Tuesday, 23 November 2021

ವಿಧಾನಪರಿಷತ್ ಚುನಾವಣೆ: ಸಿದ್ದರಾಮಯ್ಯ ಅವರ ಬಣದ ಆಕಾಂಕ್ಷಿಗಳಿಗೆ ಮನ್ನಣೆ ನೀಡಿಲ್ಲ; ಬಿಜೆಪಿ ಆರೋಪ

 ವಿಧಾನಪರಿಷತ್ ಚುನಾವಣೆ: ಸಿದ್ದರಾಮಯ್ಯ ಅವರ ಬಣದ ಆಕಾಂಕ್ಷಿಗಳಿಗೆ ಮನ್ನಣೆ ನೀಡಿಲ್ಲ; ಬಿಜೆಪಿ ಆರೋಪ

ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗೆ ಸೋಮವಾರ ಕಾಂಗ್ರೆಸ್ ತನ್ನ 20ಮಂದಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದು, 'ಸಿದ್ದರಾಮಯ್ಯ ಅವರ ಬಣದ ಆಕಾಂಕ್ಷಿಗಳಿಗೆ ಮನ್ನಣೆ ನೀಡಿಲ್ಲ' ಎಂದು ಬಿಜೆಪಿ ಆರೋಪಿಸಿದೆ. 

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, 'ಬಂಡಾಯ ಅಭ್ಯರ್ಥಿಗಳನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗುವುದು ಎಂದು ಡಿಕೆಶಿ ಎಚ್ಚರಿಕೆ ನೀಡಿದ್ದಾರೆ. ಏನಿದರ್ಥ? ಕಾರ್ಯಕರ್ತರು ಯಾವುದೇ ಕಾರಣಕ್ಕೂ ಧ್ವನಿ ಎತ್ತಬಾರದೆಂಬ ಸೂಚನೆಯೋ ಅಥವಾ ಸಿದ್ದರಾಮಯ್ಯ ಬಣಕ್ಕೆ ನೀಡುತ್ತಿರುವ ಎಚ್ಚರಿಕೆಯೋ?' ಎಂದು ಬಿಜೆಪಿ ಪ್ರಶ್ನಿಸಿದೆ. 

 'ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗೆ ಸಿದ್ದರಾಮಯ್ಯ ಅವರ ಬಣದ ಆಕಾಂಕ್ಷಿಗಳಿಗೆ ಮನ್ನಣೆ ನೀಡಿಲ್ಲ. ಡಿಕೆಶಿ ಅವರ ಬಣ ಮೇಲುಗೈ ಸಾಧಿಸಿದೆ. ಹೀಗಾಗಿ ಬಂಡಾಯಗಾರರಿಗೆ ಡಿ.ಕೆ ಶಿಕುಮಾರ್  ಎಚ್ಚರಿಕೆ ನೀಡಿದ್ದಾರೆ. ಹಾಗಾದರೆ ಪರ್ಯಾಯವಾಗಿ ಉಚ್ಚಾಟನೆಯ ಬೆದರಿಕೆ ಹಾಕಿದ್ದು ಯಾರಿಗೆ?' ಎಂದು ಪ್ರಶ್ನಿಸಿದೆ. 


SHARE THIS

Author:

0 التعليقات: