ಶಿಥಿಲಾವಸ್ಥೆಯಲ್ಲಿನ ಕಾಲೇಜು ಕಟ್ಟಡ ಬಳಸದಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಸೂಚನೆ

ಬೆಂಗಳೂರು: `ಅಕಾಲಿಕ ಮಳೆ ಹಿನ್ನೆಲೆಯಲ್ಲಿ ಶಿಥಿಲಾವಸ್ಥೆ ಹಾಗೂ ಅಪಾಯ ಸ್ಥಿತಿಯಲ್ಲಿರುವ ಕಾಲೇಜು ಕಟ್ಟಡಗಳನ್ನು/ತರಗತಿ ಕೊಠಡಿಗಳನ್ನು ಬಳಸದಂತೆ ಮತ್ತು ಅವುಗಳಿಂದ ಅಪಾಯಗಳು ಉಂಟಾಗದಂತೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಏನಾದರೂ ಅಪಾಯ ಸಂಭವಿಸಿದರೆ ಸಂಬಂಧಪಟ್ಟ ಕಾಲೇಜುಗಳ ಪ್ರಾಂಶುಪಾಲರು ಮತ್ತು ಜಿಲ್ಲಾ ಉಪನಿರ್ದೇಶಕರುಗಳನ್ನು ಹೊಣೆ ಮಾಡಲಾಗುವುದು' ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಎಚ್ಚರಿಸಿದ್ದಾರೆ.
ಶನಿವಾರ ಈ ಸಂಬಂಧ ಆದೇಶ ಹೊರಡಿಸಿದ್ದು, ಶಿಥಿಲಾವಸ್ಥೆಯಲ್ಲಿರುವ ಕಾಲೇಜು ಕಟ್ಟಡಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಅಪಾಯದ ಸ್ಥಿತಿಯಲ್ಲಿರುವ ಕಟ್ಟಡ, ತರಗತಿ ಕೊಠಡಿ, ಶೌಚಾಲಯ ಕೊಠಡಿ, ಕಾಂಪೌಂಡ್ ಇದ್ದರೆ ತಕ್ಷಣವೇ ಗುರುತಿಸಬೇಕು. ಜೊತೆಗೆ ಸದರಿ ಕಟ್ಟಡಗಳ ದುರಸ್ತಿಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಸೇರಿದಂತೆ ಇತರೆ ಸಂಪನ್ಮೂಲ ಬಳಕೆ ಜಿಲ್ಲಾಧಿಕಾರಿ/ಜಿ.ಪಂ. ಸಿಇಓಗಳಿಗೆ ಪ್ರಸ್ತಾವನೆ ಸಲ್ಲಿಸಿ, ಅನುದಾನ ಬಿಡುಗಡೆ ಕ್ರಮ ವಹಿಸಬೇಕು ಎಂದು ಸೂಚಿಸಲಾಗಿದೆ.
0 التعليقات: