ಪಂಜಾಬ್ ಕಾಂಗ್ರೆಸ್ ನಾಯಕ ಸುಖಪಾಲ್ ಸಿಂಗ್ ಖೈರಾ ಅವರನ್ನು ಬಂಧಿಸಿದ ಜಾರಿ ನಿರ್ದೇಶನಾಲಯ
ಚಂಡೀಗಢ/ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪಂಜಾಬ್ನ ಮಾಜಿ ಪ್ರತಿಪಕ್ಷ ನಾಯಕ ಸುಖಪಾಲ್ ಸಿಂಗ್ ಖೈರಾ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ತಂಡ ಗುರುವಾರ ಬಂಧಿಸಿದೆ.
56 ವರ್ಷದ ಕಾಂಗ್ರೆಸ್ ನಾಯಕ ತಾನು "ಯಾವುದೇ ತಪ್ಪು ಮಾಡಿಲ್ಲ" ಎಂದು ಈ ಹಿಂದೆ ಹೇಳಿಕೊಂಡಿದ್ದರು ಹಾಗೂ ಕೇಂದ್ರವು ಅಂಗೀಕರಿಸಿದ ಮೂರು ವಿವಾದಾಸ್ಪದ ಕೃಷಿ ಕಾನೂನುಗಳ ವಿರುದ್ಧ ದನಿಯೆತ್ತಿದ ಕಾರಣ ಕೇಂದ್ರ ಏಜೆನ್ಸಿಗಳಿಂದ ಗುರಿಯಾಗುತ್ತಿದ್ದೇನೆ ಎಂದಿದ್ದರು.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ)ಯ ನಿಬಂಧನೆಗಳ ಅಡಿಯಲ್ಲಿ ಪಂಜಾಬ್ನಲ್ಲಿ ಕೇಂದ್ರ ತನಿಖಾ ಸಂಸ್ಥೆಯು ಖೈರಾ ಅವರನ್ನು ವಶಕ್ಕೆ ತೆಗೆದುಕೊಂಡಿದೆ.
ಕಪುರ್ತಲಾ ಜಿಲ್ಲೆಯ ಭೋಲಾತ್ನ ಮಾಜಿ ಶಾಸಕ ಖೈರಾ ಡ್ರಗ್ಸ್ ದಂಧೆ ಆರೋಪಿಗಳು ಹಾಗೂ ನಕಲಿ ಪಾಸ್ಪೋರ್ಟ್ ಜಾಲದ 'ಸಹವರ್ತಿ' ಎಂದು ಈಡಿ ಆರೋಪಿಸಿತ್ತು. ಕೇಂದ್ರೀಯ ಸಂಸ್ಥೆ ಕಳೆದ ವರ್ಷ ಮಾರ್ಚ್ನಲ್ಲಿ ಖೈರಾ ಅವರ ನಿವಾಸ, ಪಂಜಾಬ್ನ ಒಂಬತ್ತು ಸ್ಥಳಗಳು ಹಾಗೂ ದಿಲ್ಲಿಯ ಅವರ ಅಳಿಯ ಇಂದರ್ವೀರ್ ಸಿಂಗ್ ಜೋಹಾಲ್ ಅವರ ಮನೆ ಸೇರಿದಂತೆ ಹನ್ನೆರಡು ಸ್ಥಳಗಳನ್ನು ಶೋಧಿಸಿತ್ತು.
0 التعليقات: