Sunday, 14 November 2021

ಜವಾಹರಲಾಲ್ ನೆಹರು ಜನ್ಮದಿನ: ಸಾಂಪ್ರದಾಯಿಕ ಸಮಾರಂಭಕ್ಕೆ ಸ್ಪೀಕರ್, ಹಿರಿಯ ಸಚಿವರು ಗೈರು


 ಜವಾಹರಲಾಲ್ ನೆಹರು ಜನ್ಮದಿನ: ಸಾಂಪ್ರದಾಯಿಕ ಸಮಾರಂಭಕ್ಕೆ ಸ್ಪೀಕರ್, ಹಿರಿಯ ಸಚಿವರು ಗೈರು

ಹೊಸದಿಲ್ಲಿ: ಜವಾಹರಲಾಲ್ ನೆಹರು ಅವರ ಜನ್ಮದಿನದ ಅಂಗವಾಗಿ ಸಂಸತ್ತಿನಲ್ಲಿ ರವಿವಾರ ನಡೆದ ಸಾಂಪ್ರದಾಯಿಕ ಸಮಾರಂಭದಲ್ಲಿ ಹಿರಿಯ ಸಚಿವರು ಉಪಸ್ಥಿತರಿರಲಿಲ್ಲ. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತು ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಕೂಡ ಕಾರ್ಯಕ್ರಮಕ್ಕೆ ಗೈರಾಗಿದ್ದರು ಎಂದು ಕಾಂಗ್ರೆಸ್ ಪಕ್ಷ ತಿಳಿಸಿದೆ. ಬಿಜೆಪಿ ನಾಯಕರ ವರ್ತನೆಗೆ  ಕಾಂಗ್ರೆಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನವೆಂಬರ್ 14 ರಾಷ್ಟ್ರದ ಮೊದಲ ಪ್ರಧಾನಿ ನೆಹರೂ ಅವರ ಜನ್ಮದಿನವಾಗಿದ್ದು, ಪ್ರತಿ ವರ್ಷ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಗುತ್ತದೆ.

ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ ಮುಖ್ಯ ಸಚೇತಕ ಜೈರಾಮ್ ರಮೇಶ್ ಈ ಕುರಿತು ಟ್ವೀಟ್ ಮಾಡಿದ್ದಾರೆ:

"ಇಂದು ಸಂಸತ್ತಿನಲ್ಲಿ ನಡೆದ ಸಾಂಪ್ರದಾಯಿಕ ಸಮಾರಂಭದಲ್ಲಿ ನೆಹರೂ ಜನ್ಮ ವಾರ್ಷಿಕೋತ್ಸವದ ವೇಳೆ ಸೆಂಟ್ರಲ್ ಹಾಲ್ ನಲ್ಲಿ ಅಸಾಧಾರಣ ದೃಶ್ಯ  ಕಂಡುಬಂತು.  ಲೋಕಸಭೆ ಸ್ಪೀಕರ್ ಹಾಗೂ  ಸಭಾಪತಿ ರಾಜ್ಯಸಭೆಗೆ ಗೈರುಹಾಜರಾಗಿದ್ದಾರೆ. ಒಬ್ಬ ಸಚಿವರು ಹಾಜರಾಗಿಲ್ಲ. ಇದಕ್ಕಿಂತ ಬೇರೆ ಕ್ರೂರವಿದೆಯೇ?!" ಎಂದು ಟ್ವೀಟಿಸಿದ್ದಾರೆ.

ಪ್ರತಿಪಕ್ಷದ ಇತರ ನಾಯಕರು ಕೂಡ ಈ ಕ್ರಮವನ್ನು ಖಂಡಿಸಿದರು.

"ಇನ್ನು ಮುಂದೆ ನನಗೆ ಏನೂ ಆಶ್ಚರ್ಯವಿಲ್ಲ. ಈ ಆಡಳಿತವು ಸಂಸತ್ತು ಸೇರಿದಂತೆ ಭಾರತದ ಶ್ರೇಷ್ಠ ಸಂಸ್ಥೆಗಳನ್ನು ಒಂದೊಂದಾಗಿ ನಾಶಪಡಿಸುತ್ತಿದೆ" ಎಂದು ತೃಣಮೂಲ ಕಾಂಗ್ರೆಸ್‌ನ ಹಿರಿಯ ನಾಯಕ ಡೆರೆಕ್ ಒ'ಬ್ರಿಯಾನ್ ಟ್ವೀಟ್ ಮಾಡಿದ್ದಾರೆ.

ಇಂದು ಬೆಳಗ್ಗೆ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ರಾಜ್ಯ ಸಚಿವ ಭಾನು ಪ್ರತಾಪ್ ಸಿಂಗ್ ವರ್ಮಾ ಉಪಸ್ಥಿತರಿದ್ದರು. ಅಲ್ಲದೆ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ಇತರ ಸಂಸದರು ಉಪಸ್ಥಿತರಿದ್ದರು.


SHARE THIS

Author:

0 التعليقات: