Saturday, 20 November 2021

ಯಾರನ್ನೂ ಬದಲಾಯಿಸುವ ಅಗತ್ಯವಿಲ್ಲ, ನಮ್ಮ ಜನರನ್ನು ಬದಲಾಗಲು ಬಿಡುವುದಿಲ್ಲ: ಮತಾಂತರದ ಕುರಿತು ಭಾಗ್ವತ್

 ಯಾರನ್ನೂ ಬದಲಾಯಿಸುವ ಅಗತ್ಯವಿಲ್ಲ, ನಮ್ಮ ಜನರನ್ನು ಬದಲಾಗಲು ಬಿಡುವುದಿಲ್ಲ: ಮತಾಂತರದ ಕುರಿತು ಭಾಗ್ವತ್

ಬಿಲಾಸ್‍ಪುರ್:  "ನಮ್ಮ ಸಮಾಜದಲ್ಲಿ ವೈವಿಧ್ಯತೆಯಿದೆ. ಹಲವಾರು ದೇವ, ದೇವತೆಗಳನ್ನು ಆರಾಧಿಸಲಾಗುತ್ತದೆ. ಎಲ್ಲರನ್ನೂ ಜತೆಯಾಗಿರಿಸಿ ಮುನ್ನಡೆಯಬೇಕಿದೆ ಹಾಗೂ ಶತಮಾನಗಳಿಂದ ಹೀಗೆಯೇ ನಡೆದು ಬರುತ್ತಿದೆ. ನಾವು ಯಾರನ್ನೂ ಬದಲಾಯಿಸುವ ಅಗತ್ಯವಿಲ್ಲ ಹಾಗೂ ನಮ್ಮ ಜನರು ಬದಲಾಗಲು ನಾವು ಬಿಡುವುದಿಲ್ಲ.  ಜನರು ಇಂದು ಹಿಂದು ಧರ್ಮವೆಂದು ಕರೆಯುವ ನಮ್ಮ ಧರ್ಮವನ್ನು ಜಗತ್ತಿಗೆ ನೀಡಬೇಕಿದೆ ಹಾಗೂ ಮತಾಂತರಕ್ಕೆ ಯತ್ನಿಸದೆ, ಒಂದು ಆರಾಧನೆಯಾಗದೆ ಒಂದು ಜೀವನ ವಿಧಾನವಾಗಿ ನಾವು ಅದನ್ನು ಕಲಿಸಬೇಕಿದೆ" ಎಂದು ಆರೆಸ್ಸೆಸ್ ಮುಖಂಡ  ಮೋಹನ್ ಭಾಗ್ವತ್ ಹೇಳಿದ್ದಾರೆ.

ಛತ್ತೀಸಗಢದ ಮುಂಗೇಲಿ ಜಿಲ್ಲೆಯ ಮಡ್ಕು ದ್ವೀಪ್ ಎಂಬಲ್ಲಿ ಮೂರು ದಿನಗಳ ಘೋಷ್ ಶಿವಿರ್ (ಸಂಗೀತ ಬ್ಯಾಂಡ್‍ಗಳ ಶಿಬಿರ) ಇದರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು "ಸತ್ಯ ಯಾವತ್ತೂ ಗೆಲ್ಲುತ್ತದೆ, ಸುಳ್ಳು ಗೆಲ್ಲುವುದಿಲ್ಲ. ನಮ್ಮ ದೇಶದ ಧರ್ಮ ಸತ್ಯವಾಗಿದೆ ಹಾಗೂ ಸತ್ಯವೇ ಧರ್ಮವಾಗಿದೆ" ಎಂದು ಅವರು ಹೇಳಿದರು.

ಭಾರತವನ್ನು 'ವಿಶ್ವ ಗುರು' ಆಗಿಸಲು ಎಲ್ಲರೂ ಜತೆಯಾಗಿ ಮುನ್ನಡೆಯಬೇಕಿದೆ ಎಂದೂ ಅವರು ಹೇಳಿದರು.


SHARE THIS

Author:

0 التعليقات: