Friday, 26 November 2021

ಬೆಲೆ ಏರಿಕೆ,ಹಣದುಬ್ಬರದ ವಿರುದ್ಧ ಡಿಸೆಂಬರ್‌ನಲ್ಲಿ ಕಾಂಗ್ರೆಸ್ ನಿಂದ ಮೆಗಾ ರ್ಯಾಲಿ

 ಬೆಲೆ ಏರಿಕೆ,ಹಣದುಬ್ಬರದ ವಿರುದ್ಧ ಡಿಸೆಂಬರ್‌ನಲ್ಲಿ ಕಾಂಗ್ರೆಸ್ ನಿಂದ ಮೆಗಾ ರ್ಯಾಲಿ

ಹೊಸದಿಲ್ಲಿ: ಬೆಲೆ ಏರಿಕೆ ಹಾಗೂ ಹಣದುಬ್ಬರದ ವಿರುದ್ಧ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಡಿಸೆಂಬರ್ 12 ರಂದು ದಿಲ್ಲಿಯಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಪಕ್ಷವು ಡಿಸೆಂಬರ್ 12 ರಂದು ದಿಲ್ಲಿಯಲ್ಲಿ ಬೃಹತ್ “ಮೆಹಂಗೈ ಹಟಾವೋ ರ್ಯಾಲಿ” ನಡೆಸುವ ಮೂಲಕ ಬೆಲೆ ಏರಿಕೆ ಹಾಗೂ ಹಣದುಬ್ಬರದ ಬಗ್ಗೆ ದೇಶದ ಗಮನ ಸೆಳೆಯಲು ನಿರ್ಧರಿಸಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.

ರ್ಯಾಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ  ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ದೇಶಾದ್ಯಂತದ ಇತರ ಕಾಂಗ್ರೆಸ್ ನಾಯಕರು ಭಾಷಣ ಮಾಡಲಿದ್ದಾರೆ.

ಈ ರ್ಯಾಲಿಯು ಮೋದಿ ಸರಕಾರಕ್ಕೆ ತನ್ನ ಲೂಟಿಯನ್ನು ನಿಲ್ಲಿಸಲು ಮತ್ತು ಬೆನ್ನುಮೂಳೆ ಮುರಿಯುವ ಬೆಲೆಯನ್ನು ಕಡಿಮೆ ಮಾಡಲು ನಿರ್ಣಾಯಕ ಎಚ್ಚರಿಕೆಯನ್ನು ನೀಡಲಿದೆ. ಮೋದಿ ಸರಕಾರವು ಹಿಂದೆ ಸರಿಯುವವರೆಗೂ ನಾವು ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಮೋದಿ ಹಾಗೂ ಮೆಹಂಗೈ" ಜನರ ಜೀವನದ ಶಾಪವಾಗಿ ಮಾರ್ಪಟ್ಟಿದೆ ಹಾಗೂ ಹಿಂದೆಂದೂ ಕಂಡರಿಯದ ಬೆಲೆ ಏರಿಕೆ ಮತ್ತು ಹಣದುಬ್ಬರವು ದೇಶದ ಪ್ರತಿ ಕುಟುಂಬದ ಆದಾಯ ಹಾಗೂ  ಬಜೆಟ್ ಅನ್ನು ನೆಲಸಮಗೊಳಿಸಿದೆ ಎಂದು ಕಾಂಗ್ರೆಸ್ ನಾಯಕ ಹೇಳಿದರು.

ಬಿಜೆಪಿ ಸರಕಾರ ನಡೆಸುತ್ತಿರುವ ಬೆಲೆ ಏರಿಕೆ ಹಾಗೂ  ಹಣದುಬ್ಬರದಿಂದಾಗಿ ಭಾರತದ ಜನರು ಅಸಹನೀಯ ಕ್ರೌರ್ಯ ಹಾಗೂ ಹೇಳಲಾಗದ ದುಃಖವನ್ನು ಅನುಭವಿಸುತ್ತಿದ್ದಾರೆ. ಜನರು  ಕನಿಷ್ಠ ಪೌಷ್ಠಿಕಾಂಶದ ಕೊರತೆಯಿಂದ ಬಳಲುತ್ತಿದ್ದಾರೆ ಹಾಗೂ ದಿನನಿತ್ಯದ ಆಹಾರ ಪದಾರ್ಥಗಳನ್ನು ಇತರ ಉಪಭೋಗ್ಯ ವಸ್ತುಗಳನ್ನು ಖರೀದಿಸಲು ಹಾಗೂ  ಸೇವಿಸಲು ಕಷ್ಟಪಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.


SHARE THIS

Author:

0 التعليقات: