Friday, 12 November 2021

ನಂದಾವರ ತಾಜುಲ್ ಉಲಮಾ ಕಲ್ಚರಲ್ ಸೆಂಟರ್ ಕಚೇರಿ ಉದ್ಘಾಟನೆ


 ನಂದಾವರ ತಾಜುಲ್ ಉಲಮಾ ಕಲ್ಚರಲ್ ಸೆಂಟರ್ ಕಚೇರಿ ಉದ್ಘಾಟನೆ

ಬಂಟ್ವಾಳ: ದಿನಾಂಕ 07-11/-2021 ಆದಿತ್ಯವಾರ ನಂದಾವರದಲ್ಲಿ ತಾಜುಲ್ ಉಲಮಾ ಕಲ್ಚರಲ್ ಸೆಂಟರ್ ಕಚೇರಿಯನ್ನು ಸಯ್ಯದ್ ಮುಶ್ತಾಕುರ್ರಹ್ಮಾನ್ ತಂಙಳ್ ಚಟ್ಟೆಕ್ಕಳ್ ಉದ್ಘಾಟಿಸಿದರು.

ಬೆಳಗ್ಗೆ 8:00 ಗಂಟೆಗೆ ಆರಂಭವಾದ ಕಾರ್ಯಕ್ರಮದಲ್ಲಿ ಆಲಡ್ಕ MJM ಮುದರ್ರಿಸ್ ಬಹು ಅಬೂಸ್ವಾಲಿಹ್ ಉಸ್ತಾದ್ ದುಆ ನಡೆಸಿ‌ದರು.‌ ತಾಜುಲ್ ಉಲಮಾ ಕಲ್ಚರಲ್ ಸೆಂಟರ್ ಅಧ್ಯಕ್ಷರಾದ ನಝೀರ್ ಮುಸ್ಲಿಯಾರ್ ನಂದಾವರ ಸ್ವಾಗತ ಭಾಷಣ ಮಾಡಿದರು. ಆಲಡ್ಕ BJM ಮುದರ್ರಿಸ್ ಅಶ್ರಫ್ ಸಖಾಫಿ ಸವಣೂರು ಆಶಂಸ ಭಾಷಣ ಮಾಡಿದರು. 

   ಅದೇ ದಿವಸ ಸಂಜೆ 4:00 ಗಂಟೆಗೆ ಕಚೇರಿಯಲ್ಲಿ ಫಾಮಿದ್ ಹನೀಫಿ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್'ಗೆ ಕರ್ನಾಟಕ ಮುಸ್ಲಿಂ ಜಮಾ'ಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾಫಿ ಸ'ಅದಿ ನಂದಾವರ ದುಆ ಮೂಲಕ ಚಾಲನೆ ನೀಡಿದರು, ಇಸ್'ಹಾಕ್ ಸಖಾಫಿ ನಂದಾವರ ಆಶಂಸ ಭಾಷಣ ಮಾಡಿದರು. ಮಗ್ರಿಬ್ ನಮಾಝ್ ನಂತರ ಮುಹ್ಯುದ್ದೀನ್ ಮಾಲೆ ಆಲಾಪನೆ ಕಾರ್ಯಕ್ರಮದಲ್ಲಿ ಸುಲೈಮಾನ್ ಮದನಿ ನಂದಾವರ ಸಮಾರೋಪ ದುಆ ಮಾಡಿದರು. SჄS ನಂದಾವರ ಬ್ರಾಂಚ್ ಅಧ್ಯಕ್ಷರಾದ N.ಹಸನ್ ಮದನಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಉಸ್ಮಾನ್ ಮಾಲಿಕ್ ನಂದಾವರ ವಂದಿಸಿದರೆ, ಅಬ್ದುರ್ರಹ್'ಮಾನ್ ಮದನಿ ನಂದಾವರ ನಿರೂಪಿಸಿದರು.ಇಸ್ಮಾಯಿಲ್ ಆಶ್ರಯ ಕೋಟೆ, ಶರೀಫಾಕ ನಂದಾವರ ಉಪಸ್ಥಿತರಿದ್ದರು, ಅಲ್ಲದೆ SSF, SჄS ಕಾರ್ಯಕರ್ತರು, ನಾಯಕರು, ಊರ-ಪರವೂರ ಹಿತೈಷಿಗಳು, ರಾಜಕೀಯ ಪ್ರಮುಖರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
SHARE THIS

Author:

0 التعليقات: