ಬಿಟ್ ಕಾಯಿನ್ ಪ್ರಕರಣ; ಪೊಲೀಸರ ತನಿಖೆ ಬೋಗಸ್: ಹ್ಯಾಕರ್ ಶ್ರೀಕೃಷ್ಣ ಆರೋಪ
ಬೆಂಗಳೂರು: ನನ್ನ ಬಳಿ ಅಪಾರ ಮೌಲ್ಯದ ಬಿಟ್ ಕಾಯಿನ್ ಜಪ್ತಿ ಮಾಡಿದ್ದೇವೆ ಎಂದು ಪೊಲೀಸರು ನೀಡಿರುವ ತನಿಖಾ ಹೇಳಿಕೆಯೂ ಬೋಗಸ್ ಎಂದು ಬಿಟ್ ಕಾಯಿನ್ ದಂಧೆಯ ಪ್ರಮುಖ ರೂವಾರಿ ಎನ್ನಲಾದ ಶ್ರೀಕೃಷ್ಣ ಹೇಳಿದ್ದಾರೆ.
ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಮೂಲಕ ಬಿಡುಗಡೆಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಬಳಿ ಯಾವುದೇ ರೀತಿಯ ಬಿಟ್ ಕಾಯಿನ್ಗಳಿಲ್ಲ. ಪೊಲೀಸರು ನೀಡಿರುವ ಹೇಳಿಕೆಯೂ ಬೋಗಸ್ ಆಗಿದೆ. ಜತೆಗೆ, ಮಾಧ್ಯಮಗಳು ಹಲವು ವಿಚಾರಗಳನ್ನು ಸೃಷ್ಟಿಸಿವೆ ಎಂದರು.
ನನಗೆ ಜಾಮೀನು ಯಾರು ನೀಡಿದ್ದಾರೋ ಗೊತ್ತಿಲ್ಲ. ನನ್ನ ಬಳಿ ಪೊಲೀಸರು ಹಣ ಜಪ್ತಿ ಮಾಡಿದ್ದಾರೆ ಎಂಬುದೆಲ್ಲಾ ಸುಳ್ಳು. ಅಲ್ಲದೆ, ಬಿಟ್ ಕಾಯಿನ್ ವಿಚಾರದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದರು.
0 التعليقات: