಂತ ಪ್ರತೀ ಸೆಕೆಂಡಿಗೆ 4.3 ಜನನ, 2 ಮರಣ ಸಂಭವಿಸುವುದೆಂದು ಅಂದಾಜಿಸಲಾಗಿದೆ ಎಂದು ಜನಗಣತಿ ಇಲಾಖೆ ಹೇಳಿದೆ.

ಈ ಮಧ್ಯೆ, ಕಳೆದ ವರ್ಷಕ್ಕೆ ಹೋಲಿಸಿದರೆ ಅಮೆರಿಕದ ಜನಸಂಖ್ಯೆಗೆ 7,07,000 ಹೆಚ್ಚುವರಿ ಸೇರ್ಪಡೆಯಾಗಿದೆ. 2022ರ ಜನವರಿ 1ರಂದು ಅಮೆರಿಕದ ಜನಸಂಖ್ಯೆ ಕಳೆದ ವರ್ಷದಿಂದ ಶೇ.0.2 ಅಭಿವೃದ್ಧಿ ಹೊಂದಿದೆ . ಹೊಸ ವರ್ಷದ ಆರಂಭದಿಂದ ಅಮೆರಿಕದಲ್ಲಿ ಪ್ರತೀ 9 ಸೆಕೆಂಡಿಗೆ ಒಂದು ಜನನ, ಪ್ರತೀ 11 ಸೆಕೆಂಡಿಗೆ 1 ಮರಣ ಪ್ರಕರಣ ದಾಖಲಾಗಲಿದೆ. ಜೊತೆಗೆ, ಅಂತರಾಷ್ಟ್ರೀಯ ವಲಸೆ ಪ್ರಕ್ರಿಯೆಯಿಂದ ಪ್ರತೀ 130 ಸೆಕೆಂಡ್‌ಗೆ ಹೆಚ್ಚುವರಿ ವ್ಯಕ್ತಿಯ ಸೇರ್ಪಡೆಯಾಗಲಿದೆ ಎಂದು ವರದಿ ಹೇಳಿದೆ.


ಅಡುಗೆ ಎಣ್ಣೆ ಬೆಲೆ 30-40 ರೂ ಇಳಿಕೆ, ದರ ನಿಗಾ ವಹಿಸುವಂತೆ ರಾಜ್ಯಗಳಿಗೆ ಕೇಂದ್ರ ಸೂಚನೆ

ಅಡುಗೆ ಎಣ್ಣೆ ಬೆಲೆ 30-40 ರೂ ಇಳಿಕೆ, ದರ ನಿಗಾ ವಹಿಸುವಂತೆ ರಾಜ್ಯಗಳಿಗೆ ಕೇಂದ್ರ ಸೂಚನೆ


ಅಡುಗೆ ಎಣ್ಣೆ ಬೆಲೆ 30-40 ರೂ ಇಳಿಕೆ, ದರ ನಿಗಾ ವಹಿಸುವಂತೆ ರಾಜ್ಯಗಳಿಗೆ ಕೇಂದ್ರ ಸೂಚನೆ

ಅಡುಗೆ ಎಣ್ಣೆ ಬೆಲೆ 30-40 ರೂ.ಗಳಷ್ಟು ಕಡಿಮೆಯಾದ ನಂತರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಕಾರ್ಯದರ್ಶಿ ಡಾ. ಸುಧಾಂಶು ಪಾಂಡೆ ಅವರು ತಮ್ಮ ರಾಜ್ಯಗಳಲ್ಲಿ ಸರಿಯಾದ MRP ದರದಲ್ಲಿ ಮಾರಾಟ ಮಾಡಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದ್ದಾರೆ.

ಸರ್ಕಾರವು ಅಡುಗೆ ಎಣ್ಣೆಯ ಆಮದು ಸುಂಕವನ್ನು ಬಹುತೇಕ ಶೂನ್ಯಕ್ಕೆ ಇಳಿಸಿದೆ. ಇದರಿಂದ ತೈಲ ಬೆಲೆಯಲ್ಲಿ ಶೇ.15ರಿಂದ ಶೇ.20ರಷ್ಟು ಇಳಿಕೆಯಾಗಿದೆ. ಎಲ್ಲಾ ಪ್ರಮುಖ ಖಾದ್ಯ ತೈಲ ಬ್ರಾಂಡ್‌ಗಳು 30-40 ರೂಪಾಯಿ ಕಡಿತಗೊಳಿಸಿವೆ. ಉದಾಹರಣೆಗೆ, ರುಚಿ ಸೋಯಾ ಇಂಡಸ್ಟ್ರೀಸ್ ಸೋಯಾಬೀನ್ ಎಣ್ಣೆಯ ಚಿಲ್ಲರೆ ಬೆಲೆಯನ್ನು ಲೀಟರ್‌ಗೆ 30 ರೂ ಕಡಿಮೆ ಮಾಡಿವೆ. 1 ಲೀಟರ್‌ಗೆ 152 ರೂ ಗೆ ಮಾರಾಟ ಮಾಡಲಾಗುತ್ತಿದೆ.

ಅದಾನಿ ವಿಲ್ಮಾರ್ ಫಾರ್ಚೂನ್ ಸೋಯಾ ಎಣ್ಣೆಯ ಚಿಲ್ಲರೆ ಬೆಲೆ ಲೀಟರ್‌ಗೆ 155 ರೂ ಇದೆ. . 30-40 ರೂ ಕಡಿತಗೊಳಿಸಿದ ನಂತರ, ರಾಜ್ಯ ಸರ್ಕಾರಗಳು ತಮ್ಮ ರಾಜ್ಯಗಳಲ್ಲಿ MRP ದರದ ಮಾರಾಟವನ್ನು ಖಚಿತಪಡಿಸಿಕೊಳ್ಳಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಪಾಂಡೆ ಹೇಳಿದರು.


ವೈಷ್ಣೋದೇವಿಯಲ್ಲಿ ಕಾಲ್ತುಳಿತ: ಆರು ಮಂದಿ ಮೃತ್ಯು

ವೈಷ್ಣೋದೇವಿಯಲ್ಲಿ ಕಾಲ್ತುಳಿತ: ಆರು ಮಂದಿ ಮೃತ್ಯು


ವೈಷ್ಣೋದೇವಿಯಲ್ಲಿ ಕಾಲ್ತುಳಿತ: ಆರು ಮಂದಿ ಮೃತ್ಯು

ಶ್ರೀನಗರ: ಜಮ್ಮು ಕಾಶ್ಮೀರದ ಪ್ರಸಿದ್ಧ ಯಾತ್ರಾಸ್ಥಳವಾದ ಮಾತಾ ವೈಷ್ಣೋದೇವಿ ಭವನದಲ್ಲಿ ಶನಿವಾರ ಮುಂಜಾನೆ ಕಾಲ್ತುಳಿತದ ಘಟನೆ ನಡೆದಿದ್ದು, ಘಟನೆಯಲ್ಲಿ ಆರು ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.

ಘಟನೆ ಹಿನ್ನೆಲೆಯಲ್ಲಿ ಮಂದಿರಕ್ಕೆ ಭೇಟಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಮಧ್ಯರಾತ್ರಿಯ ಬಳಿಕ ನೂಕುನುಗ್ಗಲಿನಿಂದಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಹೇಳಲಾಗಿದೆ. ಹಿರಿಯ ಅಧಿಕಾರಿಗಳು ಹಾಗೂ ಮಂದಿರದ ಮಂಡಳಿ ಪ್ರತಿನಿಧಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಗಾಯಾಳುಗಳನ್ನು ಮಾತಾ ವೈಷ್ಣೋದೇವಿ ನಾರಾಯಣ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಸಾವಿನ ಬಗ್ಗೆ ವಿವರ ನೀಡಿದ ಕಟ್ರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಡಾ.ಗೋಪಾಲ್ ದತ್, ಇದುವರೆಗೆ ಆರು ಮಂತ್ರಿ ಯಾತ್ರಿಗಳು ಮೃತಪಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ನಿಖರವಾದ ಸಂಖ್ಯೆ ಇನ್ನೂ ತಿಳಿದಿಲ್ಲ. ಆರು ಮಂದಿಯ ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಗಾಯಗೊಂಡವರ ನಿಖರ ಸಂಖ್ಯೆಯೂ ಇನ್ನೂ ತಿಳಿದಿಲ್ಲ ಎಂದಿದ್ದಾರೆ.

ಕಟ್ರಾದಲ್ಲಿರುವ ಮಾತಾ ವೈಷ್ಣೋದೇವಿ ಭವನದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ದೃಢಪಡಿಸಿದ್ದಾಗಿ ಎಎನ್‌ಐ ವರದಿ ಮಾಡಿದೆ. ಪೊಲೀಸರು ಪರಿಹಾರ ಕಾರ್ಯಾಚರಣೆ ಆರಂಭಿಸಿದ್ದಾರೆ. ಕಾಲ್ತುಳಿತಕ್ಕೆ ನಿರ್ದಿಷ್ಟ ಕಾರಣ ಏನು ಎನ್ನುವುದು ಇನ್ನೂ ತಿಳಿದು ಬಂದಿಲ್ಲ.

ಹೊಸ ವರ್ಷದ ಮೊದಲ ದಿನ ಈ ಪವಿತ್ರ ಮಂದಿರದಲ್ಲಿ ವೈಷ್ಣೋದೇವಿ ದರ್ಶನಕ್ಕಾಗಿ ಆಗಮಿಸಿದ್ದರಿಂದ ನೂಕುನುಗ್ಗಲು ಉಂಟಾಯಿತು ಎಂದು ಲೈವ್‌ ಹಿಂದೂಸ್ತಾನ್ ವರದಿ ಮಾಡಿದೆ. ಈ ಗುಹಾಮಂದಿರ ಕಟ್ರಾದ ತ್ರಿಕೂಟ ಬೆಟ್ಟದ ತುದಿಯಲ್ಲಿದೆ.


   ಕೊಪ್ಪ: ಬಜರಂಗದಳದ ಮುಖಂಡನಿಂದ ಕ್ರೈಸ್ತ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್; ದೂರು

ಕೊಪ್ಪ: ಬಜರಂಗದಳದ ಮುಖಂಡನಿಂದ ಕ್ರೈಸ್ತ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್; ದೂರು

 ಕೊಪ್ಪ: ಬಜರಂಗದಳದ ಮುಖಂಡನಿಂದ ಕ್ರೈಸ್ತ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್; ದೂರು

ಚಿಕ್ಕಮಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಕ್ರೈಸ್ತ ಸಮುದಾಯದವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುವಂತಹ ಪೋಸ್ಟ್ ಗಳನ್ನು ಹರಿಯಬಿಟ್ಟಿರುವ ತಾಲೂಕು ಬಜರಂಗದಳದ ಅಧ್ಯಕ್ಷ ಹಿರೇಕುಡಿಗೆ ರಾಕೇಶ್ ಎಂಬಾತನ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಕಾರ್ನಾಟಕ ಕ್ರೈಸ್ತ ಸಂಘಟನೆಗಳ ಒಕ್ಕೂಟದ ಕೊಪ್ಪ ತಾಲೂಕು ಶಾಖೆ ಮುಖಂಡರು ಸಹಾಯಕ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಿದ್ದಾರೆ.

ಜಿಲ್ಲೆಯ ಕೊಪ್ಪ ತಾಲೂಕು ಬಜರಂಗದಳದ ಅಧ್ಯಕ್ಷ ರಾಕೇಶ್ ಎಂಬಾತ ಡಿ.25ರಂದು ಕ್ರೈಸ್ತ ಸಮುದಾಯದವರ ಧಾರ್ಮಿಕ ಭಾವನೆಗಳಿಗೆ ನೋವಾಗುವಂತಹ ಕೆಲ ಚಿತ್ರ, ಬರಹಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾನೆ. ಈ ಮೂಲಕ ಸಮುದಾಯದವರ ಧಾರ್ಮಿಕ ಭಾವನೆಗಳಿಗೆ ಅಪಮಾನ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿರುವ ಮುಖಂಡರು, ರಾಕೇಶ್ ಹಿರಿಕುಡಿಗೆ ಕ್ರೈಸ್ತ ಧರ್ಮವನ್ನು ನಿಂದಿಸಿ, ಅಸಭ್ಯವಾದ ಚಿತ್ರ ಬರಹಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಜಿಲ್ಲೆಯಲ್ಲಿ ವಿವಿಧ ಧರ್ಮಗಳ ನಡುವೆ ಇರುವ ಸೌಹಾರ್ದವನ್ನು ಹಾಳು ಮಾಡಲು ಯತ್ನಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಬಜರಂಗದಳದ ರಾಕೇಶ್ ಹಾಕಿರುವ ಪೋಸ್ಟ್ ಗಳಲ್ಲಿ ಶ್ರಿರಾಮಚಂದ್ರ ಸಂತ ಕ್ಲಾಸ್‍ನತ್ತ ಬಾಣ ಹಿಡಿದು ನಿಂತಿರುವುದು, ಸಂತ ಕ್ಲಾಸ್ ದೇಶ ಬಿಟ್ಟು ಓಡುತ್ತಿರುವ ಚಿತ್ರವೊಂದನ್ನು ಹಾಕಿದ್ದು, ಅದರೊಂದಿಗೆ ಕ್ರೈಸ್ತರು ತಮ್ಮ ಬಗಲಲ್ಲಿ ಸುಳ್ಳಿನ ಕಂತೆ ಇರುವ ಪುಸ್ತಕ ಇಟ್ಟುಕೊಂಡು ಹಿಂದುಗಳ ಮನೆಗೆ ನುಗ್ಗಿ ಮತಾಂತರ ಮಾಡುತ್ತಾ ಲೂಟಿ ಮಾಡುವ ಕ್ರೈಸ್ತರಿಗೆ ಮತಾಂತರ ನಿಷೇಧ ಕಾಯ್ದೆಯ ಶುಭಾಶಯಗಳು ಎಂದು ಬರೆದಿದ್ದಾನೆ. ಮತ್ತೊಂದು ಚಿತ್ರದಲ್ಲಿ ಸಂತ ಕ್ಲಾಸ್ ವಾಹನದಿಂದ ಇಳಿಯುತ್ತಿರುವ ಹಾಗೂ ಆತನನ್ನು ನೋಡಿ ನಾಯಿಗಳು ಬೊಗಳುತ್ತಿರುವ ಚಿತ್ರದೊಂದಿಗೆ ಕೇಸರಿ ಖಾವಿ ತೊಟ್ಟ ಸಂತನ ನೋಡಿ ನಾಯಿಗಳು ತಲೆ ಬಗ್ಗಿಸಿ ನಡೆಯುವ ಚಿತ್ರ ಹಾಕಿ, ಈ ದೇಶದ ಮೂಲ ನಿವಾಸಿಗಳು ಯಾರೆಂದು ನಾಯಿಗಳಿಗೂ ಗೊತ್ತು ಎಂದು ಬರೆದಿರುವ ಪೋಸ್ಟ್ ಹಾಕಿದ್ದಾನೆ. ಇದು ಕ್ರೈಸ್ತರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದು, ಎರಡು ಧರ್ಮಗಳ ನಡುವೆ ಧ್ವೇಷ ಹುಟ್ಟು ಹಾಕಲು ಮಾಡಿದ ಕೃತ್ಯವಾಗಿದೆ. ಆದ್ದರಿಂದ ಕೂಡಲೇ ಕ್ರೈಸ್ತರ ಭಾವನೆಗಳನ್ನು ಕೆರಳಿಸಿ ಎರಡು ಧರ್ಮಗಳ ನಡುವೆ ಧ್ವೇಷ ಹುಟ್ಟು ಹಾಕಿ ಸಮಾಜದ ಶಾಂತಿ ಕೆಡಿಸುತ್ತಿರುವ ಬಜರಂಗದಳದ ಕೊಪ್ಪ ತಾಲೂಕು ಅಧ್ಯಕ್ಷ ರಾಕೇಶ್ ಹಿರೇಕುಡಿಗೆ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಒಕ್ಕೂಟದ ಮುಖಂಡರಾದ ಅನಿಲ್ ಕುಲಾಸೋ, ಪ್ರಾನ್ಸಿಸ್ ಕಾರ್ಡೋಜಾ, ಜೀವನ್, ಜೋಯಲ್ ಡಯಾಸ್, ಜಾರ್ಜ್, ಲೋಬೋ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.

 ರಾಜ್ಯದ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ರಾಜ್ಯದ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ


 ರಾಜ್ಯದ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ‘ಹೊಸ ವರ್ಷದ ಸಂದರ್ಭದಲ್ಲಿ ಕರ್ನಾಟಕ ಎಲ್ಲ ಸವಾಲುಗಳಿಂದ ಮುಕ್ತವಾಗಿ, ಜನರ ಬದುಕು ಹಸನಾಗಿ 2022ರ ಹೊಸ ವರ್ಷ ಎಲ್ಲರಿಗೂ ಹರುಷ ತರಲಿ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾರೈಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಜಿಲ್ಲಾ ಮಟ್ಟದ ಹಲವು ಆಡಳಿತಾತ್ಮಕ ವಿಚಾರ ಮತ್ತು ಯೋಜನೆಗಳ ಅನುಷ್ಠಾನದೊಂದಿಗೆ ಹೊಸ ವರ್ಷದ ಪ್ರಾರಂಭದಲ್ಲಿಯೇ ಹೊಸ ಚೈತನ್ಯ ಹಾಗೂ ಹೊಸ ದಿಕ್ಸೂಚಿಯೊಂದಿಗೆ ಅಧಿಕಾರಿಗಳು ಇನ್ನಷ್ಟು ಜನಸ್ನೇಹಿಯಾಗಿ ಆಡಳಿತ ನಡೆಸುವ ಚಿಂತನೆಯಲ್ಲಿ ಸಭೆಯನ್ನು ಕರೆಯಲಾಗಿದೆ' ಎಂದು ತಿಳಿಸಿದರು.

ಬೆಂಗಳೂರು: ದರೋಡೆ ಪ್ರಕರಣ;   ಆರೋಪಿಯ ಕಾಲಿಗೆ ಗುಂಡು ಹಾರಿಸಿ   ಬಂಧಿಸಿದ ಪೊಲೀಸರು

ಬೆಂಗಳೂರು: ದರೋಡೆ ಪ್ರಕರಣ; ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಪೊಲೀಸರು

ಬೆಂಗಳೂರು: ದರೋಡೆ ಪ್ರಕರಣ;

 ಆರೋಪಿಯ ಕಾಲಿಗೆ ಗುಂಡು ಹಾರಿಸಿ

 ಬಂಧಿಸಿದ ಪೊಲೀಸರು


ಬೆಂಗಳೂರು: ದರೋಡೆ ಪ್ರಕರಣದಲ್ಲಿ ಬಂಧಿಸಲು ಹೋದ ಯಶವಂತಪುರದ ಸಬ್‍ಇನ್ಸ್‍ಪೆಕ್ಟರ್ ಮೇಲೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ ರೌಡಿಶೀಟರ್ ಶುಕ್ರವಾರ ಸಂಜಯನಗರ ಠಾಣೆ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಸಿಕ್ಕಿಬಿದ್ದಿದ್ದಾನೆ. 

ದಿವಾಕರ ಅರಸ್(24) ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೌಡಿ ಎಂದು ಪೊಲೀಸರು ತಿಳಿಸಿದ್ದಾರೆ. 

ಈತ ಗಿರಿನಗರ ಪೊಲೀಸ್ ಠಾಣೆ ರೌಡಿಶೀಟರ್ ಆಗಿದ್ದು, ಈತನ ಮೇಲೆ ಗಿರಿನಗರ, ಹನುಮಂತನಗರ ಸೇರಿ ನಗರದ ವಿವಿಧ ಪೆÇಲೀಸ್ ಠಾಣೆಗಳಲ್ಲಿ 8 ಪ್ರಕರಣಗಳು ದಾಖಲಾಗಿವೆ. ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಅತ್ತ-ಸೊಸೆ ಮನೆಯಲ್ಲಿದ್ದಾಗ ದರೋಡೆಕೋರರು ನುಗ್ಗಿ ಪಿಸ್ತೂಲು ತೋರಿಸಿ ಬೆದರಿಸಿ ಆಭರಣ ಹಾಗೂ ಹಣ ದೋಚಿ ಪರಾರಿಯಾಗಿದ್ದರು.

ಈ ಪ್ರಕರಣದಲ್ಲಿ ಕೆಲವರನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದರು. ಪ್ರಮುಖ ಆರೋಪಿ ದಿವಾಕರ್ ಅರಸ್‍ಗಾಗಿ ಶೋಧ ನಡೆಸುತ್ತಿದ್ದರು. ಎರಡು ದಿನದ ಹಿಂದೇ ಹೆಬ್ಬಾಳ ಮೇಲ್ಸೇತುವೆ ಬಳಿಯ ತೋಟದ ಬಳಿ ಆರೋಪಿ ದಿವಾಕರ್ ಇರುವ ಬಗ್ಗೆ ಸಬ್‍ಇನ್‍ಸ್ಪೆಕ್ಟರ್ ವಿನೋದ್ ರಾಥೋಡ್ ಅವರಿಗೆ ಮಾಹಿತಿ ಬಂದಿತ್ತು. 

ಈ ಹಿನ್ನೆಲೆಯಲ್ಲಿ ಸಿಬ್ಬಂದಿಯೊಂದಿಗೆ ತಕ್ಷಣ ಸ್ಥಳಕ್ಕೆ ತೆರಳಿ ಬಂಧಿಸಲು ಹೋದಾಗ ರಾಥೋಡ್ ಅವರ ಭುಜಕ್ಕೆ ದಿವಾಕರ್ ಚುಚ್ಚಿ ಪರಾರಿಯಾಗಿದ್ದನು. ಗಾಯಗೊಂಡ ರಾಥೋಡ್ ಅವರು ಸಂಜಯನಗರ ಪೊಲೀಸರಿಗೆ ಘಟನೆಯನ್ನು ವಿವರಿಸಿ ದೂರು ನೀಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದರು. 

ಶುಕ್ರವಾರ ಬೆಳಗ್ಗೆ ಸಂಜಯನಗರ ಪೊಲೀಸರು ಆರೋಪಿ ದಿವಾಕರ್, ಎಚ್‍ಎಂಟಿ ಕಾರ್ಖಾನೆ ಬಳಿ ಇರುವ ಮಾಹಿತಿಯನ್ನು ಕಲೆ ಹಾಕಿ ಬಂಧಿಸಿದ್ದಾರೆ. ಆರೋಪಿಯು ಪೊಲೀಸರ ಮೇಲೆ ದಾಳಿ ಮಾಡಲು ಮುಂದಾದಾಗ ಆತ್ಮರಕ್ಷಣೆಗಾಗಿ ಪೊಲೀಸರು ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. 

ಉಡುಪಿ ಜಿಲ್ಲೆಯ ಜವುಳಿ ಪಾರ್ಕ್‌ನಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ: ಸಚಿವ ಶಂಕರ ಬಿ.ಪಾಟೀಲ

ಉಡುಪಿ ಜಿಲ್ಲೆಯ ಜವುಳಿ ಪಾರ್ಕ್‌ನಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ: ಸಚಿವ ಶಂಕರ ಬಿ.ಪಾಟೀಲ

ಉಡುಪಿ ಜಿಲ್ಲೆಯ ಜವುಳಿ ಪಾರ್ಕ್‌ನಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ: ಸಚಿವ ಶಂಕರ ಬಿ.ಪಾಟೀಲ

ಉಡುಪಿ: ಜಿಲ್ಲೆಯ ಕಾರ್ಕಳದಲ್ಲಿ ಸ್ಥಾಪಿಸಲುದ್ದೇಶಿಸಿರುವ ಜವುಳಿ ಪಾರ್ಕ್‌ನಲ್ಲಿ ಜಿಲ್ಲೆಯ ನೇಕಾರರಿಗೆ ಅದರಲ್ಲೂ ವಿಶೇಷವಾಗಿ ಯುವ ನೇಕಾರರಿಗೆ ಸೂಕ್ತ ತರಬೇತಿ ನೀಡಲು ಕೌಶಲ್ಯಾಭಿವೃದ್ಧಿ ಕೇಂದ್ರವೊಂದನ್ನು ಸ್ಥಾಪಿಸಲು ನಿರ್ಧರಿಸಿರು ವುದಾಗಿ ರಾಜ್ಯ ಕೈಮಗ್ಗ ಮತ್ತು ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಂಕರ ಬಿ.ಪಾಟೀಲ ಮುನೇನಕೊಪ್ಪ ಹೇಳಿದ್ದಾರೆ.

ಜಿಲ್ಲೆಯ ಕೈಮಗ್ಗ ನೇಕಾರಿಕೆ ಕುರಿತಂತೆ ಖುದ್ದಾಗಿ ತಿಳಿದುಕೊಳ್ಳಲು ಪ್ರಥಮ ಬಾರಿಗೆ ಉಡುಪಿಗೆ ಆಗಮಿಸಿದ ಸಚಿವರು ಉಡುಪಿ ನೇಕಾರರ ಪ್ರಾಥಮಿಕ ಸೇವಾ ಸಹಕಾರ ಸಂಘದಲ್ಲಿ ನಡೆದ, ದ.ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೈಮಗ್ಗ ಮತ್ತು ಜವಳಿ ಇಲಾಖೆ ಅಧಿಕಾರಿಗಳ ಸಭೆ ಹಾಗೂ ಉಡುಪಿ ಜಿಲ್ಲಾ ನೇಕಾರರ ಕುಂದುಕೊರತೆಗಳನ್ನು ಆಲಿಸುವ ಸಭೆಯನ್ನುದ್ದೇಶಿಸಿ ಮಾತನಾಡುತಿದ್ದರು.

ಜಿಲ್ಲೆಗೆ ಈಗಾಗಲೇ ಜವುಳಿ ಪಾರ್ಕ್ ಮಂಜೂರಾಗಿದ್ದು, ಕಾರ್ಕಳದ 20 ಎಕರೆ ಜಾಗದಲ್ಲಿ ಅದು ತಲೆ ಎತ್ತಲಿದೆ. ಇಲ್ಲಿ ಕೈಮಗ್ಗ ನೇಕಾರರಿಗೆ ಬೇಕಾದ ತರಬೇತಿಯನ್ನು ನೀಡಲು ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ತೆರೆಯಲಾಗುವುದು ಎಂದರು.

ಅಲ್ಲದೇ ಉಡುಪಿ ಜಿಲ್ಲೆಯ ಕೈಮಗ್ಗಗಳನ್ನು ಆಧುನಿಕ ರೀತಿಯಲ್ಲಿ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಜವಳಿ ಇಂಜಿನಿಯರ್‌ಗಳು ಮತ್ತು ಜವಳಿ ಪರಿಣಿತ ರನ್ನು ಒಳಗೊಂಡ ಇಲಾಖಾ ತಂಡವೊಂದನ್ನು ಜಿಲ್ಲೆಗೆ ಕಳುಹಿಸಿ, ಅವರಿಂದ ಪರಿಶೀಲನಾ ವರದಿ ಪಡೆದು, ಕೈಮಗ್ಗಗಳನ್ನು ತಾಂತ್ರಿಕವಾಗಿ ಸುಧಾರಿಸಿ, ನೇಕಾರರಿಗೆ ಆರ್ಥಿಕ ಅನುಕೂಲವಾಗುವಂತೆ ಮಾಡಲಾಗುವುದು ಎಂದರು.

ನೇಕಾರಿಕೆ ಎಂಬುದು ಪರಿಶ್ರಮ ಬೇಡುವ, ಆರ್ಥಿಕವಾಗಿ ಲಾಭದಾಯಕವಲ್ಲ ಎಂಬ ಕಾರಣದಿಂದ ಯುವಜನತೆ ಈ ಉದ್ಯೋಗ ದಿಂದ ದೂರ ಉಳಿದಿದ್ದಾರೆ. ನೇಕಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸುವ ಮೂಲಕ ಅದನ್ನು ಲಾಭದಾಯಕವನ್ನಾಗಿ ಮಾಡಲು ತಜ್ಞರ ತಂಡ ಬೇಕಾದ ಸಲಹೆಗಳನ್ನು ನೀಡುವಂತೆ ಸೂಚಿಸಲಾಗುವುದು ಎಂದರು.

ತಂಡ ಜಿಲ್ಲೆಯಲ್ಲಿ ಹಿರಿಯ, ಅನುಭವಿ ನೇಕಾರರನ್ನು ಭೇಟಿಯಾಗಿ, ವಿವಿಧ ನೇಕಾರರ ಸಹಕಾರಿ ಸಂಘಗಳೊಂದಿಗೆ ಸಮಾ ಲೋಚಿಸಿ, ಜಿಲ್ಲೆಯ ಕೈಮಗ್ಗದ ಉದ್ಯಮ ಆರ್ಥಿಕವಾಗಿ ಲಾಭದಾಯಕವಾಗುವ ಕುರಿತಂತೆ ವರದಿ ಸಲ್ಲಿಸಲಿದೆ. ಅದನ್ನು ಪರಿಶೀಲಿಸಿ ಕರಾವಳಿಯ ಕೈಮಗ್ಗ ನೇಕಾರಿಕೆಯನ್ನು ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗುವುದು ಎಂದರು.

ಜವಳಿ ಪಾರ್ಕ್‌ನ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ವೃತ್ತಿಪರ ನೇಕಾರರೊಂದಿಗೆ, ಆಸಕ್ತ ವಿದ್ಯಾರ್ಥಿಗಳಿಗೂ ಸಹ ತರಬೇತಿ ನೀಡಲಾ ಗುವುದು. ಈ ಮೂಲಕ ಈಗ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ತುಂಬಾ ಬೇಡಿಕೆಯನ್ನು ಹೊಂದಿರುವ ಕೈಮಗ್ಗದ ಉಡುಪಿ ಸೀರೆಗಳಿಗೆ ಹಾಗೂ ಇತರ ಉತ್ಪನ್ನಗಳ ಪುನರುಜ್ಜೀವನಕ್ಕೆ ಪ್ರಯತ್ನಿಸಲಾಗುವುದು ಎಂದು ಸಚಿವ ಶಂಕರ ಪಾಟೀಲ್ ತಿಳಿಸಿದರು.

ರಾಜ್ಯದಲ್ಲಿ ನೇಕಾರರನ್ನು ಕೃಷಿಕರೆಂದು ಪರಿಗಣಿಸಿ ಅವರ ಅಭಿವೃದ್ಧಿಗೆ ರೈತರಿಗೆ ನೀಡುವಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದ ಅವರು, ನೇಕಾರ ಸಮ್ಮಾನ ಯೋಜನೆಯಡಿ ನೇಕಾರರ ಬ್ಯಾಂಕ್ ಖಾತೆಗೆ ನೇರವಾಗಿ 2000ರೂ. ಜಮಾ ಮಾಡಲಾಗುತ್ತಿದೆ ಎಂದರು.

ರಾಜ್ಯದಲ್ಲಿ ನೇಕಾರರನ್ನು ಕೃಷಿಕರೆಂದು ಪರಿಗಣಿಸಿ ಅವರ ಅಭಿವೃದ್ಧಿಗೆ ರೈತರಿಗೆ ನೀಡುವಂತೆ ವಿವಿಸೌಲ್ಯಗಳನ್ನು ಒದಗಿಸಲಾಗು ವುದು ಎಂದ ಅವರು, ನೇಕಾರ ಸಮ್ಮಾನ ಯೋಜನೆಯಡಿ ನೇಕಾರರ ಬ್ಯಾಂಕ್ ಖಾತೆಗೆ ನೇರವಾಗಿ 2000ರೂ. ಜಮಾ ಮಾಡಲಾಗುತ್ತಿದೆ ಎಂದರು.

ರಾಜ್ಯದಲ್ಲಿ 12 ಲಕ್ಷ ನೇಕಾರರಿಗೆ ಈಗಾಗಲೇ 122 ಕೋಟಿ ರೂ. ಗಳ ಸಬ್ಸಿಡಿ ನೀಡಲಾಗಿದೆ. ನೇಕಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ, ನೇಕಾರರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ, ಬಡ್ಡಿ ಸಹಾಯಧನ ಯೋಜನೆಯ ಮೊತ್ತವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿ, ಜಿಲ್ಲೆಯ ಕೈಮಗ್ಗಗಳನ್ನು ಪುನಃಶ್ಚೇತನ ಗೊಳಿಸಬೇಕು. ಆಧುನಿಕ ತಂತ್ರಜ್ಞಾನ ಅಳವಡಿಸುವುದರ ಮೂಲಕ ಯುವಜನತೆ ಇದರತ್ತ ಆರ್ಕಷಿತರಾಗುವಂತೆ ಹಾಗೂ ಈ ನೇಕಾರಿಕೆಯನ್ನು ಲಾಭದಾಯಕ ವಾಗುವಂತೆ ಮಾಡಬೇಕು. ಕೈಮಗ್ಗದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.

ಕೈಮಗ್ಗ ಉತ್ಪನ್ನಗಳಿಗೆ ಮೊದಲು ಜಿಎಸ್‌ಟಿ ಇದ್ದಿರಲಿಲ್ಲ. ಬಳಿಕ ಅದನ್ನು ಶೇ.5ಕ್ಕೆ ನಿಗದಿಗೊಳಿಸಿ ಈಗ ಜಿಎಸ್‌ಟಿ ದರವನ್ನು ಶೇ.12ಕ್ಕೆ ನಿಗದಿಗೊಳಿಸಲಾಗಿದೆ. ಇದನ್ನು ಮತ್ತೆ ಶೇ.5ಕ್ಕೆ ಇಳಿಸಬೇಕು. ಅಲ್ಲದೇ ನೇಕಾರರಿಗೆ ನೀಡುವ ಮಜೂರಿ ಮೇಲೆ ಶೇ.10 ಇನ್ಸೆಂಟಿವ್ ಹಾಗೂ ಪ್ರೊತ್ಸಾಹಧನ ನೀಡಬೇಕು ಎಂದು ಜಿಲ್ಲೆಯ ನೇಕಾರು ಸಚಿವರಿಗೆ ಮನವಿ ಮಾಡಿದರು.

ಸಭೆಯಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಅಪರ ನಿರ್ದೇಶಕ ಪ್ರಕಾಶ್, ಜಂಟಿ ನಿರ್ದೇಶಕ ಶ್ರೀಧರ ನಾಯ್ಕ, ಉಡುಪಿ ಜಿಲ್ಲೆಯ ಸಹಾಯಕ ನಿರ್ದೇಶಕ ಅಶೋಕ್, ದ.ಕನ್ನಡ ಜಿಲ್ಲೆಯ ಸಹಾಯಕ ನಿರ್ದೇಶಕ ಶಿವಶಂಕರ್, ಉಡುಪಿ ನೇಕಾರರ ಸಹಕಾರಿ ಸಂಘದ ಅಧ್ಯಕ್ಷ ಎಬ್ನೆಸರ್ ಸತ್ಯಾರ್ಥಿ, ಶಿವಳ್ಳಿ ನೇಕಾರರ ಸಂಘದ ಶಶಿಕಾಂತ್ ಮತ್ತಿತರರು ಉಪಸ್ಥಿತರಿದ್ದರು.

ಉಡುಪಿ ನೇಕಾರರ ಸಂಘದ ವ್ಯವಸ್ಥಾಪಕ ನಿರ್ದೇಶಕ ಸದಾನಂದ ಕಾಂಚನ್ ಸ್ವಾಗತಿಸಿ, ವಂದಿಸಿದರು.

 ಹೊಸ ವರ್ಷಾಚರಣೆಗೆ ಕಠಿಣ ನಿಯಮ: ಬೆಂಗಳೂರಿನಲ್ಲಿ ಸಂಜೆ 6ರಿಂದ ಶನಿವಾರ ಬೆಳಗ್ಗೆ 5 ಗಂಟೆ ವರೆಗೆ ನಿಷೇಧಾಜ್ಞೆ ಜಾರಿ

ಹೊಸ ವರ್ಷಾಚರಣೆಗೆ ಕಠಿಣ ನಿಯಮ: ಬೆಂಗಳೂರಿನಲ್ಲಿ ಸಂಜೆ 6ರಿಂದ ಶನಿವಾರ ಬೆಳಗ್ಗೆ 5 ಗಂಟೆ ವರೆಗೆ ನಿಷೇಧಾಜ್ಞೆ ಜಾರಿ


 ಹೊಸ ವರ್ಷಾಚರಣೆಗೆ ಕಠಿಣ ನಿಯಮ: ಬೆಂಗಳೂರಿನಲ್ಲಿ ಸಂಜೆ 6ರಿಂದ ಶನಿವಾರ ಬೆಳಗ್ಗೆ 5 ಗಂಟೆ ವರೆಗೆ ನಿಷೇಧಾಜ್ಞೆ ಜಾರಿ

ಬೆಂಗಳೂರು: ಕೋವಿಡ್ ರೂಪಾಂತರಿ ಒಮೈಕ್ರಾನ್ ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ನೂತನ ವರ್ಷಾಚರಣೆಗೆ ಸನ್ನದ್ಧರಾಗಿದ್ದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಜನತೆಗೆ ರಾಜ್ಯ ಸರಕಾರ ನಿರ್ಬಂಧ ಹೇರಿದೆ. ಸಂಜೆ 6ಗಂಟೆಯಿಂದ ಜನವರಿ 1ರ ಮುಂಜಾನೆ 5 ಗಂಟೆ ವರೆಗೆ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಜನರು ಗುಂಪು ಸೇರದಂತೆ ಬ್ರೇಕ್ ಹಾಕಿದೆ.

ಹೊಸ ವರ್ಷ ಸ್ವಾಗತಕ್ಕೆ ಸಜ್ಜಾಗುತ್ತಿದ್ದ ನಗರದ ಎಂ.ಜಿ.ರಸ್ತೆ, ಚರ್ಚ್ ಸ್ಟ್ರೀಟ್, ಬ್ರಿಗೇಡ್ ರೋಡ್, ರೆಸ್ಸಿಡೆನ್ಸಿ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ನಗರದಲ್ಲಿನ ಪಬ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಸಾರ್ವಜನಿಕವಾಗಿ ಹೊಸ ವರ್ಷಾಚರಣೆಗೆ ನಿರ್ಬಂಧ ಹೇರಲಾಗಿದೆ.

ನಗರದಲ್ಲಿನ ಪ್ರಮುಖ ರಸ್ತೆಗಳು, ವೃತ್ತಗಳು, ಮೇಲ್ಸೇತುವೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ರಾಜ್ಯದ ಯಾವ ಕಡೆಯೂ ಜನಸಂದಣಿಗೆ ಅವಕಾಶ ಇಲ್ಲ. ಜನರು ಹೊಸ  ವರ್ಷಾಚರಣೆಯನ್ನ ಮನೆಯಲ್ಲೇ ಸರಳವಾಗಿ ಆಚರಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ.

ಕೋವಿಡ್‍ಗೂ ಮೊದಲು ಡಿ.31ರ ಮಧ್ಯಾಹ್ನದಿಂದಲೇ ಇಲ್ಲಿನ ಮಹಾತ್ಮ ಗಾಂಧಿ ರಸ್ತೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಗುಂಪು ಸೇರುತ್ತಿದ್ದರು. ಸಂಜೆಯ ವೇಳೆಗೆ ಹಲವು ರಸ್ತೆಗಳಲ್ಲಿ ಡಿಜೆ ಸೌಂಡ್ಸ್, ಬಾರ್, ಪಬ್ ಮತ್ತು ರೆಸ್ಟೋರೇಟ್‍ಗಳಲ್ಲಿ ಹೊಸ ವರ್ಷಾಚರಣೆಗೆ ಅದ್ದೂರಿ ಸಮಾರಂಭಗಳು ಏರ್ಪಾಡಾಗುತ್ತಿದ್ದವು.

ಆದರೆ, ಈ ಬಾರಿ ಈ ಎಲ್ಲ್ಲ ಪ್ರದೇಶಗಳು ಜನರಿಲ್ಲದೇ ಬಹುತೇಕ ಬಿಕೋ ಎನ್ನುತ್ತಿದ್ದು, ಎಲ್ಲೆಡೆ ಪೊಲೀಸರು ತುಂಬಿ ತುಳುಕುತ್ತಿದ್ದಾರೆ. ಬಹುತೇಕ ಕಡೆಗಳಲ್ಲಿ ಬ್ಯಾರಿಕೇಡ್ ಹಾಕುವ ಕೆಲಸ ನಡೆದಿದ್ದು, ಸಂಜೆ 6 ಗಂಟೆಯ ನಂತರ ಖಾಕಿಪಡೆ ಬಹಳ ನಿಗಾವಹಿಸಿದ್ದು, ಕಟ್ಟೆಚ್ಚರ ವಹಿಸುತ್ತಿದೆ. ರಾತ್ರಿ ಹತ್ತು ಗಂಟೆಯವರೆಗೆ ಮಾತ್ರ ಪಬ್, ರೆಸ್ಟೋರೆಂಟ್‍ಗಳ ಕಾರ್ಯನಿರ್ವಹಣೆಗೆ ಅವಕಾಶ ಇದೆ. ಅವಧಿ ಮೀರಿ ತೆರೆದರೆ ಕ್ರಮ ಕೈಗೊಳ್ಳಲು ಪೊಲೀಸರು ಸಜ್ಜಾಗಿದ್ದಾರೆ.

ಮಹಿಳೆಯರ ಸುರಕ್ಷತೆಗೆ ಆದ್ಯತೆ: ನೂತನ ವರ್ಷಾಚರಣೆ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಿ ಅಲ್ಲಲ್ಲಿ ಮಹಿಳೆಯರಿಗೆ ಕಿರುಕುಳ, ದೌರ್ಜನ್ಯ ಘಟನೆಗಳು ವರದಿಯಾಗುತ್ತಿದ್ದವು. ಹೀಗಾಗಿ ಆತಂಹ ಘಟನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ನಗರದ ಪ್ರಮುಖ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಗೆ ಸೇಫ್ಟಿ ಐಲೆಂಡ್‍ಗಳನ್ನು ಸ್ಥಾಪಿಸಿದ್ದಾರೆ.

ನಗರದ ಕೆಂಪೇಗೌಡ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣ, ಐಟಿ-ಬಿಟಿ ಕಂಪೆನಿಗಳು, ಪ್ರಮುಖ ರಸ್ತೆಗಳು, ಪ್ರಮುಖ ಮೇಲ್ಸೇತುವೆಗಳು ಸೇರಿದಂತೆ ಕೆಜಿ ರಸ್ತೆ, ಎಂ.ಜಿ. ರಸ್ತೆ, ಚರ್ಚ್ ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಹೊಸ ವರ್ಷಕ್ಕೆ ನಿರ್ಬಂಧ: ಕೋವಿಡ್ ರೂಪಾಂತರಿ ಒಮೈಕ್ರಾನ್ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಎರಡನೆ ಅಲೆ ಆತಂಕದ ಪರಿಸ್ಥಿತಿ ಮರುಕಳಿಸಬಾರದೆಂಬ ಉದ್ದೇಶದಿಂದ ಮುನ್ನೆಚ್ಚರಿಕೆ ಕ್ರಮ ಕ್ರಮವಾಗಿ 2022ರ ಹೊಸ ವರ್ಷಾಚರಣೆಗೆ ನಿರ್ಬಂಧ ಹೇರಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾತನಾಡಿದ ಅವರು, ದೇಶದ ಎಂಟು ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹಠಾತ್ ಏರಿಕೆಯಾಗಿದ್ದು, ಕೇಂದ್ರ ಸರಕಾರ ಕಠಿಣ ನಿರ್ಬಂಧ ಜಾರಿಗೊಳಿಸುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇಂದಿನ ನಿಬರ್ಂಧವು ನಮಗೆ ಸಂತೋಷ ತರುವ ವಿಷಯವಲ್ಲ ಎಂದು ಇದೇ ವೇಳೆ ಹೇಳಿದ್ದಾರೆ.

ಸಹಕರಿಸಬೇಕು: ನಗರದ ಆಯಾಯ ಠಾಣಾ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಮುಂಜಾಗರೂಕತೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಸಾರ್ವಜನಿಕರು ಸಹಕರಿಸಬೇಕು. ಸಾರ್ವಜನಿಕರು ಕೋವಿಡ್ ಮಾರ್ಗಸೂಚಿ ಪಾಲಿಸುವ ಮೂಲಕ ಸರಕಾರದೊಂದಿಗೆ ಸಹಕಾರ ನೀಡಬೇಕು. ಒಂದು ವೇಳೆ ಮಾರ್ಗಸೂಚಿ ಧಿಕ್ಕರಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು ನಗರದಲ್ಲಿ ಹೆಚ್ಚಿನ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ರಾತ್ರಿ 10 ಗಂಟೆ ನಂತರ ಎಲ್ಲರೂ ತಮ್ಮ ತಮ್ಮ ಮನೆ ಸೇರಿಕೊಳ್ಳಬೇಕು ಹಾಗೂ ಸಂಜೆ 6 ಗಂಟೆಯಿಂದ ನಾಳೆ(ಜ.1) ಬೆಳಗ್ಗೆ 5ಗಂಟೆಯ ವರೆಗೆ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಯಾರೂ ಗುಂಪು ಸೇರಬಾರದು, ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ಸಂಭ್ರಮಾಚರಣೆ ನಡೆಸಬಾರದು'

-ಆರಗ ಜ್ಞಾನೇಂದ್ರ ಗೃಹ ಸಚಿವ

ಉಡುಪಿ: ಹಿಜಾಬ್ ಧರಿಸಿದಕ್ಕೆ ಸರಕಾರಿ ಕಾಲೇಜು ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶ ನಿರಾಕರಣೆ!

ಉಡುಪಿ: ಹಿಜಾಬ್ ಧರಿಸಿದಕ್ಕೆ ಸರಕಾರಿ ಕಾಲೇಜು ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶ ನಿರಾಕರಣೆ!


ಉಡುಪಿ: ಹಿಜಾಬ್ ಧರಿಸಿದಕ್ಕೆ ಸರಕಾರಿ ಕಾಲೇಜು ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶ ನಿರಾಕರಣೆ!

ಉಡುಪಿ: ಹಿಜಾಬ್ ಧರಿಸಿದ ಕಾರಣಕ್ಕಾಗಿ ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗೆ ಕಳೆದ ಮೂರು ದಿನಗಳಿಂದ ತರಗತಿ ಪ್ರವೇಶ ನಿರಾಕರಿಸಿ ಹೊರಗಡೆ ನಿಲ್ಲಿಸಿರುವ ಘಟನೆ ನಡೆದಿದೆ.

ಕಾಲೇಜಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿಯ ಆರು ವಿದ್ಯಾರ್ಥಿಗಳು ಕಳೆದ ಮೂರು ದಿನಗಳಿಂದ ಕಾಲೇಜಿಗೆ ಹಿಜಾಬ್ ಧರಿಸಿಕೊಂಡು ಬರುತ್ತಿದ್ದು, ಈ ಕಾರಣಕ್ಕೆ ಪ್ರಾಂಶುಪಾಲರು ವಿದ್ಯಾರ್ಥಿನಿಯರ ತರಗತಿ ಪ್ರವೇಶಕ್ಕೆ ನಿರಕಾರಿಸಿ, ಹೊರಗಡೆ ನಿಲ್ಲಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಅದರಂತೆ ಕಳೆದ ಮೂರು ದಿನಗಳಿಂದ ಈ ಆರು ಮಂದಿ ವಿದ್ಯಾರ್ಥಿನಿಯರು ಪ್ರತಿದಿನ ಕಾಲೇಜಿಗೆ ಬಂದು ಹೊರಗಡೆ ನಿಂತು ಅಲ್ಲೇ ಊಟ ಮಾಡಿ ಮನೆಗೆ ತೆರಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಕಾಲೇಜಿನ ನಿಯಮದಂತೆ ಹಿಜಾಬ್ ತೆಗೆದು ಕಾಲೇಜಿಗೆ ಬಂದರೆ ಮಾತ್ರ ತರಗತಿಗೆ ಪ್ರವೇಶ ಕಲ್ಪಿಸಲಾಗುವುದು ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

ಅಲ್ಲದೆ ಕಾಲೇಜಿನಲ್ಲಿ ಇತರ ವಿದ್ಯಾರ್ಥಿನಿಯರು ತುಳು, ಕೊಂಕಣಿ ಭಾಷೆ ಮಾತನಾಡಿದರೂ ನಾವು ಮಾತ್ರ ಉರ್ದು, ಬ್ಯಾರಿ ಭಾಷೆಗಳನ್ನು ಮಾತನಾಡದಂತೆ ತಾಕೀತು ಮಾಡಲಾಗುತ್ತದೆ. ಇತರ ಧರ್ಮದಂತೆ ನಮ್ಮ ಧರ್ಮದ ಹಕ್ಕುಗಳನ್ನು ಗೌರವಿಸುವ ಕೆಲಸವನ್ನು ಕಾಲೇಜು ಮಾಡಬೇಕು ಎಂದು ವಿದ್ಯಾರ್ಥಿನಿಯರು ಒತ್ತಾಯಿಸಿದ್ದಾರೆ.


ನಮ್ಮ ಕಾಲೇಜಿನಲ್ಲಿ ಈವರೆಗೆ ಹಿಜಾಬ್ ಹಾಕಿಕೊಂಡು ತರಗತಿಗೆ ಹಾಜರಾಗುವ ನಿಯಮ ಇರಲಿಲ್ಲ. ಕಳೆದ ಮೂರು ದಿನಗಳಿಂದ ಸುಮಾರು 60 ಮುಸ್ಲಿಮ್ ವಿದ್ಯಾರ್ಥಿನಿಯರಲ್ಲಿ ಕೇವಲ ಆರು ಮಂದಿ ಮಾತ್ರ ಹಿಜಾಬ್ ಹಾಕಿಕೊಂಡು ಬರುತ್ತಿದ್ದಾರೆ. ಆ ಕಾರಣಕ್ಕೆ ಅವರನ್ನು ತರಗತಿಗೆ ತೆಗೆದುಕೊಂಡಿಲ್ಲ. ಇವರು ಹಿಜಾಬ್ ತೆಗೆದಿರಿಸಿ ಯಾವಾಗ ಬೇಕಾದರೂ ತರಗತಿಗೆ ಬರಬಹುದು. ಇವರ ಮನೆಯವರನ್ನು ಕರೆದು ಮಾತುಕತೆ ಮಾಡಿದ್ದೇವೆ. ಅವರೆಲ್ಲ ಅರ್ಥ ಮಾಡಿಕೊಂಡು ನಮ್ಮ ನಿಯಮವನ್ನು ಒಪ್ಪಿದ್ದಾರೆ.

- ರುದ್ರೆಗೌಡ, ಪ್ರಾಂಶುಪಾಲರು

(ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು)


ಕಾಲೇಜಿನ ಇನ್ನೊಂದು ಬ್ಲಾಕ್‌ನಲ್ಲಿರುವ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಯರು ಹಿಜಾಬ್ ಹಾಕಿಕೊಂಡು ಬರುತ್ತಿದ್ದಾರೆ. ಅದೇ ರೀತಿ ನಾವು ಕೂಡ ಮೂರು ನಾಲ್ಕು ದಿನಗಳಿಂದ ಹಿಜಾಬ್ ಹಾಕಿಕೊಂಡು ಬರುತ್ತಿದ್ದೇವೆ. ಆದರೆ ನಮ್ಮನ್ನು ತರಗತಿಗೆ ಬಿಡುತ್ತಿಲ್ಲ. ನಾವು ಬೇರೆ ಏನನ್ನು ಕೇಳುತ್ತಿಲ್ಲ. ಹಿಜಾಬ್ ಹಾಕಲು ನಮಗೆ ಅವಕಾಶ ನೀಡಬೇಕು.

-ವಿದ್ಯಾರ್ಥಿನಿಯರು

 ಮಂಗಳೂರು ರಸ್ತೆಗೆ ‘ಪದ್ಮಶ್ರೀ ಹರೇಕಳ ಹಾಜಬ್ಬ ರಸ್ತೆ’ ಹೆಸರು

ಮಂಗಳೂರು ರಸ್ತೆಗೆ ‘ಪದ್ಮಶ್ರೀ ಹರೇಕಳ ಹಾಜಬ್ಬ ರಸ್ತೆ’ ಹೆಸರು


 ಮಂಗಳೂರು ರಸ್ತೆಗೆ ‘ಪದ್ಮಶ್ರೀ ಹರೇಕಳ ಹಾಜಬ್ಬ ರಸ್ತೆ’ ಹೆಸರು

ಮಂಗಳೂರು : ನಗರದ ಸ್ಟೇಟ್‌ ಬ್ಯಾಂಕ್ ಎದುರಿನ ವೃತ್ತದಿಂದ ರಾವ್ ಆ್ಯಂಡ್ ರಾವ್ ವೃತ್ತದ ವರೆಗಿನ ರಸ್ತೆಗೆ ನಾಮಕರಣಗೊಳಿಸುವ ‘ಪದ್ಮಶ್ರೀ ಹರೇಕಳ ಹಾಜಬ್ಬ ರಸ್ತೆ’ ಎಂದು ನಾಮಕರಣ ಮಾಡುವ ಬಗ್ಗೆ ಮನಪಾ ಸಾಮಾನ್ಯ ಸಭೆಯಲ್ಲಿ ಕಾರ್ಯಸೂಚಿ ಮಂಡಿಸಲಾಯಿತು.

ಮೇಯರ್ ಪ್ರೇಮಾನಂದ ಶೆಟ್ಟಿ ಅಧ್ಯಕ್ಷತೆಯಲ್ಲಿ  ಗುರುವಾರ ನಡೆದ ಸಭೆಯಲ್ಲಿ ಸದಸ್ಯ ಅಬ್ದುಲ್ಲತೀಫ್ ಈ ಬಗ್ಗೆ ಕಾರ್ಯಸೂಚಿ ಮಂಡಿಸಿದರು.

ಹಾಜಬ್ಬ ಅವರು ಇದೇ ರಸ್ತೆಯಲ್ಲಿ ಕಿತ್ತಳೆ ಮಾರಿ, ಬಂದ ದುಡ್ಡಿನಿಂದ ಹರೇಕಳದಲ್ಲಿ ಶಾಲೆ ತೆರೆದಿದ್ದರು. ಇವರ ಸಾಧನೆ ಗುರುತಿಸಿ ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಿತ್ತು. ಹಾಗಾಗಿ ಅವರ ಹೆಸರನ್ನು ಈ ರಸ್ತೆಗೆ ನಾಮಕಗೊಳಿಸಬೇಕೆಂದು ಆಗ್ರಹಿಸಲಾಯಿತು.

ಇದೇ ವೇಳೆ ಬೋಳಾರ ವಾರ್ಡ್‌ನ ಮಾರ್ಗನ್‌ ಗೇಟ್ ವೃತ್ತದಿಂದ ರಾ.ಹೆ. 66ನ್ನು ಸಂಪರ್ಕಿಸುವ ರಸ್ತೆಗೆ ‘ಶ್ರೀ ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ರಸ್ತೆ’ ಎಂದು ನಾಮಕರಣ ಮಾಡಲು ಜಪ್ಪು ರಾಮಕ್ಷತ್ರಿಯ ಸೇವಾ ಸಂಘ ಮಾಡಿದ ಮನವಿಯನ್ನು ಸಭೆಯಲ್ಲಿ ಮಂಡಿಸಲಾಯಿತು.

ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟ ಪಂಪ್‌ವೆಲ್-ಪಡೀಲ್ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯನ್ನು ಸ್ಮಾರ್ಟ್‌ ಸಿಟಿ ಯೋಜನೆಯಡಿ ಶೀಘ್ರವೇ ಕೈಗೆತ್ತಿಕೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಅವರು ವಿಪಕ್ಷ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಅವರು, ಸುಮಾರು 2.50 ಕಿ.ಮೀ. ದೂರದ ಪಂಪ್‌ವೆಲ್-ಪಡೀಲ್ ಹೆದ್ದಾರಿ ಯನ್ನು 18 ಮೀಟರ್ ಅಗಲಗೊಳಿಸಲಾಗುವುದು. 30 ಕೋಟಿ ರೂ. ವೆಚ್ಚದ ಈ ಕಾಮಗಾರಿಗೆ ಡ್ರಾಯಿಂಗ್ ಸಿದ್ಧವಾಗಿದೆ. ಆದರೆ ತುಂಬೆಯಿಂದ ಮಂಗಳೂರಿಗೆ ಆಗಮಿಸುವ ಪೈಪ್‌ಲೈನ್ ಸ್ಥಳಾಂತರ, ಒಳಚರಂಡಿ ವ್ಯವಸ್ಥೆಗೆ 12 ಕೋಟಿ ರೂ. ವೆಚ್ಚವಾಗಲಿದೆ. ಆದಷ್ಟು ಬೇಗನೆ ಕಾಮಗಾರಿ ಆರಂಭಿಸಲಾಗುವುದು ಎಂದು ಅವರು ಹೇಳಿದರು.

ಪಾಲಿಕೆ ವ್ಯಾಪ್ತಿಯ ಎಲ್ಲ ಕಡೆಗಳಲ್ಲಿ ವಾರ್ಡ್ ಸಮಿತಿ ರಚಿಸಲಾಗಿದೆ. ಆದರೆ ಅದನ್ನು ಕಾರ್ಯಗತಗೊಳಿಸುವ ಮುನ್ನ ಕಾರ್ಯಾಗಾರ ನಡೆಸಲಾಗುವುದು. ಈ ಕಾರ್ಯಾಗಾರದಲ್ಲಿ ವಾರ್ಡ್ ಸದಸ್ಯರೂ ಇರುತ್ತಾರೆ. ಆಯಾ ವಾರ್ಡ್‌ಗಳ ಕುಂದು ಕೊರತೆ, ಆದಾಯ ಕ್ರೋಢೀಕರಣ, ಫಲಾನುಭವಿಗಳ ಆಯ್ಕೆ ಸೇರಿದಂತೆ ವಾರ್ಡ್‌ಗಳ ಸಮಗ್ರ ಅಭಿವೃದ್ಧಿಗೆ ಕಾರ್ಯಾಗಾರ ಮೂಲಕ ದೃಷ್ಟಿಕೋನ ನೀಡಲು ಉದ್ದೇಶಿಸಲಾಗಿದೆ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಹೇಳಿದರು.

ಫುಟ್‌ ಪಾತ್‌ನಲ್ಲಿ ವ್ಯಾಪಾರ ಮಾಡುತ್ತಿರುವ ಬೀದಿಬದಿ ವ್ಯಾಪಾರಸ್ಥರ ವಿರುದ್ಧದ ಕಾರ್ಯಾಚರಣೆ ಮುಂದುವರಿಯಬೇಕು ಎಂದು ಸದಸ್ಯೆ ಪೂರ್ಣಿಮಾ ಆಗ್ರಹಿಸಿದರು.

ಈ ಸಂದರ್ಭ ಮಾತನಾಡಿದ ವಿಪಕ್ಷ ಸದಸ್ಯ ಅಬ್ದುಲ್ ರವೂಫ್, ಕಾರ್ಯಾಚರಣೆಗೆ ನಮ್ಮ ವಿರೋಧವಿಲ್ಲ, ಆದರೆ ಬೀದಿಬದಿ ವ್ಯಾಪಾರಿ ಗಳ ಸಾಮಗ್ರಿ ತೆರವುಗೊಳಿಸುವಾಗ ಹಾನಿ ಎಸಗುವುದು ಸರಿಯಲ್ಲ. ಸರಕಾರದ ಯೋಜನೆಗಳಿಂದ ತಳ್ಳುಗಾಡಿ ಖರೀದಿಸಿರುತ್ತಾರೆ. ಕಾರ್ಯಾಚರಣೆ ವೇಳೆ ತಳ್ಳುಗಾಡಿಯನ್ನೇ ತುಂಡುಮಾಡಿ ಲಾರಿಗೆ ಜೆಸಿಬಿ ಮೂಲಕ ಸೇರಿಸಲಾಗುತ್ತದೆ. ಇಲ್ಲಿ ಮಾನವೀಯತೆಯಿಂದ ವರ್ತಿಸುವಂತೆ ವಿನಂತಿಸಿದರು.

ಪಾಲಿಕೆಯ ಎಲ್ಲ ವಾರ್ಡ್‌ಗಳ ಸದಸ್ಯರಿಗೆ ಅಭಿವೃದ್ಧಿಗಾಗಿ ಹಾಲಿ 25 ಲಕ್ಷ ರೂ. ಅಲ್ಲದೆ ಹೆಚ್ಚುವರಿಯಾಗಿ ಮತ್ತೆ 25 ಲಕ್ಷ ರೂ. ನೀಡಲು ನಿರ್ಧರಿಸಲಾಗಿದೆ. ಎಲ್ಲ ಸದಸ್ಯರು ಜನವರಿ ಅಂತ್ಯದೊಳಗೆ ಹೆಚ್ಚುವರಿ ಹಾಗೂ ಬಾಕಿ ಇರುವ ಮೊತ್ತಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಿ ಪಾಲಿಕೆಗೆ ಸಲ್ಲಿಸಬೇಕು. ಜನವರಿ ಬಳಿಕ ಕ್ರಿಯಾಯೋಜನೆ ನೀಡಿದರೆ ಅನುದಾನ ಬಿಡುಗಡೆಗೆ ಕಷ್ಟವಾಗುತ್ತದೆ ಎಂದು ಮೇಯರ್ ತಿಳಿಸಿದರು.

ಉಪಮೇಯರ್ ಸುಮಂಗಳಾ ರಾವ್, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು ಉಪಸ್ಥಿತರಿದ್ದರು.

 ಕೋಲ್ಕತ್ತಾ:ಆಸ್ಪತ್ರೆಯಿಂದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಡಿಸ್ಚಾರ್ಜ್

ಕೋಲ್ಕತ್ತಾ:ಆಸ್ಪತ್ರೆಯಿಂದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಡಿಸ್ಚಾರ್ಜ್


 ಕೋಲ್ಕತ್ತಾ:ಆಸ್ಪತ್ರೆಯಿಂದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಡಿಸ್ಚಾರ್ಜ್

ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗುಲಿ ಅವರು ಕೋವಿಡ್‌ನ ಒಮೈಕ್ರಾನ್ ರೂಪಾಂತರ ಸೋಂಕಿಗೆ ಒಳಗಾದ ನಂತರ ಶುಕ್ರವಾರ ಕೋಲ್ಕತ್ತಾದ ವುಡ್‌ಲ್ಯಾಂಡ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಗಂಗುಲಿ ಆರೋಗ್ಯವಾಗಿದ್ದಾರೆ ಹಾಗೂ  ಶುಕ್ರವಾರ ವುಡ್‌ಲ್ಯಾಂಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಮನೆಯಲ್ಲಿ ಪ್ರತ್ಯೇಕವಾಗಿರುತ್ತಾರೆ ಎಂದು ವೈದ್ಯರು ಹೇಳಿದ್ದಾರೆ.

49 ವರ್ಷ ವಯಸ್ಸಿನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರು ಸೌಮ್ಯ ರೋಗಲಕ್ಷಣಗಳಿಂದ ಬಳಲುತ್ತಿದ್ದರು ಹಾಗೂ  ಆಸ್ಪತ್ರೆಯಲ್ಲಿ ತೀವ್ರ ನಿಗಾ ಇರಿಸಲಾಗಿತ್ತು. ಗಂಗುಲಿ ಅವರು ಸೋಮವಾರ ರಾತ್ರಿಯೇ "ಮೊನೊಕ್ಲೋನಲ್ ಆ್ಯಂಟಿಬಾಡಿ ಕಾಕ್‌ಟೈಲ್" ಚಿಕಿತ್ಸೆಯನ್ನು ಪಡೆದರು ಎಂದು ಆಸ್ಪತ್ರೆ ದೃಢಪಡಿಸಿದೆ.

ಈ ವರ್ಷ ಜನವರಿಯ ನಂತರ ಗಂಗುಲಿ ಅವರು ಮೂರನೇ ಬಾರಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಎದೆಯ ಅಸ್ವಸ್ಥತೆಯ ನಂತರ ಎರಡು ಬಾರಿ ದಾಖಲಾಗಿದ್ದರು. ಗಂಗುಲಿ ಅವರು ತಮ್ಮ ಕೋಲ್ಕತ್ತಾದ ಮನೆಯಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತಕ್ಕೆ ಒಳಗಾಗಿದ್ದರು ಹಾಗೂ  ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಿದ್ದರು.

 ಉತ್ತರಪ್ರದೇಶದಲ್ಲಿ ಬಿಜೆಪಿಯನ್ನು ಸೋಲಿಸುವ ಯಾವ ಪಕ್ಷಕ್ಕೂ ಪ್ರಚಾರ ಮಾಡಲು ಸಿದ್ಧ: ಡಾ. ಕಫೀಲ್‌ ಖಾನ್‌

ಉತ್ತರಪ್ರದೇಶದಲ್ಲಿ ಬಿಜೆಪಿಯನ್ನು ಸೋಲಿಸುವ ಯಾವ ಪಕ್ಷಕ್ಕೂ ಪ್ರಚಾರ ಮಾಡಲು ಸಿದ್ಧ: ಡಾ. ಕಫೀಲ್‌ ಖಾನ್‌


 ಉತ್ತರಪ್ರದೇಶದಲ್ಲಿ ಬಿಜೆಪಿಯನ್ನು ಸೋಲಿಸುವ ಯಾವ ಪಕ್ಷಕ್ಕೂ ಪ್ರಚಾರ ಮಾಡಲು ಸಿದ್ಧ: ಡಾ. ಕಫೀಲ್‌ ಖಾನ್‌

ಜೈಪುರ: ಗೋರಖ್‌ಪುರದ ಬಿಆರ್‌ಡಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಕ್ಕಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಕಳೆದ ತಿಂಗಳು ವಜಾಗೊಂಡ ಮಕ್ಕಳ ವೈದ್ಯ ಕಫೀಲ್ ಖಾನ್, ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಯಾವುದೇ ಪಕ್ಷದ ಪರವಾಗಿ ಪ್ರಚಾರ ಮಾಡಲು ಸಿದ್ಧ ಎಂದು ಗುರುವಾರ ಹೇಳಿದ್ದಾರೆ.

2017 ರಲ್ಲಿ ಆಸ್ಪತ್ರೆಯಲ್ಲಿ ನಡೆದಿದ್ದ ದುರಂತದ ಬಗ್ಗೆ ತಮ್ಮ ಪುಸ್ತಕವನ್ನು ಬಿಡುಗಡೆ ಮಾಡಲು ಆಗಮಿಸಿದ್ದ ಖಾನ್, ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. 'ಗೋರಖ್‌ಪುರ ಆಸ್ಪತ್ರೆ ದುರಂತ: ಎ ಡಾಕ್ಟರ್ಸ್ ಮೆಮೊಯಿರ್ ಆಫ್ ಎ ಡೆಡ್ಲಿ ಮೆಡಿಕಲ್ ಕ್ರೈಸಿಸ್' ಎಂಬುವುದು ಅವರ ಪುಸ್ತಕದ ಶೀರ್ಷಿಕೆಯಾಗಿದೆ.

ಖಾನ್ ಪ್ರಕಾರ, ಪುಸ್ತಕವು 2017ರ ದುರಂತದ ಕುರಿತು ವಿವರಿಸುತ್ತದೆ ಮತ್ತು ಆಮ್ಲಜನಕದ ಕೊರತೆಯಿಂದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದವರ ಕುಟುಂಬ ಸದಸ್ಯರ ಹೇಳಿಕೆಗಳನ್ನೂ ಒಳಗೊಂಡಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಖಾನ್, "ನಾನು (ಉತ್ತರ ಪ್ರದೇಶ ವಿಧಾನಸಭೆ) ಚುನಾವಣೆಯಲ್ಲಿ ಸ್ಪರ್ಧಿಸಲು ಹೋಗುವುದಿಲ್ಲ, ಆದರೆ (ಉತ್ತರ ಪ್ರದೇಶ ಮುಖ್ಯಮಂತ್ರಿ) ಯೋಗಿ ಆದಿತ್ಯನಾಥ್ ಮತ್ತು ಬಿಜೆಪಿಯನ್ನು ಸೋಲಿಸುವ ಯಾವುದೇ ರಾಜಕೀಯ ಪಕ್ಷಕ್ಕಾಗಿ ನಾನು ಪ್ರಚಾರ ಮಾಡುತ್ತೇನೆ" ಎಂದು ಹೇಳಿದರು.

"ನನ್ನ ಎರಡನೇ ಅಮಾನತಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ ಹೊರತಾಗಿಯೂ ನನ್ನನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಚುನಾವಣೆಗೆ ಮುಂಚಿತವಾಗಿ ನನ್ನನ್ನು ವಜಾ ಮಾಡುವ ಮೂಲಕ ಆದಿತ್ಯನಾಥ್ ಅವರೇ ಸಮಸ್ಯೆಯನ್ನು ಸೃಷ್ಟಿಸಲು ಬಯಸಿದ್ದಾರೆ. "ಆದಿತ್ಯನಾಥ್ ಮುಖ್ಯಮಂತ್ರಿಯಾಗಲು ಯೋಗ್ಯರಲ್ಲ" ಎಂದು ಅವರು ಹೇಳಿದರು.

ಉತ್ತರ ಪ್ರದೇಶ ಚುನಾವಣೆಗೂ ಮುನ್ನ ತಮ್ಮ ಪುಸ್ತಕ ಬಿಡುಗಡೆಯಾಗುತ್ತಿರುವುದು ಕಾಕತಾಳೀಯ ಎಂದು ಖಾನ್ ಹೇಳಿದ್ದಾರೆ. ರಾಜ್ಯ ಚುನಾವಣೆಯ ಮೇಲೆ ಈ ಪುಸ್ತಕ ಪ್ರಭಾವ ಬೀರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ 15 ದಿನಗಳಲ್ಲಿ ಅವರ ಪುಸ್ತಕದ 5,000 ಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ ಎಂದು ಅವರು ಹೇಳಿದ್ದಾರೆ. ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡುವ ಆಸ್ಪತ್ರೆಯನ್ನು ರಾಜಸ್ಥಾನದಲ್ಲಿ ಸ್ಥಾಪಿಸಲು ಯೋಜಿಸುತ್ತಿದ್ದೇನೆ ಮತ್ತು ಅದಕ್ಕಾಗಿ ರಾಜ್ಯ ಸರ್ಕಾರದಿಂದ ಭೂಮಿಯನ್ನು ಪಡೆಯುವುದಾಗಿ ಅವರು ಹೇಳಿದರು.

Thursday, 30 December 2021

ಝೀವಾನ್ ದಾಳಿಯಲ್ಲಿ ಭಾಗಿಯಾಗಿದ್ದ 3 ಜೆಇಎಂ ಉಗ್ರರ ಹತ್ಯೆ

ಝೀವಾನ್ ದಾಳಿಯಲ್ಲಿ ಭಾಗಿಯಾಗಿದ್ದ 3 ಜೆಇಎಂ ಉಗ್ರರ ಹತ್ಯೆ


ಝೀವಾನ್ ದಾಳಿಯಲ್ಲಿ ಭಾಗಿಯಾಗಿದ್ದ 3 ಜೆಇಎಂ ಉಗ್ರರ ಹತ್ಯೆ

ಶ್ರೀನಗರ,ಡಿ.31- ನಗರದ ಪಂಥಾ ಚೌಕ್ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‍ಕೌಂಟರ್‍ನಲ್ಲಿ ಜೈಷ್-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಮೂವರು ಉಗ್ರಗಾಮಿಗಳು ಹತರಾಗಿ ನಾಲ್ವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ ಉಗ್ರರಲ್ಲಿ ಓರ್ವ ಇಲ್ಲಿಗೆ ಸಮೀಪದ ಝೇವಾನ್ ಪ್ರದೇಶದಲ್ಲಿ ಡಿ.13ರಂದು ನಡೆದ ಬಸ್ ಮೇಲಿನ ದಾಳಿಯಲ್ಲಿ ಭಾಗಿಯಾಗಿದ್ದ ಎಂದು ಅವರು ಹೇಳಿದ್ದಾರೆ. ಹತ ಉಗ್ರರಲ್ಲಿ ಓರ್ವನನ್ನು ನಿಷೇಧಿತ ಉಗ್ರಗಾಮಿ ಸಂಘನೆ ಜೆಇಎಂನ ಸುಹೈಲ್ ಅಹ್ಮದ್ ರಾಥರ್ ಎಂದು ಗುರುತಿಲಾಗಿದೆ.

ಈತ ಝೆವಾನ್ ದಾಳಿಯಲ್ಲಿ ಪಾಲ್ಗೊಂಡಿದ್ದ ಎಂಬುದಾಗಿ ಕಾಶ್ಮೀರದ ಪೊಲೀಸ್ ಮಹಾನಿರೀಕ್ಷಕ ವಿಜಯಕುಮಾರ್ ನುಡಿದಿದ್ದಾರೆ.

ಝೆವಾನ್ ದಾಳಿಯಲ್ಲಿ ಪಾತ್ರ ವಹಿಸಿದ್ದ ಎಲ್ಲ ಉಗ್ರರನ್ನು ದಮನ ಮಾಡಲಾಗಿದೆ. ಆ ದಾಳಿ ನಡೆಸಿದ್ದ ಇಬ್ಬರು ಉಗ್ರರು ಗುರುವಾದ ಅನಂತನಾಗ್‍ನಲ್ಲಿ ನಡೆದ ಎನ್‍ಕೌಂಟರ್‍ನಲ್ಲಿ ಬಲಿಯಾಗಿದ್ದರು.


ಬೆಂಗಳೂರು ಬುಲ್ಸ್​ಗೆ ಹ್ಯಾಟ್ರಿಕ್ ಜಯ

ಬೆಂಗಳೂರು ಬುಲ್ಸ್​ಗೆ ಹ್ಯಾಟ್ರಿಕ್ ಜಯ


ಬೆಂಗಳೂರು ಬುಲ್ಸ್​ಗೆ ಹ್ಯಾಟ್ರಿಕ್ ಜಯ

ಬೆಂಗಳೂರು ಬುಲ್ಸ್ ತಂಡದ ಬಹುತೇಕ ರೇಡಿಂಗ್ ಮಾಡಿದ್ದು ಪವನ್ ಶೆರಾವತ್. ಮತ್ತೊಬ್ಬ ಪ್ರಮುಖ ರೇಡರ್ ಚಂದ್ರನ್ ರಂಜಿತ್ ಮಂಕಾಗಿ ಹೋದರೂ ಪವನ್ ನಿರೀಕ್ಷೆ ಹುಸಿ ಮಾಡಲಿಲ್ಲ. 42-28 ರಿಂದ ಹರಿಯಾಣ ಸ್ಟೀಲರ್ಸ್ ವಿರುದ್ಧ ಜಯಭೇರಿ ಬಾರಿಸಿ ಹ್ಯಾಟ್ರಿಕ್ ಸಾಧಿಸಿತು.

ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ ಗುರುವಾರದ ಪಂದ್ಯದಲ್ಲಿ ಪಿಂಕ್ ಪ್ಯಾಂಥರ್ಸ್ ವಿರುದ್ಧ ಯು ಮುಂಬಾ ಅಬ್ಬರಿಸಿದರೆ, ಹರಿಯಾಣ ಸ್ಟೀಲರ್ಸ್ ವಿರುದ್ಧ ಬೆಂಗಳೂರು ಬುಲ್ಸ್‌  ಭರ್ಜರಿ ಗೆಲುವು ಸಾಧಿಸಿತು. ವೈಟ್‌ಫೀಲ್ಡ್‌ನ ಗ್ರ್ಯಾಂಡ್ ಶೆರಟಾನ್ ಹೋಟೆಲ್‌ನಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡವು 42-28 ರಿಂದ ಹರಿಯಾಣ ಸ್ಟೀಲರ್ಸ್ ವಿರುದ್ಧ ಜಯಭೇರಿ ಬಾರಿಸಿ ಹ್ಯಾಟ್ರಿಕ್ ಸಾಧಿಸಿತು. ರೇಡರ್ ಪವನ್ 22 ಅಂಕಗಳನ್ನು ಗಳಿಸಿದರು. ಬೆಂಗಳೂರು ಬುಲ್ಸ್ ತಂಡದ ಬಹುತೇಕ ರೇಡಿಂಗ್ ಮಾಡಿದ್ದು ಪವನ್ ಶೆರಾವತ್. ಮತ್ತೊಬ್ಬ ಪ್ರಮುಖ ರೇಡರ್ ಚಂದ್ರನ್ ರಂಜಿತ್ ಮಂಕಾಗಿ ಹೋದರೂ ಪವನ್ ನಿರೀಕ್ಷೆ ಹುಸಿ ಮಾಡಲಿಲ್ಲ. ಸಮರ್ಥವಾಗಿ ನಿಭಾಯಿಸಿದ ಪವನ್ 29 ರೇಡಿಂಗ್ ಮಾಡಿ 22 ಅಂಕಗಳನ್ನ ಬಾಚಿಹಾಕಿದರು.

ಪವನ್ ಆರಂಭದಿಂದಲೇ ಪಾರಮ್ಯ ಮೆರೆದರು. ಇದರಿಂದಾಗಿ ಬೆಂಗಳೂರು ತಂಡವು ಅರ್ಧವಿರಾಮದ ವೇಳೆಗೆ ಬೆಂಗಳೂರು 19-13ರಿಂದ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಎರಡು ಬಾರಿ ಆಲೌಟ್ ಪಾಯಿಂಟ್ಸ್ ಪಡೆಯಿತು. ನಂತರದ ಅವಧಿಯಲ್ಲಿಯೂ ಮುನ್ನಡೆಯನ್ನು ಬಿಟ್ಟುಕೊಡಲಿಲ್ಲ. ಬೆಂಗಳೂರು ಬುಲ್ಸ್ ತಂಡದ ಡಿಫೆನ್ಸ್ ಬಲಿಷ್ಠವಾಗಿತ್ತು. ರೇಡರ್ ಜಿ.ಬಿ. ಮೋರೆ ಡಿಫೆನ್ಸ್​ನಲ್ಲಿ ತಮ್ಮ ನೈಪುಣ್ಯ ಮೆರೆದರು. ಅವರು ಗಳಿಸಿದ ಐದು ಅಂಕಗಳೆಲ್ಲವೂ ಟ್ಯಾಕಲ್ ಪಾಯಿಂಟ್​​ಗಳೇ ಆಗಿದ್ದವು. ಡಿಫೆಂಡರ್ ಮಹೇಂದರ್ ಸಿಂಗ್ 5 ಅಂಕ ಪಡೆದರು.

ಇನ್ನು ಹರ್ಯಾಣ ಸ್ಟೀಲರ್ಸ್ ತಂಡ ಇಂದು ಸಾಂಘಿಕ ಪ್ರದರ್ಶನ ತೋರಿದರೂ ಕ್ಷೇತ್ರ ರಕ್ಷಣೆಯಲ್ಲಿ ಎಡವಿತು. ವಿಕಾಸ್ ಕಂಡಾಲ 7 ಅಂಕ ಗಳಿಸಿದರು. ಜೈದೀಪ್, ರೋಹಿತ್ ಗುಲಿಯಾ, ಮೀತು ಪಟೇಲ್, ಆಶೀಶ್ ಒಂದಷ್ಟು ಅಂಕ ಗಳಿಸಿದರು. ಸ್ಟಾರ್ ಡಿಫೆಂಡರ್ ಸುರೇಂದರ್ ನಡ್ಡಾ ಒಳ್ಳೆಯ ಲಯದಲ್ಲಿರಲಿಲ್ಲ. ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ತಂಡಗಳು ಇವತ್ತಿನ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮೇಲೇರಿವೆ. ಬೆಂಗಳೂರು ಬುಲ್ಸ್ ಎರಡನೇ ಸ್ಥಾನಕ್ಕೆ ಏರಿದರೆ, ಯು ಮುಂಬಾ ಮೂರನೇ ಸ್ಥಾನಕ್ಕೆ ಏರಿತು.

ಇದಕ್ಕೂ ಮುನ್ನ ನಡೆದ ಮೊದಲ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧ ಯು ಮುಂಬಾ 37-28 ಅಂಕಗಳಿಂದ ಜಯಭೇರಿ ಭಾರಿಸಿತು. ಯು ಮುಂಬಾ ಪರ ವಿ. ಅಜಿತ್ ಕುಮಾರ್ ಒಟ್ಟು 11 ಪಾಯಿಂಟ್ಸ್‌ನೊಂದಿಗೆ ಯಶಸ್ವಿ ರೈಡರ್‌ ಎನಿಸಿಕೊಂಡರೆ, ಅಭಿಷೇಕ್ ಸಿಂಗ್ 10 ಪಾಯಿಂಟ್ಸ್‌ನೊಂದಿಗೆ ಉತ್ತಮ ಸಾಥ್ ನೀಡಿದ್ರು. ಅಫ್ಘಾನಿಸ್ತಾನದ ಫಜೇಲ್ ಅತ್ರಾಚಲಿ 3 ಟ್ಯಾಕಲ್ ಪಾಯಿಂಟ್ಸ್‌ ಗಿಟ್ಟಿಸಿದರು. ಪಿಂಕ್ ಪ್ಯಾಂಥರ್ಸ್ ಪರ ಅರ್ಜುನ್ ದೇಶ್ವಾಲ್ 9 ರೈಡಿಂಗ್ ಪಾಯಿಂಟ್ಸ್, ವಿಶಾಲ್ 3 ಟ್ಯಾಕಲ್ ಪಾಯಿಂಟ್ಸ್, ಶೌಲ್ ಕುಮಾರ್ 2 ಟ್ಯಾಕಲ್ ಪಾಯಿಂಟ್ಸ್‌ನೊಂದಿಗೆ ಮಿಂಚಿದರು.ದಲಿತ ಬಾಲಕಿಯ ಹಲ್ಲೆ ಖಂಡಿಸಿ ಪ್ರತಿಭಟನೆ:   ಉತ್ತರಪ್ರದೇಶ ಕಾಂಗ್ರೆಸ್ ಮುಖಂಡನ ಬಂಧನ

ದಲಿತ ಬಾಲಕಿಯ ಹಲ್ಲೆ ಖಂಡಿಸಿ ಪ್ರತಿಭಟನೆ: ಉತ್ತರಪ್ರದೇಶ ಕಾಂಗ್ರೆಸ್ ಮುಖಂಡನ ಬಂಧನ


ದಲಿತ ಬಾಲಕಿಯ ಹಲ್ಲೆ ಖಂಡಿಸಿ ಪ್ರತಿಭಟನೆ: 
ಉತ್ತರಪ್ರದೇಶ ಕಾಂಗ್ರೆಸ್ ಮುಖಂಡನ ಬಂಧನ

ಅಮೇಥಿ: ಹದಿನಾರು ವರ್ಷದ ದಲಿತ ಬಾಲಕಿಗೆ ಥಳಿಸಿದ ಘಟನೆಗೆ ಸಂಬಂಧಿಸಿ ರಾಜ್ಯ ಸರಕಾರದ ವಿರುದ್ಧ ಗುರುವಾರ ಪ್ರತಿಭಟನೆ ನಡೆಸಿದ ಉತ್ತರಪ್ರದೇಶ ಕಾಂಗ್ರೆಸ್ ವರಿಷ್ಠ ಅಜಯ್ ಕುಮಾರ್ ಲಲ್ಲು ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅಜಯ್ ಕುಮಾರ್ ಲಲ್ಲು ನಾಯಕತ್ವದಲ್ಲಿ ದೊಡ್ಡ ಸಂಖ್ಯೆಯ ಕಾರ್ಯಕರ್ತರು ರಾಮಲೀಲಾ ಮೈದಾನದಿಂದ ಪ್ರತಿಭಟನಾ ರ್ಯಾಲಿ ಆರಂಭಿಸಿ ರಾಜೀವ್‌ ಗಾಂಧಿ ಟ್ರೈಸೆಕ್ಷನ್ನಲ್ಲಿ ಅಂತ್ಯಗೊಳಿಸಿದರು. ಅಲ್ಲದೆ, ಅಲ್ಲಿ ಧರಣಿ ಕುಳಿತರು.

ರಾಜ್ಯದಲ್ಲಿರುವ ಬಿಜೆಪಿ ಸರಕಾರ ಹಾಗೂ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು. ಅನಂತರ ಪೊಲೀಸರು ಲಲ್ಲು ಅವರನ್ನು ಬಂಧಿಸಿದರು. ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿರುವುದು ಹಾಗೂ ರಸ್ತೆಯಲ್ಲಿ ಕುಳಿತುಕೊಂಡಿರುವ ಆರೋಪದಲ್ಲಿ ಅಜಯ್ ಕುಮಾರ್ ಲಲ್ಲು ಅವರನ್ನು ಬಂಧಿಸಲಾಗಿದೆ ಎಂದು ಅಮೇಥಿ ಪೊಲೀಸ್ ಅಧೀಕ್ಷಕ ದಿನೇಶ್ ಸಿಂಗ್ ಹೇಳಿದ್ದಾರೆ.


 


13 ಜಿಲ್ಲೆಗಳಲ್ಲಿಂದು ಕೊರೋನಾ ಶೂನ್ಯ

13 ಜಿಲ್ಲೆಗಳಲ್ಲಿಂದು ಕೊರೋನಾ ಶೂನ್ಯ

13 ಜಿಲ್ಲೆಗಳಲ್ಲಿಂದು ಕೊರೋನಾ ಶೂನ್ಯ

ಬೆಂಗಳೂರು: ರಾಜ್ಯದಲ್ಲಿ ಇಂದು 299 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ. 318 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ 7117 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಶೇಕಡ 0.23 ರಷ್ಟಿದೆ.

ಒಟ್ಟು ಸೋಂಕಿತರ ಸಂಖ್ಯೆ 30,03,564 ಕ್ಕೆ ಏರಿಕೆಯಾಗಿದೆ.ಇದುವರೆಗೆ 38,301 ಜನ ಸೋಂಕಿತರ ಮೃತಪಟ್ಟಿದ್ದಾರೆ. 29,58,117 ಜನ ಗುಣಮುಖರಾಗಿದ್ದಾರೆ.

ಬೆಂಗಳೂರಿನಲ್ಲಿ ಇಂದು 210 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, ಒಬ್ಬರು ಮೃತಪಟ್ಟಿದ್ದಾರೆ. 207 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 5742 ಸಕ್ರಿಯ ಪ್ರಕರಣಗಳು ಇವೆ.

ಬಾಗಲಕೋಟೆ, ಬಳ್ಳಾರಿ, ಬೀದರ್, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಗದಗ, ಕಲಬುರ್ಗಿ, ಕೊಪ್ಪಳ, ರಾಯಚೂರು, ರಾಮನಗರ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಇಂದು ಯಾವುದೇ ಪ್ರಕರಣ ವರದಿಯಾಗಿಲ್ಲ.

ಬೆಂಗಳೂರು ನಗರ 210, ದಕ್ಷಿಣಕನ್ನಡ 12, ಉತ್ತರಕನ್ನಡ 13 ಹೊಸ ಪ್ರಕರಣ ವರದಿಯಾಗಿವೆ. ಬೆಂಗಳೂರು ಹಾಗೂ ಕೊಡಗು ಜಿಲ್ಲೆಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.


ಅಕಾಲಿಕ ಮಳೆ; ಚೆನ್ನೈನಲ್ಲಿ ರೆಡ್ ಅಲರ್ಟ್

ಅಕಾಲಿಕ ಮಳೆ; ಚೆನ್ನೈನಲ್ಲಿ ರೆಡ್ ಅಲರ್ಟ್


ಅಕಾಲಿಕ ಮಳೆ; ಚೆನ್ನೈನಲ್ಲಿ ರೆಡ್ ಅಲರ್ಟ್

ಚೆನ್ನೈ : ತಮಿಳುನಾಡಿನಲ್ಲಿ ಅಕಾಲಿಕವಾಗಿ ವ್ಯಾಪಕ ಮಳೆಯಾಗುತ್ತಿದ್ದು, ಚೆನ್ನೈ, ಕಾಂಚಿಪುರಂ, ತಿರುವಲ್ಲೂರು ಮತ್ತು ಚಿಂಗಲ್‌ ಪೇಟೆ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಚೆನ್ನೈನಲ್ಲಿ ವ್ಯಾಪಕ ಮಳೆಯಿಂದಾಗಿ ರಸ್ತೆ ಹಾಗೂ ಸುರಂಗ ಮಾರ್ಗಗಳು ಜಲಾವೃತವಾಗಿದ್ದು, ಮಳೆ ಸಂಬಂಧಿ ಅನಾಹುತ ಗಳಿಂದ ಮೂವರು ಮೃತಪಟ್ಟಿದ್ದಾರೆ.

ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಗ್ರೇಟರ್ ಚೆನ್ನೈ ಕಾರ್ಪೊರೇಷನ್‌ನ ಪ್ರವಾಹ ನಿಯಂತ್ರಣ ಕೊಠಡಿಗೆ ಭೇಟಿ ನೀಡಿ ಮಳೆ ಮತ್ತು ಪರಿಹಾರ ಕಾರ್ಯಗಳ ವೀಕ್ಷಣೆ ನಡೆಸಿದರು.

ಮಳೆ ಸಂಬಂಧಿ ಅನಾಹುತಗಳಿಂದಾಗಿ ಇಬ್ಬರು ಮಹಿಳೆಯರು ಮತ್ತು ಬಾಲಕ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ ಎಂದು ರಾಜ್ಯದ ಕಂದಾಯ ಮತ್ತು ವಿಕೋಪ ನಿರ್ವಹಣೆ ಸಚಿವ ಕೆಕೆಎಸ್‌ಎಸ್‌ಆರ್ ರಾಮಚಂದ್ರನ್ ಹೇಳಿದ್ದಾರೆ.

ವ್ಯಾಪಕ ಮಳೆಯಿಂದಾಗಿ ರಸ್ತೆ, ಸುರಂಗ ಮಾರ್ಗಗಳು ಜಲಾವೃತವಾಗಿರುವುದರಿಂದ ಸಂಚಾರ ವ್ಯವಸ್ಥೆ ಮತ್ತು ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡ ಹಿನ್ನೆಲೆಯಲ್ಲಿ, ಜನ ಸುರಕ್ಷಿತವಾಗಿ ಮನೆಗಳಿಗೆ ತಲುಪುವ ದೃಷ್ಟಿಯಿಂದ ಮೆಟ್ರೊ ರೈಲು ಸಂಚಾರವನ್ನು ಮಧ್ಯರಾತ್ರಿ 12ರವರೆಗೂ ವಿಸ್ತರಿಸಲಾಗಿತ್ತು.


ದೇಶದಲ್ಲಿ ಒಮೈಕ್ರಾನ್‌ಗೆ ಮೊದಲ ಬಲಿ;

ದೇಶದಲ್ಲಿ ಒಮೈಕ್ರಾನ್‌ಗೆ ಮೊದಲ ಬಲಿ;


ದೇಶದಲ್ಲಿ ಒಮೈಕ್ರಾನ್‌ಗೆ ಮೊದಲ ಬಲಿ; 

ಹೊಸದಿಲ್ಲಿ: ದೇಶದಲ್ಲಿ ಒಮೈಕ್ರಾನ್ ಪ್ರಬೇಧದ ಸೋಂಕು ಮೊದಲ ಬಲಿ ಪಡೆದಿದೆ. ಸೋಂಕು ಗುರುವಾರ ಪಂಜಾಬ್ ಮತ್ತು ಬಿಹಾರಕ್ಕೆ ಹರಡಿದ್ದು, ಸತತ ಎರಡನೇ ದಿನವೂ ಹೊಸ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ದೇಶಾದ್ಯಂತ ಹೊಸ ಪ್ರಬೇಧದ 1200ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ಮೂರೇ ದಿನದಲ್ಲಿ ಪ್ರಕರಣಗಳ ಸಂಖ್ಯೆ 2.6 ಪಟ್ಟು ಹೆಚ್ಚಿದೆ.

ಮಹಾರಾಷ್ಟ್ರದ ಪಿಂಪ್ರಿ-ಚಿಂಚವಾಡ್‌ನಲ್ಲಿ 52 ವರ್ಷ ವಯಸ್ಸಿನ ಒಮೈಕ್ರಾನ್ ಸೋಂಕಿತ ಮೃತಪಟ್ಟಿರುವುದನ್ನು ಸರ್ಕಾರ ಪ್ರಕಟಿಸಿದೆ. ಆದರೆ ಇದು ಒಮೈಕ್ರಾನ್‌ನ ಮೊದಲ ಬಲಿ ಎಂದು ಇನ್ನೂ ದೃಢಪಡಿಸಿಲ್ಲ. ಏಕೆಂದರೆ ಈ ವ್ಯಕ್ತಿ ಗಂಭೀರ ಆರೋಗ್ಯ ಸಮಸ್ಯೆ ಹೊಂದಿದ್ದರು ಎನ್ನಲಾಗಿದೆ.

ದೇಶದಲ್ಲಿ ಗುರುವಾರ 16,700 ಹೊಸ ಪ್ರಕರಣಗಳು ವರದಿಯಾಗಿದ್ದು, ಇದು ಬುಧವಾರ ದೃಢಪಟ್ಟ ಪ್ರಕರಣಗಳಿಗಿಂತ ಶೇಕಡ 27ರಷ್ಟು ಅಧಿಕ. ಸೋಮವಾರದ ಬಳಿಕ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 2.6 ಪಟ್ಟು ಹೆಚ್ಚಿದೆ. ಗುರುವಾರ ತಡರಾತ್ರಿವರೆಗೆ 16695 ಪ್ರಕರಣಗಳು ವರದಿಯಾಗಿದ್ದು, ಇನ್ನೂ ಕೆಲವು ರಾಜ್ಯಗಳ ವರದಿಗಳು ಬಂದಿಲ್ಲ. ಇದು 71 ದಿನಗಳಲ್ಲೇ ಗರಿಷ್ಠ ಸಂಖ್ಯೆಯಾಗಿದ್ದು, ಅಕ್ಟೋಬರ್ 20ರಂದು 18,388 ಪ್ರಕರಣಗಳು ವರದಿಯಾಗಿದ್ದವು.

ಸೋಮವಾರ ಕೇವಲ 6242 ಪ್ರಕರಣ ದೇಶದಲ್ಲಿ ಪತ್ತೆಯಾಗಿದ್ದು, ಆ ಬಳಿಕ ಗಣನೀಯವಾಗಿ ಹೆಚ್ಚುತ್ತಿದೆ. ಮುಂಬೈ, ದೆಹಲಿ, ಕೊಲ್ಕತ್ತಾ, ಬೆಂಗಳೂರು ಮತ್ತಿತರ ಮೆಟ್ರೊ ನಗರಗಳಲ್ಲಿ ಪ್ರಕರಣ ಗಣನೀಯವಾಗಿ ಹೆಚ್ಚುತ್ತಿದೆ. ಈಶಾನ್ಯ ರಾಜ್ಯಗಳು ಮತ್ತು ಕೇರಳ ಹೊರತುಪಡಿಸಿ ಉಳಿದೆಲ್ಲ ಕಡೆಗಳಲ್ಲಿ ಪ್ರಕರಣಗಳು ಹೆಚ್ಚುತ್ತಿವೆ.

ಮಹಾರಾಷ್ಟ್ರದಲ್ಲಿ ಒಂದೇ ದಿನ ಹೊಸ ಪ್ರಕರಣಗಳ ಪ್ರಮಾಣ ಶೇಕಡ 40ರಷ್ಟು ಹೆಚ್ಚಿದ್ದು, 5368 ಪ್ರಕರಣಗಳು ಬೆಳಕಿಗೆ ಬಂದಿವೆ. ಬುಧವಾರ 1089 ಪ್ರಕರಣಗಳು ದಾಖಲಾಗಿದ್ದ ಬಂಗಾಳದಲ್ಲಿ ಗುರುವಾರ 2128 ಪ್ರಕರಗಳು ಪತ್ತೆಯಾಗಿವೆ. ಕೊಲ್ಕತ್ತಾದಲ್ಲಿ ಶೇಕಡ 102ರಷ್ಟು ಏರಿಕೆ ಉಂಟಾಗಿದೆ. ದೆಹಲಿಯಲ್ಲಿ 1313 ಪ್ರಕರಣಗಳು ವರದಿಯಾಗಿವೆ.

2423 ಪ್ರಕರಣಗಳು ಬೆಳಕಿಗೆ ಬಂದಿರುವ ಕೇರಳದಲ್ಲಿ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಆದರೆ ನೆರೆಯ ತಮಿಳುನಾಡಿನಲ್ಲಿ 890 ಪ್ರಕರಣಗಳು ಹೊಸದಾಗಿ ಪತ್ತೆಯಾಗಿದ್ದು, ಕರ್ನಾಟಕದಲ್ಲಿ 707 ಪ್ರಕರಣಗಳು ಬೆಳಕಿಗೆ ಬಂದಿವೆ. ಇದು ಸೆಪ್ಟೆಂಬರ್ 26ರ ಬಳಿಕ ದಾಖಲಾದ ಗರಿಷ್ಠ ಪ್ರಕರಣಗಳಾಗಿವೆ.

ರಾಜಸ್ಥಾನ (ಶೇಕಡ 92ರಷ್ಟು ಹೆಚ್ಚಳ), ಬಿಹಾರ (71%), ಪಂಜಾಬ್ (67%), ಉತ್ತರಪ್ರದೇಶ (64%), ಗೋವಾ (54%), ಮಧ್ಯಪ್ರದೇಶ (50%), ಛತ್ತೀಸ್‌ಗಢ (42%), ಜಾರ್ಖಂಡ್ (40%) ಮತ್ತು ಹರ್ಯಾಣ (38%) ರಾಜ್ಯಗಳಲ್ಲೂ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ.


 

Sunday, 26 December 2021

ಚಿಕ್ಕಮಗಳೂರು ನಗರಸಭೆ ಚುನಾವಣೆ: ಮತದಾನ ಆರಂಭ

ಚಿಕ್ಕಮಗಳೂರು ನಗರಸಭೆ ಚುನಾವಣೆ: ಮತದಾನ ಆರಂಭ


ಚಿಕ್ಕಮಗಳೂರು ನಗರಸಭೆ ಚುನಾವಣೆ: ಮತದಾನ ಆರಂಭ

ಚಿಕ್ಕಮಗಳೂರು, ಡಿ.27: ಇಲ್ಲಿನ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ 7ರಿಂದ ಮತದಾನ ಪ್ರಕ್ರಿಯೆ ಆರಂಭವಾಗಿದೆ.

ಬೆಳಗ್ಗೆ 10ರವರೆಗೆ ಮಂದಗತಿಯಲ್ಲಿ ಮತದಾನವಾಗಿದ್ದರೆ, ಆ ಬಳಿಕ ಮತದಾನ ಪ್ರಕ್ರಿಯೆ ಬಿರುಸು ಪಡೆದುಕೊಂಡಿದೆ. ನಗರಸಭೆ ವ್ಯಾಪ್ತಿಯ 35 ವಾರ್ಡ್ ಗಳ 35 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ನಗರದಲ್ಲಿ ಒಟ್ಟು 110 ಮತಗಟ್ಟೆಗಳಲ್ಲಿ ಮತದಾನಕ್ಕೆ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡುತ್ತಿದ್ದಾರೆ.

ನಗರಸಭೆಯ 35 ಸ್ಥಾನಗಳಿಗೆ 146 ಅಭ್ಯರ್ಥಿಗಳು ಕಣದಲ್ಲಿದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಆಪ್, ಸಿಪಿಐ, ಬಿಎಸ್ಪಿ, ಎಸ್ಡಿಪಿಐ ಪಕ್ಷಗಳ ಅಭ್ಯರ್ಥಿಗಳೊಂದಿಗೆ 56 ಪಕ್ಷೇತರರು ಚುನಾವಣೆಗೆ ಸ್ಪರ್ಧಿಸಿದ್ದಾರೆ.

ಪ್ರತೀ ಮತಗಟ್ಟೆಗಳ ಎದುರು ವಿವಿಧ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳು ಮತಗಟ್ಟೆಗೆ ಬರುವ ಮತದಾರರ ಸೆಳೆಯಲು ಕಸರತ್ತು ನಡೆಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.

ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಹಾಗೂ ಪತ್ನಿ ಪಲ್ಲವಿ ಸೋಮವಾರ ನಗರದ ವಾರ್ಡ್ ಸಂಖ್ಯೆ 28ರ ಮತಗಟ್ಟೆ ಸಂಖ್ಯೆ 99ರಲ್ಲಿ ಮತದಾನ ಮಾಡಿದರು. 

ಶಾಂತಿಯುತ ಮತದಾನದ ಹಿನ್ನೆಲೆಯಲ್ಲಿ ಪ್ರತೀ ಮತಗಟ್ಟೆ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಚಿಕ್ಕಮಗಳೂರು ನಗರಸಭೆ ವ್ಯಾಪ್ತಿಯಲ್ಲಿ 1,00,610 ಮತದಾರರಿದ್ದು, ಈ ಮತದಾರರು 146 ಮತದಾರರ ಭವಿಷ್ಯವನ್ನು ಇವಿಎಂ ಯಂತ್ರಗಳಲ್ಲಿ ಭದ್ರಪಡಿಸಲಿದ್ದಾರೆ. ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ.


ಬಸ್ಸಿನಲ್ಲಿ ಬೆಂಕಿ: ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅವಘಡ

ಬಸ್ಸಿನಲ್ಲಿ ಬೆಂಕಿ: ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅವಘಡ

ಬಸ್ಸಿನಲ್ಲಿ ಬೆಂಕಿ: ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅವಘಡ

ಬೆಳ್ತಂಗಡಿ: ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರೆಲ್ಲರೂ ಯಾವುದೇ ಅಪಾಯವಿಲ್ಲದೆ ಪಾರಾದ ಘಟನೆ ಬೆಳ್ತಂಗಡಿ ತಾಲೂಕಿನ ನಿಡ್ಲೆ ಸಮೀಪ ಕಳೆದ ರಾತ್ರಿ ಸಂಭವಿಸಿರುವುದು ವರದಿಯಾಗಿದೆ.

ಸುಗಮ ಹೆಸರಿನ ಖಾಸಗಿ ಬಸ್ ಕಾರ್ಕಳದಿಂದ ರಾತ್ರಿ ಬೆಂಗಳೂರಿಗೆ ಹೊಟಿತ್ತು. ಬಸ್ ನಿಡ್ಲೆ ಬಳಿ ತಲುಪಿದಾಗ ಬಸ್ಸಿನ ಮುಂಭಾಗದಲ್ಲಿರುವ ಇಂಜಿನ್ ಸಮೀಪ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ತಕ್ಷಣವೇ ಬಸ್ಸನ್ನು ನಿಲ್ಲಿಸಿದ್ದು, ಪ್ರಯಾಣಿಕರನ್ನೆಲ್ಲ ಕೂಡಲೇ ಬಸ್ಸಿನಿಂದ ಕೆಳಗಿಳಿಸಿದ್ದಾರೆ.

ಈ ವೇಳೆ ವಿಷಯ ತಿಳಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದು ಬೆಂಕಿ ನಂದಿಸಲು ಸಹಕರಿಸಿದ್ದಾರೆ. ಅಷ್ಟರಲ್ಲಿ ಸ್ಥಳಕ್ಕೆ ಬೆಳ್ತಂಗಡಿ ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಾ ಆಗಮಿಸಿದ್ದು, ಬೆಂಕಿಯನ್ನು ಸಂಪೂರ್ಣ ನಂದಿಸಿದ್ದಾರೆ.

ಬಸ್ಸಿನ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿರುವುದನ್ನು ಚಾಲಕ ಆರಂಭದಲ್ಲೇ ಗುರುರತಿಸಿ ಬಸ್ಸನ್ನು ನಿಲ್ಲಿಸಿದ್ದರಿಂದ ಯಾವುದೇ ಹೆಚ್ಚಿನ ಅಪಾಯವಿಲ್ಲದೆ ಬೆಂಕಿ ನಂದಿಸಲು ಸಾಧ್ಯವಾಗಿದೆ. 


ಬೆಂಗಳೂರು ಬುಲ್ಸ್‌ಗೆ ರೋಚಕ ಜಯ

ಬೆಂಗಳೂರು ಬುಲ್ಸ್‌ಗೆ ರೋಚಕ ಜಯ


ಬೆಂಗಳೂರು ಬುಲ್ಸ್‌ಗೆ ರೋಚಕ ಜಯ

ಬೆಂಗಳೂರು: ಅಂಕಣದಲ್ಲಿ ಮಿಂಚಿನ ಸಂಚಲನ ಮೂಡಿಸಿದ ಪವನ್ ಶೆರಾವತ್ ಅಮೋಘ ದಾಳಿಗಳ ನೆರವಿನಿಂದ ಬೆಂಗಳೂರು ಬುಲ್ಸ್ ತಂಡವು ಭಾನುವಾರ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಬೆಂಗಾಲ್ ವಾರಿಯರ್ಸ್ ಎದುರು ರೋಚಕ ಜಯ ಸಾಧಿಸಿತು.

ವೈಟ್‌ಫೀಲ್ಡ್‌ನ ಶೆರಟಾನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡವು 36-35ರಿಂದ ಬೆಂಗಾಲ್ ಬಳಗವನ್ನು ಮಣಿಸಿತು.

15 ಅಂಕಗಳನ್ನು ಗಳಿಸಿದ ನಾಯಕ ಪವನ್ ತಂಡದ ಗೆಲುವಿನ ರೂವಾರಿಯಾದರು. ಮಣಿಂದರ್ ಸಿಂಗ್ 17 ಅಂಕ ಗಳಿಸಿ ಬೆಂಗಾಲಕ್ಕೆ ಬಲ ತುಂಬಿದರು. ಆದರೆ ತಂಡವು ಗೆಲುವಿನ ಅಂಚಿನಲ್ಲಿ ಎಡವಿತು.

ಆದರೆ ಪಂದ್ಯದುದ್ದಕ್ಕೂ ಪವನ್ ಮತ್ತು ಮಣಿಂದರ್ ನಡುವಿನ ಜಿದ್ದಾಜಿದ್ದಿಯು ಮೈನವಿರೇಳಿಸಿತು. ಬೆಂಗಳೂರು ತಂಡದ ಚಂದ್ರನ್ ರಂಜೀತ್ ಕೂಡ ಮಿಂಚಿನ ದಾಳಿ ನಡೆಸಿದರು. ಆರು ಅಂಕ ಗಳಿಸಿದರು.

ಬೆಂಗಾಲ್ ತಂಡದಲ್ಲಿ ಆಲ್‌ರೌಂಡರ್ ಮೊಹಮ್ಮದ್ ನಬಿಭಕ್ಷ್ (8 ಪಾಯಿಂಟ್) ಕೂಡ ಅಮೋಘ ಆಟವಾಡಿದರು. ಆದರೆ, ತಂಡವು ಕೇವಲ ಒಂದು ಅಂಕ ಅಂತರದಿಂದ ಸೋತಿತು. ಬೆಂಗಳೂರು ತಂಡಕ್ಕೆ ಟೂರ್ನಿಯಲ್ಲಿ ಇದು ಎರಡನೇ ಜಯವಾಗಿದೆ.

ರೋಚಕ ಟೈ: ಗುಜರಾತ್ ಜೈಂಟ್ಸ್‌ ಮತ್ತು ದಬಂಗ್ ಡೆಲ್ಲಿ ನಡುವಣ ನಡೆದ ಇನ್ನೊಂದು ಪಂದ್ಯವು 24-24ರಿಂದ ರೋಚಕ ಟೈನಲ್ಲಿ ಅಂತ್ಯವಾಯಿತು. ಡೆಲ್ಲಿ ತಂಡದ ನವೀನಕುಮಾರ್ (11 ಪಾಯಿಂಟ್ ) ಮತ್ತು ಗುಜರಾತ್ ತಂಡದ ರಾಕೇಶ್ ನರ್ವಾಲ್ (9 ಪಾಯಿಂಟ್ಸ್) ಜಿದ್ದಾಜಿದ್ದಿನ ಪೈಪೋಟಿಯಿಂದಾಗಿ ಉಭಯ ತಂಡಗಳು ಸೋಲಿನಿಂದ ತಪ್ಪಿಸಿಕೊಂಡವು. ಗುಜರಾತ್ ತಂಡದ ಡಿಫೆಂಡರ್ ಸುನೀಲ್ ಕುಮಾರ್ ಕೂಡ ಮಿಂಚಿದರು ಅವರು ನಾಲ್ಕು ಅಂಕಗಳ ಕಾಣಿಕೆಯನ್ನು ತಂಡಕ್ಕೆ ನೀಡಿದರು.


​ಕಾರಿನಲ್ಲಿ ಅನಾಥವಾಗಿತ್ತು ಶವ.

​ಕಾರಿನಲ್ಲಿ ಅನಾಥವಾಗಿತ್ತು ಶವ.


​ಕಾರಿನಲ್ಲಿ ಅನಾಥವಾಗಿತ್ತು ಶವ.

ಆನೇಕಲ್: ಎರಡು ತಿಂಗಳ ಹಿಂದೆ ಕಂಪನಿ ಕ್ಲೋಸ್ ಮಾಡಿದ್ದ ವ್ಯಕ್ತಿಯ ಬದುಕು ಕೂಡ ಇದೀಗ ಅಂತ್ಯವಾಗಿದ್ದು, ಎಸ್ಟೀಮ್​ ಕಾರಿನಲ್ಲಿ ಶವ ಅನಾಥವಾಗಿರುವುದು ಕಂಡುಬಂದಿದೆ. ಅನುಮಾನಾಸ್ಪದ ರೀತಿಯಲ್ಲಿ ಶವ ಪತ್ತೆಯಾಗಿದೆ.

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹುಲಿಮಂಗಲ ಸಮೀಪದ ನಂಜಾಪುರ ರಸ್ತೆಯಲ್ಲಿ ಈ ಶವ ಪತ್ತೆಯಾಗಿದೆ.

ಶವ ಕಂಡುಬಂದಿರುವ ಮಾರುತಿ ಎಸ್ಟೀಮ್​ ಕಾರಿನ ಎಲ್ಲ ಗ್ಲಾಸ್​ ಕ್ಲೋಸ್ ಆಗಿದ್ದು, ಸಾವಿಗೀಡಾದ ವ್ಯಕ್ತಿ ಬೆಂಗಳೂರಿನ ಡೇರಿ ಸರ್ಕಲ್​ ನಿವಾಸಿ ಪಾರ್ಥಸಾರಥಿ ಎಂದು ಗುರುತಿಸಲಾಗಿದೆ. ಸಾವಿಗೂ ಮುನ್ನ ಈ ವ್ಯಕ್ತಿ ಬೇಸರದಲ್ಲಿ ಗದ್ಗದಿತರಾಗಿ ತಮಿಳಿನಲ್ಲಿ ಮಾತನಾಡುತ್ತ ನೋವು ತೋಡಿಕೊಂಡ ವಿಡಿಯೋ ತುಣುಕುಗಳು ಕೂಡ ಲಭಿಸಿವೆ.

ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ಕಂಪನಿಯೊಂದನ್ನು ಹೊಂದಿದ್ದ ಇವರು ನಷ್ಟದಿಂದಾಗಿ ಎರಡು ತಿಂಗಳ ಹಿಂದೆ ಅದನ್ನು ಕ್ಲೋಸ್ ಮಾಡಿದ್ದರು. ಅವರ ಶವ ಕಾರಿನ ಡ್ರೈವರ್ ಸೀಟ್​ನಲ್ಲಿ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕಾರಿನಲ್ಲಿ ಮದ್ಯ ಹಾಗೂ ನೀರಿನ ಬಾಟಲಿ ಪತ್ತೆಯಾಗಿದೆ. ಆರ್ಥಿಕ ಮುಗ್ಗಟ್ಟಿನಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಜಿಗಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಆಸ್ಟ್ರೇಲಿಯಾದಲ್ಲಿ ಒಮಿಕ್ರಾನ್ ನಿಂದ ಮೊದಲ ಸಾವು ದೃಢ :

ಆಸ್ಟ್ರೇಲಿಯಾದಲ್ಲಿ ಒಮಿಕ್ರಾನ್ ನಿಂದ ಮೊದಲ ಸಾವು ದೃಢ :


ಆಸ್ಟ್ರೇಲಿಯಾದಲ್ಲಿ ಒಮಿಕ್ರಾನ್ ನಿಂದ ಮೊದಲ ಸಾವು ದೃಢ : 

ಸಿಡ್ನಿ:ಆಸ್ಟ್ರೇಲಿಯಾದಲ್ಲಿ ಒಮಿಕ್ರಾನ್ ಸೊಂಕು ದಿನೇ ದಿನೇ ಹೆಚ್ಚಾಗುತ್ತಿದ್ದು, ಓಮಿಕ್ರಾನ್  ರೂಪಾಂತರದಿಂದ ಅದರ ಮೊದಲ ಸಾವನ್ನು ದೃಢಪಡಿಸಿದೆ.ನ್ಯೂ ಸೌತ್ ವೇಲ್ಸ್ ರಾಜ್ಯವು ಸೋಮವಾರ 6,000 ಕ್ಕೂ ಹೆಚ್ಚು ಹೊಸ COVID-19 ಪ್ರಕರಣಗಳನ್ನು ವರದಿ ಮಾಡಿದೆ.

80 ರ ವಯಸ್ಸಿನ ವ್ಯಕ್ತಿ ಪಶ್ಚಿಮ ಸಿಡ್ನಿಯಲ್ಲಿ ಸೋಂಕಿಗೆ ಒಳಗಾಗಿದ್ದಾರೆ.ಅವರು ಸಂಪೂರ್ಣವಾಗಿ ಲಸಿಕೆಯನ್ನು ಹಾಕಿಸಿಕೊಂಡಿದ್ದರು. ಆದರೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರು.

ದೇಶದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾದ ವಿಕ್ಟೋರಿಯಾ ಭಾನುವಾರ 1,608 ಹೊಸ COVID-19 ಪ್ರಕರಣಗಳು ಮತ್ತು ಎರಡು ಸಾವುಗಳನ್ನು ವರದಿ ಮಾಡಿದೆ, 374 ಜನರು ಆಸ್ಪತ್ರೆಗಳಲ್ಲಿದ್ದಾರೆ, 77 ಜನರು ತೀವ್ರ ನಿಗಾದಲ್ಲಿದ್ದಾರೆ.ವಿಕ್ಟೋರಿಯಾದಲ್ಲಿ 30,000 ಕ್ಕೂ ಹೆಚ್ಚು ಜನರು ಕ್ರಿಸ್ಮಸ್ ಅನ್ನು ಮನೆಯಲ್ಲಿಯೇ ಆಚರಿಸಿದರು, ಕುಟುಂಬ ಅಥವಾ ಸ್ನೇಹಿತರೊಂದಿಗೆ ಆಚರಿಸಲು ಸಾಧ್ಯವಾಗಲಿಲ್ಲ.

ಮಂಗಳೂರಿನಲ್ಲಿ ವಿದ್ಯಾರ್ಥಿ ನೇಣಿಗೆ ಶರಣು

ಮಂಗಳೂರಿನಲ್ಲಿ ವಿದ್ಯಾರ್ಥಿ ನೇಣಿಗೆ ಶರಣು


ಮಂಗಳೂರಿನಲ್ಲಿ ವಿದ್ಯಾರ್ಥಿ ನೇಣಿಗೆ ಶರಣು

ಮಂಗಳೂರು: ಇಲ್ಲಿನ ಸುರತ್ಕಲ್ ನ ಇಂಜಿನಿಯರಿಂಗ್ ಕಾಲೇಜ್ ನ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.

ಸೌರವ್ ಎನ್ನುವ ಬಿಹಾರದ ಜಮುಯಿ ಜಿಲ್ಲೆಯ ಓರೈಯಾ ಗ್ರಾಮದ ದ್ವಿತೀಯ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಸೌರವ್(19) ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ನನ್ನ ದೇಹದಲ್ಲಿ ಕೆಮಿಕಲ್ ರಿಯಾಕ್ಷನ್ ಆಗುತ್ತಿದೆ.

ಕೆಲಸ ಸಿಗುತ್ತದೆಯೋ ಗೊತ್ತಿಲ್ಲ, ಸಾಲ ಮಾಡಿ ಶಿಕ್ಷಣ ಮಾಡುತ್ತಿದ್ದೇನೆ ಎಂದು ತಂದೆ ಸುರೇಶ್ ಪ್ರಸಾದ್ಗೆ ತಿಳಿಸುವಂತೆ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನಗರ ಪೊಲೀಸ್ ಆಯುಕ್ತ ಎನ್.ಶಶಿ ಕುಮಾರ್ ಹೇಳಿದ್ದಾರೆ.

ಬೆಳಗ್ಗೆ 8 ಗಂಟೆಯ ವೇಳೆಗೆ ಬಾಗಿಲು ತೆಗೆಯದ ಹಿನ್ನಲೆಯಲ್ಲಿ , 9.30 ರ ವೇಳೆ ಕಿಟಕಿಯಿಂದ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಕೂಡಲೇ ಆತನ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಆದರೆ ಪೋಷಕರು, ನಾವು ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿದ್ದು, ಬರಲು ಕಷ್ಟವಾಗುತ್ತದೆ. ಅಲ್ಲಿಯೇ ಅಂತ್ಯಕ್ರಿಯೆ ಮಾಡಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಹತ್ತನೇ ತರಗತಿಯಲ್ಲಿ ಇರುವಾಗಲೂ ಸೌರವ್ ಆತ್ಮಹತ್ಯೆ ಯತ್ನ ಮಾಡಿದ್ದ ಎಂದು ತಿಳಿದು ಬಂದಿರುವುದಾಗಿ ನಗರ ಪೊಲೀಸ್ ಆಯುಕ್ತ ಎನ್.ಶಶಿ ಕುಮಾರ್ ಹೇಳಿದ್ದಾರೆ.

ಕಾಲೇಜಿನ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳ ಸಹಕಾರದಿಂದ ಪೋಷಕರನ್ನು ಕರೆಸಿಕೊಂಡು ಮೃತದೇಹವನ್ನ ಪಾಟ್ನಾ ಗೆ ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿದೆ. ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಅಮೆರಿಕದಲ್ಲಿ ಒಮೈಕ್ರಾನ್ :   ಆಸ್ಪತ್ರೆಗೆ ದಾಖಲಾಗುವ ಮಕ್ಕಳ ಸಂಖ್ಯೆ 4 ಪಟ್ಟು ಹೆಚ್ಚಳ

ಅಮೆರಿಕದಲ್ಲಿ ಒಮೈಕ್ರಾನ್ : ಆಸ್ಪತ್ರೆಗೆ ದಾಖಲಾಗುವ ಮಕ್ಕಳ ಸಂಖ್ಯೆ 4 ಪಟ್ಟು ಹೆಚ್ಚಳ

ಅಮೆರಿಕದಲ್ಲಿ ಒಮೈಕ್ರಾನ್ : 
ಆಸ್ಪತ್ರೆಗೆ ದಾಖಲಾಗುವ ಮಕ್ಕಳ ಸಂಖ್ಯೆ 4 ಪಟ್ಟು ಹೆಚ್ಚಳ

ವಾಷಿಂಗ್ಟನ್: ಅಮೆರಿಕದಲ್ಲಿ ಒಮೈಕ್ರಾನ್ ಪ್ರಕರಣಗಳ ಸಂಖ್ಯೆ ಕ್ಷಿಪ್ರವಾಗಿ ಹೆಚ್ಚುತ್ತಿರುವ ನಡುವೆಯೇ ಆಸ್ಪತ್ರೆಗೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ ಎಂದು ನ್ಯೂಯಾರ್ಕ್ ಆರೋಗ್ಯ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಏತನ್ಮಧ್ಯೆ ದೇಶದಲ್ಲಿ ಕೋವಿಡ್-19 ಪರೀಕ್ಷಾ ಕೊರತೆಯನ್ನು ಕ್ಷಿಪ್ರವಾಗಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶ್ವೇತಭವನ ಭರವಸೆ ನೀಡಿದೆ.

ಆಸ್ಪತ್ರೆಗೆ ಮಕ್ಕಳು ಅಧಿಕವಾಗಿ ದಾಖಲಾಗುತ್ತಿರುವುದಕ್ಕೆ ಕೋವಿಡ್-19 ಜತೆ ಸಂಬಂಧ ಇದೆ ಎಂದು ನ್ಯೂಯಾರ್ಕ್ ಸರ್ಕಾರಿ ಆರೋಗ್ಯ ಇಲಾಖೆ ಹೇಳಿಕೆ ನಿಡಿದೆ. "ನ್ಯೂಯಾರ್ಕ್ ನಗರದಲ್ಲಿ ಡಿಸೆಂಬರ್ 5ಕ್ಕೆ ಹೋಲಿಸಿದರೆ ಪ್ರಸಕ್ತ ವಾರದಲ್ಲಿ ಕೋವಿಡ್-19 ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ 18 ವರ್ಷಕ್ಕಿಂತ ಕೆಳವಯಸ್ಸಿನವರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಳವಾಗಿದೆ" ಎಂದು ಹೇಳಿದ್ದಾರೆ.

ಈ ಪೈಕಿ ಅರ್ಧದಷ್ಟು ಮಂದಿ ಐದು ವರ್ಷಕ್ಕಿಂತ ಕೆಳಗಿನವರು. ಈ ವರ್ಗದ ಮಕ್ಕಳು ಲಸಿಕೆ ಪಡೆಯಲು ಇನ್ನೂ ಅರ್ಹರಾಗಿಲ್ಲ. ಅಮೆರಿಕದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದ್ದು, ಕಳೆದ ಏಳು ದಿನಗಳಿಂದ ಸರಾಸರಿ ದೈನಿಕ ಹೊಸ ಸೋಂಕು ಪ್ರಕರಣಗಳ ಸಂಖ್ಯೆ 1,90,000 ಇದೆ ಎಂದು ಜಾನ್ ಹಾಕಿನ್ಸ್ ವಿವಿಯ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.

ಹೊಸದಾಗಿ ಒಮೈಕ್ರಾನ್ ಪ್ರಬೇಧದ ಸೋಂಕು ಕಾಣಿಸಿಕೊಂಡಿರುವುದು ಮತ್ತು ಹಬ್ಬದ ಸಂಭ್ರಮದಲ್ಲಿ ಕುಟುಂಬಗಳ ಮಿಲನ, ಪ್ರವಾಸದ ಕಾರಣದಿಂದ ಕೋವಿಡ್ ಪತ್ತೆ ಪರೀಕ್ಷೆಗೆ ಜನ ಮುಗಿ ಬಿದ್ದಿದ್ದಾರೆ. ಪರೀಕ್ಷಾ ಸಮಸ್ಯೆ ಇದೆ ಎಂದು ಅಮೆರಿಕದ ಸಾಂಕ್ರಾಮಿಕಗಳ ಸಲಹೆಗಾರ ಆಂಟೋನಿ ಫೌಸಿ ಒಪ್ಪಿಕೊಂಡಿದ್ದಾರೆ. ಮುಂದಿನ ತಿಂಗಳ ವೇಳೆಗೆ ಪರೀಕ್ಷೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.


ಬರೋಬ್ಬರಿ ₹257 ಕೋಟಿ ಜಪ್ತಿ;

ಬರೋಬ್ಬರಿ ₹257 ಕೋಟಿ ಜಪ್ತಿ;


ಬರೋಬ್ಬರಿ ₹257 ಕೋಟಿ ಜಪ್ತಿ; 

ಉತ್ತರ ಪ್ರದೇಶದ ಸುಗಂಧ ದ್ರವ್ಯ ಉದ್ಯಮಿ ಪಿಯೂಷ್ ಜೈನ್ ಬಂಧನ

ಉತ್ತರ ಪ್ರದೇಶದ ಕಾನ್ಪುರದ ಸುಗಂಧದ್ರವ್ಯ ಉದ್ಯಮಿ ಬಳಿಯಿಂದ 257 ಕೋಟಿ ರೂ. ಜಪ್ತಿ ಮಾಡಿರುವ ಅಧಿಕಾರಿಗಳು, ಸೋಮವಾರ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ.

ದೆಹಲಿ: ಸುಗಂಧ ದ್ರವ್ಯ ಉದ್ಯಮಿ ಮನೆ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಸುಗಂಧ ದ್ರವ್ಯ ಉದ್ಯಮಿ ಪಿಯೂಷ್ ಜೈನ್‌ ಎಂಬಾತನನ್ನು ಬಂಧಿಸಲಾಗಿದೆ.

ಜಿಎಸ್​ಟಿ ಇಂಟೆಲಿಜೆನ್ಸ್ ಅಧಿಕಾರಿಗಳಿಂದ ಉದ್ಯಮಿಯನ್ನು ಸೆರೆ ಹಿಡಿಯಲಾಗಿದೆ. ಉತ್ತರ ಪ್ರದೇಶದ ಕಾನ್ಪುರದ ಸುಗಂಧದ್ರವ್ಯ ಉದ್ಯಮಿ ಬಳಿಯಿಂದ 257 ಕೋಟಿ ರೂ. ಜಪ್ತಿ ಮಾಡಿರುವ ಅಧಿಕಾರಿಗಳು, ಸೋಮವಾರ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ.

ಕಾನ್ಪುರದ ಸುಗಂಧ ದ್ರವ್ಯ ಉದ್ಯಮಿ ಪಿಯೂಷ್ ಜೈನ್ (Piyush Jain) ಅವರ ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, ಇದುವರೆಗೆ ₹ 180 ಕೋಟಿ ನಗದು ವಶಪಡಿಸಲಾಗಿದೆ ಎಂದು ಐಟಿ ಇಲಾಖೆ  ಮೂಲಗಳು ಶುಕ್ರವಾರ ಬೆಳಿಗ್ಗೆ ತಿಳಿಸಿತ್ತು. ದಾಳಿಯ ಛಾಯಾಚಿತ್ರಗಳು ಎರಡು ದೊಡ್ಡ ವಾರ್ಡ್‌ರೋಬ್‌ಗಳಲ್ಲಿ ರಾಶಿ ಹಣವನ್ನು ತುಂಬಿರುವುದನ್ನು ತೋರಿಸಿತ್ತು.

ಎಲ್ಲಾ ಕಟ್ಟುಗಳನ್ನು ಪ್ಲಾಸ್ಟಿಕ್ ಕವರ್‌ಗಳಲ್ಲಿ ಸುತ್ತಿ ಹಳದಿ ಟೇಪ್‌ನಿಂದ ಭದ್ರಪಡಿಸಲಾಗಿದೆ. ಪ್ರತಿ ಫೋಟೋದಲ್ಲಿ 30 ಕ್ಕೂ ಹೆಚ್ಚು ಕಟ್ಟುಗಳು ಗೋಚರಿಸುತ್ತವೆ ಎಂದು ಎನ್​​ಡಿಟಿವಿ ವರದಿ ಮಾಡಿದೆ. ವಶಪಡಿಸಿಕೊಂಡ ಒಟ್ಟು ಹಣವನ್ನು ಇನ್ನೂ ಎಣಿಕೆ ಮಾಡಲಾಗುತ್ತಿದೆ. ಗುರುವಾರದಿಂದ ದಾಳಿ ಆರಂಭವಾಗಿದ್ದು, ಇನ್ನೂ ಮುಂದುವರಿದಿದೆ ಎಂದು ಮೂಲಗಳು ತಿಳಿಸಿತ್ತು.

ಉತ್ತರ ಪ್ರದೇಶದ ಕಾನ್ಪುರ, ಮುಂಬೈ ಮತ್ತು ಗುಜರಾತ್‌ನಲ್ಲಿ ದಾಳಿ ನಡೆಯುತ್ತಿದೆ. ತೆರಿಗೆ ವಂಚನೆಗಾಗಿ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಅಧಿಕಾರಿಗಳು ಈ ದಾಳಿಗಳನ್ನು ಪ್ರಾರಂಭಿಸಿದ್ದಾರೆ. ವಿವರಗಳನ್ನು ಪತ್ತೆಹಚ್ಚಿದ ನಂತರ ಐಟಿ ಅಥವಾ ಆದಾಯ ತೆರಿಗೆ ಇಲಾಖೆ ದಾಳಿ ಮಾಡಲಾಗಿತ್ತು.

Saturday, 25 December 2021

ಶಿವಮೊಗ್ಗಕ್ಕೆ ಬಂತು ವಿಸ್ಟೋಡಾಮ್ ರೈಲು ಬೋಗಿ, ವಿಶೇಷತೆಗಳು

ಶಿವಮೊಗ್ಗಕ್ಕೆ ಬಂತು ವಿಸ್ಟೋಡಾಮ್ ರೈಲು ಬೋಗಿ, ವಿಶೇಷತೆಗಳು


ಶಿವಮೊಗ್ಗಕ್ಕೆ ಬಂತು ವಿಸ್ಟೋಡಾಮ್ ರೈಲು ಬೋಗಿ, ವಿಶೇಷತೆಗಳು

ಶಿವಮೊಗ್ಗ; ಕರ್ನಾಟಕದ ಎರಡನೇ ವಿಸ್ಟಾಡೋಮ್ ರೈಲು ಬೋಗಿ ಶನಿವಾರ ಶಿವಮೊಗ್ಗಕ್ಕೆ ಆಗಮಿಸಿತು. ಮೊದಲ ದಿನವೇ ವಿಸ್ಟಾಡೋಮ್ ಬೋಗಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹೈಫೈ ಸೌಲಭ್ಯದ ಜೊತೆಗೆ ರೈಲು ಪ್ರಯಾಣಕ್ಕೆ ಹೊಸ ಅನುಭವ ನೀಡಲಿದೆ.

ಯಶವಂತಪುರ-ಶಿವಮೊಗ್ಗ ರೈಲಿಗೆ ವಿಸ್ಟಾಡಾಮ್ ಬೋಗಿ ಜೋಡಣೆ

ಮೊದಲ ಟ್ರಿಪ್‌ನಲ್ಲಿ ಶಿವಮೊಗ್ಗಕ್ಕೆ 7 ಪ್ರಯಾಣಿಕರು ವಿಸ್ಟಾಡೋಮ್ ಬೋಗಿಯಲ್ಲಿ ಪ್ರಯಾಣ ಮಾಡಿದ್ದಾರೆ. ಶಿವಮೊಗ್ಗ-ಯಶವಂತಪುರ ನಡುವೆ 8 ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಯಶವಂತಪುರ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಒಂದು ಹವಾನಿಯಂತ್ರಿತ ವಿಸ್ಟಾಡೋಮ್ ಬೋಗಿಯನ್ನು ತಾತ್ಕಾಲಿಕವಾಗಿ ಅಳವಡಿಸಲಾಗಿದೆ.

ಧಾರವಾಡ-ಬೆಳಗಾವಿ ನೇರ ರೈಲು ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ

ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ವಿಸ್ಟಾಡೋಮ್ ಬೋಗಿ ಬಗ್ಗೆ ಸಾರ್ವಜನಿಕರು, ರೈಲ್ವೆ ಇಲಾಖೆ ಸಿಬ್ಬಂದಿ ಕುತೂಹಲ ವ್ಯಕ್ತಪಡಿಸಿದರು. ಶಿವಮೊಗ್ಗಕ್ಕೆ ರೈಲು ಬರುತ್ತಿದ್ದಂತೆ ವಿಸ್ಟಾಡೋಮ್ ಬೋಗಿ ಹತ್ತಿದ ಜನರು, ಅದರ ವಿಶೇಷತೆಗಳನ್ನು ಕಣ್ತುಂಬಿಕೊಂಡು ಖುಷಿಪಟ್ಟರು. ರೈಲ್ವೆ ಬೋಗಿಯ ತುಂಬೆಲ್ಲ ಓಡಾಡಿ, ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ಯಶವಂತಪುರ-ತುಮಕೂರು ನಡುವೆ ಮೆಮು ರೈಲು ಇಲ್ಲ

ಈ ಬೋಗಿಯಲ್ಲಿ ಏನೆಲ್ಲ ವಿಶೇಷತೆಗಳಿವೆ

ವಿಸ್ಟೋಡಾಮ್ ಬೋಗಿ ಸಂಪೂರ್ಣ ಹವಾನಿಯಂತ್ರಿತವಾಗಿದೆ. 44 ಸೀಟರ್ ಬೋಗಿಯಲ್ಲಿ ಎಲ್ಲವೂ ಆಟೋಮೆಟಿಕ್ ವ್ಯವಸ್ಥೆ. ಬೋಗಿಯೊಳಗೆ ಹೋಗುತ್ತಿದ್ದಂತೆ ಗಾಜಿನ ಬಾಗಿಲು ತನ್ನಿಂತಾನೆ ತೆರೆದುಕೊಳ್ಳುತ್ತದೆ. ಲಗೇಜ್ ಇಡಲು ಪ್ರತ್ಯೇಕ ಕಂಪಾರ್ಟ್‌ಮೆಂಟ್ ವ್ಯವಸ್ಥೆ ಇದೆ. ಇನ್ನು, ಎರಡು ಬದಿಯಲ್ಲೂ ಎರಡು ಸೀಟರ್‌ ಸುಖಾಸನಗಳಿವೆ. ಈ ಆಸನಗಳು ರೈಲಿನ ಕಿಟಕಿಯ ಕಡೆಗೆ ತಿರುಗುತ್ತವೆ.

ಸೀಟುಗಳಿಗೆ ಪುಷ್ ಬ್ಯಾಕ್ ವ್ಯವಸ್ಥೆ ಇದೆ. ತಿಂಡಿ, ತಿನಿಸಿಗಳನ್ನು ಇಡಲು ಟ್ರೇ ಇದೆ. ಅದರಲ್ಲಿಯೇ ಕಪ್ ಹೋಲ್ಡರ್ ಕೂಡ ಇದೆ. ವಿಸ್ಟಾಡೋಮ್ ಬೋಗಿಯಲ್ಲಿ ದೊಡ್ಡ ಗಾಜಿನ ಕಿಟಕಿಗಳಿವೆ. ಮೇಲ್ಭಾಗದಲ್ಲಿಯೂ ಗಾಜುಗಳನ್ನು ಅಳವಡಿಸಲಾಗಿದೆ. ಇದರಿಂದ ಪ್ರಯಾಣಿಕರು ತಮ್ಮ ಸೀಟಿನಲ್ಲಿ ಕುಳಿತು ಆಕಾಶದೆಡೆಗೆ ಗಮನ ನೆಡಬಹುದಾಗಿದೆ. 

ಪುಟ್ಟ ಕಿಚನ್, ಡಿಫರೆಂಟ್ ವಿನ್ಯಾಸದ ಟಾಯ್ಲೆಟ್

ವಿಸ್ಟೋಡಾಮ್ ಬೋಗಿಯ ಒಂದು ಕೊನೆಯಲ್ಲಿ ಸಂಪೂರ್ಣ ದೊಡ್ಡ ಗಾಜು ಅಳವಡಿಸಲಾಗಿದೆ. ಹಾಗಾಗಿ ರೈಲು ಚಲಿಸುತ್ತಿದ್ದಾಗ ಬೋಗಿಯ ಕೊನೆಯಲ್ಲಿ ನಿಂತು ಸುತ್ತಮುತ್ತಲ ಪರಿಸರವನ್ನು ಕಣ್ತುಂಬಿಕೊಳ್ಳುವ ಅವಕಾಶವಿದೆ. ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುವವರಿಗೆ ಈ ಜಾಗ ಅತ್ಯಂತ ಪ್ರಿಯವಾಗಲಿದೆ.

ಇನ್ನು, ರೈಲಿನಲ್ಲಿ ಪುಟ್ಟದೊಂದು ಕಿಚನ್ ವ್ಯವಸ್ಥೆ ಮಾಡಲಾಗಿದೆ. ರೆಫ್ರಿಜರೇಟರ್, ಮೈಕ್ರೋ ವೇವ್ ವೋವನ್ ಇಡಲಾಗಿದೆ. ಇನ್ನು, ಈ ಬೋಗಿಯಲ್ಲಿನ ಟಾಯ್ಲೆಟ್‌ಗಳ ವಿನ್ಯಾಸವೂ ವಿಭಿನ್ನವಾಗಿದೆ. ಸ್ಲೈಡಿಂಗ್ ಬಾಗಿಲುಗಳು, ಆಟೊಮೆಟೆಡ್ ಲೈಟುಗಳನ್ನು ಅಳವಡಿಸಲಾಗಿದೆ. ಈ ವ್ಯವಸ್ಥೆಗಳು ಪ್ರಯಾಣಿಕರಿಗೆ ಹಿತವಾದ ಅನುಭವ ನೀಡಲಿದೆ.

ನಿತ್ಯ ಸಂಚರಿಸಲಿದೆ ವಿಸ್ಟಾಡೋಮ್ ಬೋಗಿ

ಈವರೆಗೂ ಬೆಂಗಳೂರು - ಮಂಗಳೂರು ರೈಲಿನಲ್ಲಿ ಮಾತ್ರ ವಿಸ್ಟಾಡೋಮ್ ಬೋಗಿ ಅಳವಡಿಸಲಾಗಿತ್ತು. ಈಗ ಯಶವಂತಪುರ - ಶಿವಮೊಗ್ಗ - ಯಶವಂತಪುರ ಇಂಟರ್ ಸಿಟಿ ರೈಲಿನಲ್ಲಿ ವಿಸ್ಟಾಡೋಮ್ ಬೋಗಿಯನ್ನು ತಾತ್ಕಾಲಿಕವಾಗಿ ಅಳವಡಿಸಲಾಗಿದೆ. ಈ ಮೂಲಕ ವಿಸ್ಟಾಡೋಮ್ ಬೋಗಿಯೊಂದಿಗೆ ಸಂಚರಿಸುವ ರಾಜ್ಯದ ಎರಡನೇ ರೈಲು ಇದಾಗಿದೆ. ಈ ರೈಲು ಪ್ರತಿದಿನ ಬೆಳಗ್ಗೆ 9.15ಕ್ಕೆ ಯಶವಂತಪುರದಿಂದ ಹೊರಟು ಮಧ್ಯಾಹ್ನ 1.30ರ ಹೊತ್ತಿಗೆ ಶಿವಮೊಗ್ಗ ತಲುಪಲಿದೆ. ಮಧ್ಯಾಹ್ನ 3.30ಕ್ಕೆ ಶಿವಮೊಗ್ಗದಿಂದ ಹೊರಟು ರಾತ್ರಿ 8.30ಕ್ಕೆ ಯಶವಂತಪುರ ತಲುಪಲಿದೆ.

ಪ್ರಯಾಣಿಕರಿಗೆ ಹೊಸ ಅನುಭವ

2022ರ ಮಾರ್ಚ್ 31ರವರೆಗೆ ಈ ರೈಲಿನಲ್ಲಿ ವಿಸ್ಟಾಡೋಮ್ ಬೋಗಿ ಅಳವಡಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಟೂರಿಸ್ಟ್‌ಗಳಿಗೆ, ಪರಿಸರ ಪ್ರಿಯರಿಗೆ ವಿಸ್ಟಾಡೋಮ್ ಬೋಗಿಯಲ್ಲಿನ ಪ್ರಯಾಣ ಹಿತವಾದ ಅನುಭವ ನೀಡಲಿದೆ. ಹಾಗಾಗಿ ಈ ಬೋಗಿ ಇರುವ ಸಂಚಾರವನ್ನು ಶಿವಮೊಗ್ಗಕ್ಕೆ ಸೀಮಿತಗೊಳಿಸದೆ ತಾಳಗುಪ್ಪದವರೆಗೆ ವಿಸ್ತರಣೆ ಮಾಡಬೇಕು ಎಂಬುದು ಪ್ರಯಾಣಿಕರ ಅಭಿಪ್ರಾಯ. ಮಲೆನಾಡಿನ ನೇಸರವನ್ನು ಕಣ್ತುಂಬಿಕೊಳ್ಳಲು ಈ ಮಾರ್ಗದ ಅವಕಾಶವಿದೆ. ಅಲ್ಲದೆ ಈ ಮಾರ್ಗದಲ್ಲಿ ಮಳೆಗಾಲದ ಹೊತ್ತಿಗೆ ವಿಸ್ಟೋಡಾಮ್ ಬೋಗಿಯ ಪ್ರಯಾಣ ಆಹ್ಲಾದಕರ ಎನಿಸಲಿದೆ.

ಪ್ರವಾಸೋದ್ಯಮಕ್ಕೆ ಅನುಕೂಲ

ವಿಸ್ಟೋಡಾಮ್ ಬೋಗಿಯನ್ನು ತಾಳಗುಪ್ಪದವರೆಗೆ ವಿಸ್ತರಣೆ ಮಾಡಿದರೆ ಶಿವಮೊಗ್ಗದ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ. ಈ ಬಗ್ಗೆ ರೈಲ್ವೆ ಇಲಾಖೆ ಗಮನ ಹರಿಸಬೇಕಿದೆ. ಮೊದಲ ದಿನದಿಂದಲೇ ಈ ಬೋಗಿಗೆ ಪ್ರಯಾಣಿಕರು ಟಿಕೆಟ್ ಬುಕ್ ಮಾಡಿರುವುದು ರೈಲ್ವೆ ಇಲಾಖೆಗೆ ಸಮಾಧಾನ ತಂದಿದೆ. ಮುಂದೆ ದೊಡ್ಡ ಪ್ರಮಾಣದಲ್ಲಿ ಪ್ರಯಾಣಿಕರು ಈ ಮಾರ್ಗದಲ್ಲಿ ಪ್ರಯಾಣಿಸುವ ಅಂದಾಜಿದೆ.


ರಾಜ್ಯದಲ್ಲಿ ಮತ್ತೆ 7 ಮಂದಿಗೆ ಒಮೈಕ್ರಾನ್ ದೃಢ; 37ಕ್ಕೇರಿದ ಸೋಂಕಿತರ ಸಂಖ್ಯೆ

ರಾಜ್ಯದಲ್ಲಿ ಮತ್ತೆ 7 ಮಂದಿಗೆ ಒಮೈಕ್ರಾನ್ ದೃಢ; 37ಕ್ಕೇರಿದ ಸೋಂಕಿತರ ಸಂಖ್ಯೆ

ರಾಜ್ಯದಲ್ಲಿ ಮತ್ತೆ 7 ಮಂದಿಗೆ ಒಮೈಕ್ರಾನ್ ದೃಢ; 37ಕ್ಕೇರಿದ ಸೋಂಕಿತರ ಸಂಖ್ಯೆ

ಬೆಂಗಳೂರು, ಡಿ.24: ರಾಜ್ಯದಲ್ಲಿ ಈಗಾಗಲೇ 31 ಜನರಿಗೆ ಒಮೈಕ್ರಾನ್ ಬಂದಿದ್ದು, ಶನಿವಾರ ಕೂಡ ಹೊಸದಾಗಿ 7 ಜನರಿಗೆ ಒಮೈಕ್ರಾನ್ ವೈರಸ್ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ.

ಈ ಬಗ್ಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಹೊಸದಿಲ್ಲಿಗೆ ಹೋಗಿ ಬಂದಿದ್ದ ಬೆಂಗಳೂರಿನ 76 ವರ್ಷದ ವ್ಯಕ್ತಿಗೆ, ಯುಎಇಯಿಂದ ಬೆಂಗಳೂರಿಗೆ ಆಗಮಿಸಿದ್ದಂತ 30 ವರ್ಷದ ಮಹಿಳೆಗೆ, ಜಿಂಬಾಬೆಯಿಂದ ಬೆಂಗಳೂರಿಗೆ ವಾಪಾಸ್ ಆಗಿದ್ದ 63 ವರ್ಷದ ಮಹಿಳೆಗೆ, ಯುಕೆಯಿಂದ ಬಂದಿದ್ದ ಒಮೈಕ್ರಾನ್ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 54 ವರ್ಷದ ಮಹಿಳೆಗೆ ಒಮೈಕ್ರಾನ್ ದೃಢಪಟ್ಟಿದೆ ಎಂದು ತಿಳಿಸಿದೆ.

ಯುಕೆಯಿಂದ ಬೆಂಗಳೂರಿಗೆ ವಾಪಾಸ್ ಆಗಿದ್ದಂತ 21 ವರ್ಷದ ವ್ಯಕ್ತಿ, ಹೊಸದಿಲ್ಲಿಗೆ ಹೋಗಿ ಬಂದಿದ್ದಂತ 62 ವರ್ಷದ ಬೆಂಗಳೂರಿನ ವ್ಯಕ್ತಿಗೆ ಹಾಗೂ ಯುಎಸ್‌ಎಗೆ ಹೋಗಿ ಬೆಂಗಳೂರಿಗೆ ಆಗಮಿಸಿದ್ದಂತ 15 ವರ್ಷದ ವ್ಯಕ್ತಿಯೊಬ್ಬರು ಸೇರಿದಂತೆ 7 ಜನರಿಗೆ ಒಮೈಕ್ರಾನ್ ದೃಢಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 37ಕ್ಕೆ ಏರಿಕೆಯಾಗಿರೋದಾಗಿ ತಿಳಿಸಿದೆ. 


ಹೊಸ ವರ್ಷಾಚರಣೆಗೆ ಬ್ರೇಕ್; ರಾಜ್ಯಾದ್ಯಂತ ಮತ್ತೆ ನೈಟ್ ಕರ್ಫ್ಯೂ ಜಾರಿ

ಹೊಸ ವರ್ಷಾಚರಣೆಗೆ ಬ್ರೇಕ್; ರಾಜ್ಯಾದ್ಯಂತ ಮತ್ತೆ ನೈಟ್ ಕರ್ಫ್ಯೂ ಜಾರಿ

ಹೊಸ ವರ್ಷಾಚರಣೆಗೆ ಬ್ರೇಕ್; ರಾಜ್ಯಾದ್ಯಂತ ಮತ್ತೆ ನೈಟ್ ಕರ್ಫ್ಯೂ ಜಾರಿ

ಬೆಂಗಳೂರು : ರಾಜ್ಯದಲ್ಲಿ ಒಮಿಕ್ರಾನ್ ಸೋಂಕು ಹೆಚ್ಚುತ್ತಿದ್ದು, ಸೋಂಕು ನಿಯಂತ್ರಣ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮವಾಗಿ ರಾಜ್ಯಾದ್ಯಂತ ಮತ್ತೆ ನೈಟ್ ಕರ್ಫ್ಯೂ ಜಾರಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸಿಎಂ ಬಸವರಾಜ್ ಬೊಮ್ಮಯಿ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್, ರಾಜ್ಯಾದ್ಯಂತ ಡಿಸೆಂಬರ್ 28ರಿಂದ ಹತ್ತು ದಿನಗಳ ಕಾಲ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿಗೊಳಿಸಲಾಗುವುದು ಎಂದರು.

ಸಾರ್ವಜನಿಕವಾಗಿ ಹೊಸ ವರ್ಷಾಚರಣೆ ಮಾಡುವಂತಿಲ್ಲ. ಬಹಿರಂಗ ಪಾರ್ಟಿಗಳಿಗೂ ಕಡಿವಾಣ ಹಾಕಲಾಗಿದೆ. ಸಭೆ-ಸಮಾರಂಭಗಳಿಗೆ ಶೇ.50ರಷ್ಟು ಮಾತ್ರ ಅವಕಾಶ ನೀಡಲಾಗಿದೆ.

12-18 ವರ್ಷದ ಮಕ್ಕಳಿಗೆ ʼಭಾರತ್‌ ಬಯೋಟೆಕ್‌ ಲಸಿಕೆʼ ನೀಡುವುದಕ್ಕೆ 'ಡಿಸಿಜಿಐ' ಅನುಮತಿ

12-18 ವರ್ಷದ ಮಕ್ಕಳಿಗೆ ʼಭಾರತ್‌ ಬಯೋಟೆಕ್‌ ಲಸಿಕೆʼ ನೀಡುವುದಕ್ಕೆ 'ಡಿಸಿಜಿಐ' ಅನುಮತಿ


12-18 ವರ್ಷದ ಮಕ್ಕಳಿಗೆ ʼಭಾರತ್‌ ಬಯೋಟೆಕ್‌ ಲಸಿಕೆʼ ನೀಡುವುದಕ್ಕೆ 'ಡಿಸಿಜಿಐ' ಅನುಮತಿ

12 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್-19 ಲಸಿಕೆ ತುರ್ತು ಬಳಕೆಗೆ ಡಿಜಿಸಿಐ ( (Drugs Controller General of India - DCGI ) ಅನುಮೋದನೆ ನೀಡಿದೆ.

ದೇಶದಲ್ಲಿ ಮಹಾಮಾರಿ ಕೊರೊನಾ ಸೋಂಕಿನ ಮೂರನೇ ಅಲೆ ಭೀತಿ ಶುರುವಾಗಿದ್ದು, ಮಹಾಮಾರಿ ಕೊರೊನಾ ಮಕ್ಕಳನ್ನೇ ಟಾರ್ಗೆಟ್ ಮಾಡುತ್ತಿದೆ.

ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

ಇಂತಹ ಸಂದರ್ಭದಲ್ಲಿ 12 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಭಾರತ್‌ ಬಯೋಟೆಕ್‌ ಲಸಿಕೆʼ ತುರ್ತು ಬಳಕೆಗೆ ಡಿಸಿಜಿಐ ಶನಿವಾರ ಭಾರತ್ ಬಯೋಟೆಕ್ ಗೆ ಅನುಮೋದನೆ ನೀಡಿದೆ.

ಭಾರತದಲ್ಲಿ ಮಕ್ಕಳಿಗೂ ಶೀಘ್ರ ಲಸಿಕೆ ನೀಡಲು ಭಾರತೀಯ ಔಷಧ ಮಹಾ ನಿಯಂತ್ರಕರು (Drugs Controller General of India - DCGI) ಶನಿವಾರ ಅನುಮತಿ ನೀಡಿದ್ದಾರೆ. 12ರಿಂದ 18 ವರ್ಷದ ಮಕ್ಕಳಿಗೆ ಭಾರತ್ ಬಯೊಟೆಕ್​ನ ಕೊವ್ಯಾಕ್ಸಿನ್ ಲಸಿಕೆ ನೀಡಲು ಅನುಮತಿ ನೀಡಲಾಗಿದೆ.

ದೇಶದಲ್ಲಿ ಕೊರೊನಾ ಸೋಂಕಿನ ನಡುವೆ ಒಮಿಕ್ರಾನ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದು, ಮುನ್ನೆಚ್ಗರಿಕೆ ಕ್ರಮವಾಗಿ ಹಲವು ರಾಜ್ಯಗಳಲ್ಲಿ ಟಫ್ ರೂಲ್ಸ್ ಜಾರಿಗೆ ಬಂದಿದೆ. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯ ವೇಗವಾಗಿ ಸಾಗುತ್ತಿದೆ. ತಹ ಸಂದರ್ಭದಲ್ಲಿ 12 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್-19 ಲಸಿಕೆಯನ್ನು ತುರ್ತು ಬಳಕೆಗೆ ಡಿಜಿಸಿಐ ಶನಿವಾರ ಭಾರತ್ ಬಯೋಟೆಕ್ ಗೆ ಅನುಮೋದನೆ ನೀಡಿದೆ.

Friday, 24 December 2021

 ಪರಿಷತ್ತಿನಲ್ಲಿ ಮಂಡನೆಯಾಗದ ಮತಾಂತರ ನಿಷೇಧ ಮಸೂದೆ

ಪರಿಷತ್ತಿನಲ್ಲಿ ಮಂಡನೆಯಾಗದ ಮತಾಂತರ ನಿಷೇಧ ಮಸೂದೆ


 ಪರಿಷತ್ತಿನಲ್ಲಿ ಮಂಡನೆಯಾಗದ ಮತಾಂತರ ನಿಷೇಧ ಮಸೂದೆ

ಬೆಳಗಾವಿ: ರಾಜ್ಯ ಸರಕಾರವು ಮತಾಂತರ ನಿಷೇಧ ಮಸೂದೆಯನ್ನು ಸದ್ಯಕ್ಕೆ ಹಿಂತೆಗೆದುಕೊಂಡಿದ್ದು, ಮುಂದಿನ ಅಧಿವೇಶನದಲ್ಲಿ ಮಂಡಿಸಲು ಮುಂದಾಗಿದೆ.

ಶುಕ್ರವಾರ ಸಂಜೆ ಐದು ನಿಮಿಷಗಳ ವಿರಾಮದ ಬಳಿಕ ವಿಧಾನ ಪರಿಷತ್ ಕಲಾಪ ಮತ್ತೆ ಆರಂಭವಾಯಿತು. ಸಭಾಪತಿ ಕೊಠಡಿಯಲ್ಲಿ ನಡೆದ ತೀರ್ಮಾನದಂತೆ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ರಕ್ಷಣೆ ಮಸೂದೆ ಮಂಡನೆ ಕೈಬಿಟ್ಟಿರುವುದಾಗಿ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದರು.

ಅಲ್ಲದೆ, ಮಧ್ಯಾಹ್ನದ ವಿರಾಮದ ಬಳಿಕ ಕಲಾಪ 3 ಗಂಟೆಗೆ ಮುಂದೂಡಲಾಗಿತ್ತು. 4 ಗಂಟೆಯಾದರೂ ಕೋರಂ ಬೆಲ್ ಹಾಕಿರಲಿಲ್ಲ.

ಮತಾಂತರ ನಿಷೇಧ ಮಸೂದೆ ಅಂಗೀಕಾರಕ್ಕೆ ಬೆಂಬಲದ ಕೊರತೆ ಇರುವುದರಿಂದ ವಿಧಾನ ಪರಿಷತ್ ಕಲಾಪ ಆರಂಭಿಸದೇ ವಿಳಂಬ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಸದಸ್ಯರು ಸಭಾಪತಿ ಕೊಠಡಿಗೆ ತೆರಳಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು ಎನ್ನಲಾಗಿದೆ.

ಬೆಳಗಾವಿ ಬಿಟ್ಟಿದ್ದ ಬಿಜೆಪಿ ಸದಸ್ಯರು: ಬಿಜೆಪಿಗೆ ಸದಸ್ಯ ಬಲದ ಕೊರತೆ ಇದೆ. ಮತ್ತೊಂದೆಡೆ ಶುಕ್ರವಾರ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಸೇರಿದಂತೆ ಕೆಲವು ಸದಸ್ಯರು ಬೆಳಗಾವಿಯಿಂದ ಹೊರಟು ಹೋಗಿದ್ದರು. ಹಾಗಾಗಿ, ಅವರಿಗೆ ವಾಪಸ್ ಸುವರ್ಣ ವಿಧಾನಸೌಧಕ್ಕೆ ಹಿಂದಿರುಗುವಂತೆ ಆಡಳಿತ ಪಕ್ಷದಿಂದ ತುರ್ತು ಸಂದೇಶ ರವಾನಿಸಲಾಗಿತ್ತು.

ಹಲವು ದೂರ ತಲುಪಿರುವ ಅವರಿಗಾಗಿ ಕಾದು ಕುಳಿತಿದ್ದರು. ತದನಂತರ, 3.45ರ ಸುಮಾರಿಗೆ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಆಡಳಿತ ಪಕ್ಷದ ಹಲವರು ಸಭಾಪತಿ ಬಸವರಾಜ ಹೊರಟ್ಟಿಯವರ ಕೊಠಡಿಯಲ್ಲಿ ಸೇರಿದ್ದರು.

ಅಷ್ಟರಲ್ಲಿ ಸಭಾಪತಿ ಕೊಠಡಿಗೆ ಧಾವಿಸಿದ ಕಾಂಗ್ರೆಸ್ ಸದಸ್ಯರು ಕಲಾಪ ವಿಳಂಬ ಮಾಡುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. 

ಗುರುವಾರ ವಿಪಕ್ಷಗಳ ವಿರೋಧದ ನಡುವೆಯೂ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರವಾಗಿತ್ತು. ಶುಕ್ರವಾರ ಮಧ್ಯಾಹ್ನ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ವಿದಾಯದ ಭಾಷಣ ನೆರವೇರಿಸಿದರು. 2022ರ ಬಜೆಟ್ ಅಧಿವೇಶನದಲ್ಲಿ ವಿಧೇಯಕ ಚರ್ಚೆಗೆ ಬರುವ ಸಾಧ್ಯತೆ ಇದೆ.

ಅನಧಿಕೃತ ಬಡಾವಣೆ ನಿರ್ಮಾಣಕ್ಕೆ ಕಡಿವಾಣ: ಸಚಿವ ಬೈರತಿ ಬಸವರಾಜ್

ಅನಧಿಕೃತ ಬಡಾವಣೆ ನಿರ್ಮಾಣಕ್ಕೆ ಕಡಿವಾಣ: ಸಚಿವ ಬೈರತಿ ಬಸವರಾಜ್

ಅನಧಿಕೃತ ಬಡಾವಣೆ ನಿರ್ಮಾಣಕ್ಕೆ ಕಡಿವಾಣ: ಸಚಿವ ಬೈರತಿ ಬಸವರಾಜ್

ಬೆಳಗಾವಿ: ಸಂಘ-ಸಂಸ್ಥೆಗಳು ಅನಧಿಕೃತ ಬಡಾವಣೆ ನಿರ್ಮಾಣ ಮಾಡುವುದನ್ನು ನಿಯಂತ್ರಿಸುವ ದೃಷ್ಟಿಯಿಂದ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ್ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ತನ್ವೀರ್ ಸೇಠ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಖಾಸಗಿ ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯ ಒದಗಿಸುವುದು ಖಾಸಗಿ ಬಡಾವಣೆ ನಿರ್ಮಾಣದಾರರ ಜವಾಬ್ದಾರಿ.

ಆದರೆ, ನಗರಸಭೆಗೆ ಹೊಂದಿಕೊಂಡಿರುವ ಗ್ರಾ.ಪಂ. ವ್ಯಾಪ್ತಿಯಲ್ಲಿ ಬಡಾವಣೆ ನಿರ್ಮಾಣಕ್ಕೆ ಅನುಮೋದನೆ ಪಡೆದು ಅನಧಿಕೃತ ಬಡಾವಣೆ ನಿರ್ಮಾಣ ಮಾಡುತ್ತಿದ್ದು, ಮೂಲಭೂತ ಸೌಲಭ್ಯ ಕಲ್ಪಿಸದೆ ಬಡಾವಣೆ ನಿರ್ಮಿಸಿ ನಿವೇಶನ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಆರಂಭಕ್ಕೆ ಮಾತನಾಡಿದ ಸದಸ್ಯ ತನ್ವೀರ್ ಸೇಠ್, ಅನಧಿಕೃತ ಬಡಾವಣೆ ನಿರ್ಮಾಣಕ್ಕೆ ಸರಕಾರ ಕಡಿವಾಣ ಹಾಕಬೇಕು. ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಘ ಸಂಸ್ಥೆಗಳು ಅನಧಿಕೃತ ಬಡಾವಣೆ ನಿರ್ಮಿಸಿ ನಿವೇಶನ ಹಂಚಿಕೆ ಮಾಡಿದ್ದಾರೆ. ಆದರೆ, ಅಗತ್ಯ ಮೂಲಸೌಲಭ್ಯ ಕಲ್ಪಿಸದಿರುವ ಕಾರಣ ಜನರಿಗೆ ಸಮಸ್ಯೆಯಾಗಿದೆ ಎಂದು ಗಮನ ಸೆಳೆದರು.

ಇದಕ್ಕೆ ಧ್ವನಿಗೂಡಿಸಿದ ಸ್ಪೀಕರ್ ಕಾಗೇರಿ, ನಗರಸಭೆಗೆ ಹೊಂದಿಕೊಂಡಿರುವ ಗ್ರಾ.ಪಂ.ಗಳ ಅನುಮತಿ ಪಡೆದು ಸಂಘ-ಸಂಸ್ಥೆಗಳು ಅನಧಿಕೃತ ಬಡಾವಣೆ ನಿರ್ಮಿಸಿ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಒಟ್ಟಿಗೆ ಸೇರಿ ಪರಿಹಾರ ಕಲ್ಪಿಸಬೇಕು ಎಂದು ಸಲಹೆ ನೀಡಿದರು.

ಮಂಡ್ಯ: ಶಾಲೆಯಲ್ಲಿ ನಡೆಯುತ್ತಿದ್ದ ಕ್ರಿಸ್ಮಸ್ ಆಚರಣೆಗೆ ಸಂಘಪರಿವಾರದ ಕಾರ್ಯಕರ್ತರಿಂದ ತಡೆ

ಮಂಡ್ಯ: ಶಾಲೆಯಲ್ಲಿ ನಡೆಯುತ್ತಿದ್ದ ಕ್ರಿಸ್ಮಸ್ ಆಚರಣೆಗೆ ಸಂಘಪರಿವಾರದ ಕಾರ್ಯಕರ್ತರಿಂದ ತಡೆ

ಮಂಡ್ಯ: ಶಾಲೆಯಲ್ಲಿ ನಡೆಯುತ್ತಿದ್ದ ಕ್ರಿಸ್ಮಸ್ ಆಚರಣೆಗೆ ಸಂಘಪರಿವಾರದ ಕಾರ್ಯಕರ್ತರಿಂದ ತಡೆ

ಮಂಡ್ಯ: ಮಂಡ್ಯ ಜಿಲ್ಲೆಯ ಶಾಲೆಯೊಂದರಲ್ಲಿ ಗುರುವಾರ ಕ್ರಿಸ್ಮಸ್ ಆಚರಣೆಗೆ ಅಡ್ಡಿಪಡಿಸಿದ ಸಂಘಪರಿವಾರದ ಗುಂಪೊಂದು ಶಾಲಾ ಅಧಿಕಾರಿಗಳಿಗೆ ಬೆದರಿಕೆ ಹಾಕಿರುವ ದೃಶ್ಯವು ವೀಡಿಯೊದಲ್ಲಿ ಸೆರೆಯಾಗಿದೆ. 

ನಿರ್ಮಲಾ ಇಂಗ್ಲಿಷ್ ಹೈಸ್ಕೂಲ್ ಹಾಗೂ  ಕಾಲೇಜಿನ ಮುಖ್ಯೋಪಾಧ್ಯಾಯಿನಿ ಪ್ರಕಾರ, ವಿದ್ಯಾರ್ಥಿಗಳು ಕ್ರಿಸ್ಮಸ್ ಆಚರಣೆಯನ್ನು ಆಯೋಜಿಸಿದ್ದಾಗ ಸಂಘಪರಿವಾರದ ಸದಸ್ಯರು ಬಲವಂತವಾಗಿ ಸಂಸ್ಥೆಯೊಳಗೆ ಪ್ರವೇಶಿಸಿದ್ದರು ಎಂದು ಎಂದು NDTV ವರದಿ ಮಾಡಿದೆ. 

"ನಾವು ಪ್ರತಿ ವರ್ಷ ಕ್ರಿಸ್ಮಸ್ ಆಚರಣೆಯನ್ನು ಆಯೋಜಿಸುತ್ತಿದ್ದೇವೆ. ಆದರೆ ಕೋವಿಡ್ ಪ್ರೇರಿತ ನಿರ್ಬಂಧಗಳಿಂದ ಅದನ್ನು ರದ್ದುಗೊಳಿಸಲು ನಾವು ನಿರ್ಧರಿಸಿದ್ದೇವೆ. ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ನಾವು ಸಣ್ಣ ಆಚರಣೆಯನ್ನು ಆಯೋಜಿಸಿದ್ದೇವೆ. ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ಹಣ ಸಂಗ್ರಹಿಸಿ ಕೇಕ್ ಅನ್ನು ಆರ್ಡರ್ ಮಾಡಿದ್ದರು. ಇದಕ್ಕೆ ಪೋಷಕರೊಬ್ಬರು ವಿರೋಧ ವ್ಯಕ್ತಪಡಿಸಿದ್ದಾರೆ'' ಎಂದು ಮುಖ್ಯೋಪಾಧ್ಯಾಯಿನಿ ಕನಿಕಾ ಫ್ರಾನ್ಸಿಸ್ ಮೇರಿ NDTV ಗೆ ತಿಳಿಸಿದ್ದಾರೆ.

ಶಾಲೆಯು 'ಕ್ರೈಸ್ತ ಧರ್ಮವನ್ನು ಬೋಧಿಸುತ್ತಿದೆ' ಹಾಗೂ  ಕ್ರಿಸ್ಮಸ್ ಅನ್ನು ಆಚರಿಸುತ್ತಿದೆ. ಆದರೆ ಹಿಂದೂ ಹಬ್ಬಗಳನ್ನು ಆಚರಿಸುತ್ತಿಲ್ಲ ಎಂದು ವಿದ್ಯಾರ್ಥಿಯೊಬ್ಬನ ಪೋಷಕರು ಸಂಘಪರಿವಾರಕ್ಕೆ ತಿಳಿಸಿದ್ದಾರೆ ಎನ್ನಲಾಗಿದೆ. 

ಆಚರಣೆಯ ಬಗ್ಗೆ ತಿಳಿದ ನಂತರ, ಸಂಘಪರಿವಾರದ ಕಾರ್ಯಕರ್ತರು ವಿದ್ಯಾ ಸಂಸ್ಥೆಗೆ ನುಗ್ಗಿ ಶಾಲೆಯ ಆಡಳಿತವನ್ನು ಪ್ರಶ್ನಿಸಲು ಆರಂಭಿಸಿದರು. ಗಲಾಟೆಯನ್ನು ಸೆರೆಹಿಡಿದಿರುವ ವೀಡಿಯೊದಲ್ಲಿ ಕೆಲವರು ಹಿಂದೂ ಹಬ್ಬಗಳನ್ನು ಏಕೆ ಆಚರಿಸುತ್ತಿಲ್ಲ ಎಂದು ಶಾಲಾ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

ಶಾಲೆಯ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದ  ಕಾರ್ಯಕರ್ತನೊಬ್ಬ, "ಪೋಷಕರೇ ನಾವು ಈ ನಿರ್ಧಾರವನ್ನು ನಿಮಗೆ ಬಿಡುತ್ತೇವೆ. ನಾವು ಇದನ್ನು ನಮ್ಮ ಕೈಗೆತ್ತಿಕೊಂಡರೆ ಪರಿಸ್ಥಿತಿ ವಿಭಿನ್ನವಾಗಿರುತ್ತದೆ" ಎಂದು ಹೇಳುತ್ತಿರುವುದು ವೀಡಿಯೊದಲ್ಲಿದೆ. 

ಶಾಲಾ ಆಡಳಿತ ಮಂಡಳಿಯು ಘಟನೆಯ ಕುರಿತು ಇಂದು ದೂರು ನೀಡಲು ನಿರ್ಧರಿಸಿದೆ ಎಂದು ವರದಿಯಾಗಿದೆ.