Friday, 26 November 2021

ಕೊರೋನಾ ರೂಪಾಂತರಿ ಅಪಾಯಕಾರಿ 'ಒಮಿಕ್ರೋನ್' ಪತ್ತೆ.


ಅಪಾಯಕಾರಿ ಕೊರೋನಾ ರೂಪಾಂತರಿ  'ಒಮಿಕ್ರೋನ್' ಪತ್ತೆ.

ಕೊರೋನಾ ರೂಪಾಂತರಿ ಡೆಲ್ಟಾಗಿಂತಲೂ ಅಪಾಯಕಾರಿ ಪ್ರಭೇದ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದ್ದು, ವಿಶ್ವಕ್ಕೆ ಆತಂಕ ಮೂಡಿಸಿದೆ.

ಈ ಕೊರೋನಾ ರೂಪಾಂತರಿಗೆ 'ಒಮಿಕ್ರೋನ್' ಎಂದು ನಾಮಕರಣ ಮಾಡಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಒಮಿಕ್ರೋನ್ ಎಂದು ನಾಮಕರಣ ಮಾಡಿದೆ.

ಜಗತ್ತಿನಾದ್ಯಂತ ಈ ಕೋರೋನಾ ರೂಪಾಂತರಿ ಆತಂಕ ಸೃಷ್ಟಿಸಿದೆ. ನಿನ್ನೆ ನಡೆದ ವಿಶ್ವ ಆರೋಗ್ಯ ಸಂಸ್ಥೆಯ ಸಭೆಯಲ್ಲಿ 'ಒಮಿಕ್ರೋನ್' ಎಂದು ನಾಮಕರಣ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೇ, ರೂಪಾಂತರಿ ವೈರಸ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಅಧ್ಯಯನ ಕೈಗೊಂಡಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ಮಹತ್ವದ ಆದೇಶ ನೀಡಿದೆ.

ವಿಶ್ವ ಆರೋಗ್ಯ ಸಂಸ್ಥೆ B.1.1.529 ರೂಪಾಂತರಿಗೆ 'ಒಮಿಕ್ರೋನ್' ಎಂದು ನಾಮಕರಣ ಮಾಡಿದ್ದು, ಭಾರತದಲ್ಲಿಯೂ ರೂಪಾಂತರಿ ಒಮಿಕ್ರೋನ್ ಆತಂಕ ಸೃಷ್ಟಿಸಿದೆ. ವಿಶ್ವದಲ್ಲಿ 87 'ಒಮಿಕ್ರೋನ್' ಪ್ರಭೇದ ರೂಪಾಂತರಿಗಳಿವೆ. ದಕ್ಷಿಣ ಆಫ್ರಿಕಾದ ಸಾವಿರಾರು ಜನರಲ್ಲಿ ರೋಗದ ಲಕ್ಷಣ ಕಂಡು ಬಂದಿದೆ.

ದಕ್ಷಿಣ ಆಫ್ರಿಕಾ ಸೇರಿ 7 ರಾಷ್ಟ್ರಗಳಿಗೆ ವಿಮಾನ ಹಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಹೊಸ ತಳಿಯ ವೈರಸ್ ಪತ್ತೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ಕೆಲವು ವಿದೇಶಗಳಿಂದ ಆಗಮಿಸುವವರಿಗೆ ಟೆಸ್ಟ್ ಸೇರಿ ಹೆಚ್ಚುವರಿ ಕ್ರಮಗಳನ್ನು ಕಡ್ಡಾಯಗೊಳಿಸಲಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಕುರಿತಾಗಿ ಆದೇಶ ಹೊರಡಿಸಿದೆ. ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಚೀನಾ, ಮಾರಿಷಸ್, ನ್ಯೂಜಿಲೆಂಡ್, ಹಾಂಕಾಂಗ್ ಮೊದಲಾದ ದೇಶಗಳಿಂದ ಭಾರತಕ್ಕೆ ಬರುವವರಿಗೆ ಕೋವಿಡ್ ಪರೀಕ್ಷೆ ಸೇರಿದಂತೆ ಹೆಚ್ಚುವರಿ ಕ್ರಮ ಅನುಸರಿಸಲು ಸೂಚನೆ ನೀಡಲಾಗಿದೆ.SHARE THIS

Author:

0 التعليقات: