Monday, 1 November 2021

ವೈದಿಕ ಆಚರಣೆಗಳಿಲ್ಲದೇ ನಡೆದ ಪುನೀತ್‌ ರಾಜ್‌ ಕುಮಾರ್‌ ಅಂತ್ಯಕ್ರಿಯೆ: ಪ್ರಶಂಸೆಗೆ ಪಾತ್ರವಾದ ನಡೆ


 ವೈದಿಕ ಆಚರಣೆಗಳಿಲ್ಲದೇ ನಡೆದ ಪುನೀತ್‌ ರಾಜ್‌ ಕುಮಾರ್‌ ಅಂತ್ಯಕ್ರಿಯೆ: ಪ್ರಶಂಸೆಗೆ ಪಾತ್ರವಾದ ನಡೆ

ಬೆಂಗಳೂರು: ಕನ್ನಡದ ಖ್ಯಾತ ನಟ ಪುನೀತ್‌ ರಾಜ್‌ ಕುಮಾರ್‌ ಹೃದಯಸ್ತಂಭನದಿಂದ ಮೃತಪಟ್ಟಿದ್ದು ಸಂಪೂರ್ಣ ರಾಜ್ಯವನ್ನೇ ದುಃಖಕ್ಕೀಡು ಮಾಡಿತ್ತು. ಕಂಠೀರವ ಮೈದಾನದಲ್ಲಿ ಅವರ ಅಂತ್ಯಕ್ರಿಯೆಯನ್ನೂ ನೆರವೇರಿಸಲಾಗಿತ್ತು. ಇದೀಗ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಯಾವುದೇ ರೀತಿಯ ವೈದಿಕ, ಪುರೋಹಿತ ಸಂಪ್ರದಾಯಗಳಿಲ್ಲದೇ ದ್ರಾವಿಡ-ಈಡಿಗ ಸಂಸ್ಕೃತಿ ಪ್ರಕಾರ ಸರಳವಾಗಿ ನಡೆಸಿದ ಕುರಿತು ಸಾಮಾಜಿಕ ತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಸಾಮಾನ್ಯವಾಗಿ ನಡೆಯುವಂತೆ ಪುರೋಹಿತರ ಉಪಸ್ಥಿತಿ, ಹೋಮ, ಹವನ, ದರ್ಬೆ ಕಟ್ಟುವುದು, ಕಳಶ ಪ್ರದರ್ಶನ ಇವುಗಳು ಯಾವುದೂ ಇಲ್ಲದೇ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಮನೆಯವರೇ ಸೇರಿಕೊಂಡು ದ್ರಾವಿಡ-ಈಡಿಗ ಸಂಸ್ಕೃತಿ ಪ್ರಕಾರ ಅಂತ್ಯಕ್ರಿಯೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ನೆಟ್ಟಿಗರು ಸಾಮಾಜಿಕ ತಾಣದಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದು, ಈ ವಿಚಾರದಲ್ಲಿ ರಾಜ್‌ ಕುಟುಂಬ ಹಾಕಿಕೊಟ್ಟ ಮಾದರಿಯನ್ನು ಅನುಸರಿಸಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


SHARE THIS

Author:

0 التعليقات: