Tuesday, 23 November 2021

ಪಾರ್ಲೆ ಬಿಸ್ಕೆಟ್ ದರ ಹೆಚ್ಚಳ


ಪಾರ್ಲೆ ಬಿಸ್ಕೆಟ್ ದರ ಹೆಚ್ಚಳ

ನವದೆಹಲಿ: ಈಗಾಗಲೇ ಅಗತ್ಯ ವಸ್ತುಗಳ ದರ ಏರಿಕೆಯಿಂದ ತತ್ತರಿಸಿದ ಜನತೆಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಗೋಧಿ, ಸಕ್ಕರೆ, ಖಾದ್ಯ ತೈಲದ ದರ ಏರಿಕೆಯಾದ ಹಿನ್ನೆಲೆಯಲ್ಲಿ ಪ್ರಮುಖ ಬಿಸ್ಕತ್ ತಯಾರಿಕಾ ಕಂಪನಿಯಾಗಿರುವ ಪಾರ್ಲೆ ಉತ್ಪನ್ನಗಳ ಬೆಲೆಯಲ್ಲಿ ಶೇಕಡ 5 ರಿಂದ 10 ರಷ್ಟು ದರ ಹೆಚ್ಚಳ ಮಾಡಲಿದೆ.

ಪಾರ್ಲೆ-ಜಿ, ಕ್ರಾಕ್ ಜಾಕ್ ಸೇರಿದಂತೆ ವಿವಿಧ ಉತ್ಪನ್ನಗಳ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ. ಅದೇ ರೀತಿ ಕೇಕ್ ಮತ್ತು ರಸ್ಕ್ ಗಳ ಬೆಲೆಯನ್ನು ಕೂಡ ಶೇಕಡ 7 ರಿಂದ 8 ರಷ್ಟು ಹೆಚ್ಚಳ ಮಾಡಲಾಗಿದೆ. ಪಾರ್ಲೆ -ಜಿ ಬೆಲೆ ಶೇಕಡ 7 ರಷ್ಟು ಹೆಚ್ಚಾಗಿದ್ದು, 20 ರೂಪಾಯಿಗಿಂತ ಹೆಚ್ಚಿನ ಬೆಲೆಯ ಉತ್ಪನ್ನಗಳ ದರ ಏರಿಕೆ ಮಾಡಲಾಗಿದೆ. ಕಡಿಮೆ ಬೆಲೆಯ ಉತ್ಪನ್ನಗಳ ತೂಕ ಕಡಿಮೆ ಇಳಿಕೆ ಮಾಡಲಾಗಿದೆ ಎಂದು ಹೇಳಲಾಗಿದೆ.SHARE THIS

Author:

0 التعليقات: