Tuesday, 2 November 2021

ಅಖಿಲೇಶ್ ಯಾದವ್ ಅವರ ಮಿತ್ರಪಕ್ಷದ ನಾಯಕನನ್ನು ಭೇಟಿಯಾದ ಪ್ರಿಯಾಂಕಾ ಗಾಂಧಿ


 ಅಖಿಲೇಶ್ ಯಾದವ್ ಅವರ ಮಿತ್ರಪಕ್ಷದ ನಾಯಕನನ್ನು ಭೇಟಿಯಾದ ಪ್ರಿಯಾಂಕಾ ಗಾಂಧಿ

ಲಕ್ನೊ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಉತ್ತರ ಪ್ರದೇಶದ ಲಕ್ನೋದ ವಿಮಾನ ನಿಲ್ದಾಣದಲ್ಲಿ ಅಖಿಲೇಶ್ ಯಾದವ್ ಅವರ ಮಿತ್ರಪಕ್ಷ ರಾಷ್ಟ್ರೀಯ ಲೋಕದಳ(ಆರ್‌ಎಲ್‌ಡಿ) ಪಕ್ಷದ   ಮುಖ್ಯಸ್ಥ ಜಯಂತ್ ಚೌಧರಿ ಅವರನ್ನು ಭೇಟಿಯಾದರು . ನಂತರ ಇಬ್ಬರೂ ಛತ್ತೀಸ್‌ಗಢ ಸರಕಾರದ ಚಾರ್ಟರ್ಡ್ ವಿಮಾನದಲ್ಲಿ ದಿಲ್ಲಿಗೆ ತೆರಳಿದ್ದಾರೆ. ಈ ಬೆಳವಣಿಗೆ ರಾಜಕೀಯ ವಲಯಗಳಲ್ಲಿ ವದಂತಿ ಹರಡಲು ಕಾರಣವಾಗಿದೆ.

ರವಿವಾರ ಗೋರಖ್‌ಪುರದಲ್ಲಿ 'ಪ್ರತಿಜ್ಞಾ ರ್ಯಾಲಿ'ಯನ್ನು ಉದ್ದೇಶಿಸಿ ಮಾತನಾಡಿದ ನಂತರ, ಪ್ರಿಯಾಂಕಾ ಗಾಂಧಿ ದಿಲ್ಲಿಗೆ ವಿಮಾನದಲ್ಲಿ ತೆರಳಲು ಲಕ್ನೋ ತಲುಪಿದ್ದರು ಹಾಗೂ  ಅದೇ ಸಮಯದಲ್ಲಿ ಚೌಧರಿ ಕೂಡ ವಿಮಾನ ನಿಲ್ದಾಣವನ್ನು ತಲುಪಿದರು.

 "ಪ್ರಿಯಾಂಕಾ ಗಾಂಧಿ ಹಾಗೂ  ಜಯಂತ್ ಚೌಧರಿ ರವಿವಾರ ಛತ್ತೀಸ್‌ಗಢ ಸರಕಾರದ ಚಾರ್ಟರ್ಡ್ ವಿಮಾನದಲ್ಲಿ ದಿಲ್ಲಿಗೆ ತೆರಳಿದರು" ಎಂದು ಘಟನೆಯ ಕುರಿತು ಪ್ರತಿಕ್ರಿಯಿಸಿದ ಆರ್‌ಎಲ್‌ಡಿ ಹಿರಿಯ ನಾಯಕರೊಬ್ಬರು ಸೋಮವಾರ ಪಿಟಿಐಗೆ ತಿಳಿಸಿದರು.


SHARE THIS

Author:

0 التعليقات: