ಬಿಜೆಪಿ ಸರಕಾರ ಮಕ್ಕಳ ವಿಷಯದಲ್ಲೂ ಮೋಸ ಮಾಡುತ್ತಿದೆ: ಕಾಂಗ್ರೆಸ್ ಆರೋಪ

ಬೆಂಗಳೂರು: ಶೇ. 40 ಕಮಿಷನ್ ದಂಧೆಯ ಬಿಜೆಪಿ ಸರಕಾರ ಮಕ್ಕಳ ವಿಷಯದಲ್ಲೂ ಮೋಸ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಟ್ವಿಟರ್ ನಲ್ಲಿ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಸರಣಿ ಆರೋಪಗಳನ್ನು ಮಾಡಿರುವ ಕಾಂಗ್ರೆಸ್, ''ಮೊಟ್ಟೆಯಲ್ಲೂ ಮೋಸ, ಸ್ವೆಟರ್ನಲ್ಲೂ ಮೋಸ, ಬಿಸಿಯೂಟದಲ್ಲೂ ಮೋಸ, ಕ್ಷೀರಭಾಗ್ಯದಲ್ಲೂ ಮೋಸ, ಪಠ್ಯಪುಸ್ತಕದಲ್ಲೂ ಮೋಸ, ಸಮವಸ್ತ್ರದಲ್ಲೂ ಮೋಸ ಮಾಡಿದೆ'' ಎಂದು ದೂರಿದೆ.
''ಶಾಲೆ ಶುರುವಾಗಿ ಹಲವು ದಿನಗಳು ಕಳೆದರೂ ಸಮವಸ್ತ್ರ ನೀಡದ ಅಸಮರ್ಥ ಸರ್ಕಾರದಿಂದ ಮಕ್ಕಳ ಭವಿಷ್ಯಕ್ಕೆ ಭರವಸೆ ಇಲ್ಲದಾಗಿದೆ'' ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.
0 التعليقات: