Tuesday, 16 November 2021

ಭೀಕರ ರಸ್ತೆ ಅಪಘಾತ, ನಟ ಸುಶಾಂತ್​ ಸಿಂಗ್​ ರಜಪೂತ್​ ಕುಟುಂಬದ ಐವರ ದಾರುಣ ಸಾವು

ಭೀಕರ ರಸ್ತೆ ಅಪಘಾತ, 
ನಟ ಸುಶಾಂತ್​ ಸಿಂಗ್​ ರಜಪೂತ್​ ಕುಟುಂಬದ 
ಐವರ ದಾರುಣ ಸಾವು

ಬಿಹಾರ: ಲಖಿಸರೈ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಕುಟುಂಬದ 5 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

ನಟ ಸುಶಾಂತ್​ ಸಿಂಗ್​ ರಜಪೂತ್​ ಅವರ ಸೋದರ ಮಾವ ಒಪಿ ಸಿಂಗ್​ ಅವರ ಪತ್ನಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ವಾಪಸ್ಸಾಗುತ್ತಿದ್ದ ವೇಳೆ, ಬಿಹಾರದ ಲಖಿಸರೈ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಮತ್ತು ಟ್ರಕ್​ ಮಧ್ಯೆ ಅಪಘಾತ ಸಂಭವಿಸಿದೆ.

ಈ ವೇಳೆ ಕಾರಿನಲ್ಲಿದ್ದ 10 ಜನರಲ್ಲಿ ಕಾರು ಚಾಲಕ ಸೇರಿದಂತೆ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ದುರ್ಘಟನೆಯಲ್ಲಿ 4 ಮಂದಿ ತೀವ್ರ ಗಾಯಗೊಂಡಿದ್ದು, ಅವರನ್ನು ಪಟನಾ ಮತ್ತು ಲಖಿಸರೈ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಸುಶಾಂತ್​ ಸಿಂಗ್​ ಕುಟುಂಬದ ಲಾಲ್ಜಿತ್​ ಸಿಂಗ್​ ಅವರ ಮಕ್ಕಳಾದ ನೇಮಾನಿ ಸಿಂಗ್​, ರಾಮಚಂದ್ರ ಸಿಂಗ್​ ಮತ್ತು ಬೇಬಿದೇವಿ, ಅನಿತಾದೇವಿ ಮತ್ತು ಕಾರು ಚಾಲಕ ಪ್ರೀತಂಕುಮಾರ್​ ಎಂದು ಗುರುತಿಸಲಾಗಿದೆ.SHARE THIS

Author:

0 التعليقات: