Wednesday, 24 November 2021

ತಮ್ಮ ಕಾಲೇಜಿನಲ್ಲಿ ಎಬಿವಿಪಿ ರಾಜ್ಯ ಸಮ್ಮೇಳನ ಮಾಡಿದವರಿಗೆ ಕಾಂಗ್ರೆಸ್ ಟಿಕೆಟ್: ದಿನೇಶ್ ಅಮೀನ್ ಮಟ್ಟು ಟೀಕೆ

ತಮ್ಮ ಕಾಲೇಜಿನಲ್ಲಿ ಎಬಿವಿಪಿ ರಾಜ್ಯ ಸಮ್ಮೇಳನ ಮಾಡಿದವರಿಗೆ ಕಾಂಗ್ರೆಸ್ ಟಿಕೆಟ್: ದಿನೇಶ್ ಅಮೀನ್ ಮಟ್ಟು ಟೀಕೆ

ಮಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಮಂಗಳೂರಿನಿಂದ ಮಂಜುನಾಥ್ ಭಂಡಾರಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಹಿರಿಯ ಪತ್ರಕರ್ತ , ಲೇಖಕ ದಿನೇಶ್ ಅಮೀನ್ ಮಟ್ಟು ಅವರು ಕಾಂಗ್ರೆಸ್ ನ ಈ  ನಡೆಯನ್ನು ಪರೋಕ್ಷವಾಗಿ ಟೀಕಿಸಿ, ವ್ಯಂಗ್ಯವಾಡಿದ್ದಾರೆ. 

​ಬುಧವಾರ ಫೇಸ್ ಬುಕ್ ಪೋಸ್ಟ್ ಹಾಕಿರುವ ದಿನೇಶ್ ಅಮೀನ್ ಮಟ್ಟು ​ ​" ​ಕರಾವಳಿಯ ಕೋಮುವಾದದ ವಿರುದ್ದ ಕಾಂಗ್ರೆಸ್ ಪಕ್ಷ ನಡೆಸಲಿರುವ ನಿರ್ಣಾಯಕ ಹೋರಾಟದ ನೇತೃತ್ವ ವಹಿಸಲು ವಿಧಾನ ಪರಿಷತ್ ಸದಸ್ಯರಾಗಿ ಹೊಸ ಸೇನಾಪತಿ ಆಗಮಿಸಲಿದ್ದಾರೆ. ಅವರ ಹೆಸರು ಮಂಜುನಾಥ ಭಂಡಾರಿ.​ ​ತಮ್ಮ ಕಾಲೇಜಿನಲ್ಲಿಯೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿ  ಸಂಘ ಪರಿವಾರದ ಅಂತರಂಗವನ್ನು ಚೆನ್ನಾಗಿ ಅರಿತಿರುವ ಕಾರಣದಿಂದಾಗಿ ಅದರ ವಿರುದ್ಧ ಹೋರಾಟಕ್ಕೆ ಇವರೇ ಸರಿ ಎಂದು ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆಯಂತೆ​" ಎಂದು ಬರೆದಿದ್ದಾರೆ. ​

ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಗೆ ಭಾರೀ ಪೈಪೋಟಿ ಏರ್ಪಟ್ಟು ಕೊನೆಗೆ ಕಾಂಗ್ರೆಸ್ ಮುಖಂಡ, ಮಂಗಳೂರಿನ  ಇಂಜಿನಿಯರಿಂಗ್ ಕಾಲೇಜೊಂದರ ಮಾಲಕ ಮಂಜುನಾಥ್ ಭಂಡಾರಿ ಅವರಿಗೆ ಪಕ್ಷ ಮಣೆ ಹಾಕಿದೆ.  ಆದರೆ ಪಕ್ಷದ ಈ ನಡೆ ಈಗ ಟೀಕೆಗೆ ಒಳಗಾಗಿದೆ.


SHARE THIS

Author:

0 التعليقات: