ಚನ್ನಪಟ್ಟಣದಲ್ಲಿನ ಮಳೆಗೆ ತೇಲಿದ ಹೆಣಗಳು...
ರಾಮನಗರ: ಕಳೆದ 15 ದಿನಗಳಿಂದ ರಾಮನಗರ ಜಿಲ್ಲೆಯಾದ್ಯಂತ ಜೋರು ಮಳೆ ಸುರಿಯುತ್ತಿದ್ದು ರೈತರ ಜಮೀನು ಸೇರಿದಂತೆ ಕೆರೆಕಟ್ಟೆಗಳು ತುಂಬಿ ಹರಿಯುತ್ತಿವೆ. ಹುಣಸನಹಳ್ಳಿ ಕೊಂಡಾಪುರ ಮಧ್ಯೆ ತೆಲುತ್ತಿರುವ ಹೆಣಗಳನ್ನ ಜನರು ನೋಡಿ ಆತಂಕವ್ಯಕ್ತಪಡಿಸಿದ್ದಾರೆ.
ಈ ಭಾಗದಲ್ಲಿ ಅಂತ್ಯಕ್ರಿಯೆ ನಡೆಸಲು ಸ್ಮಶಾನವಿಲ್ಲದೆ ಕಣ್ವ ನದಿ ದಡದಲ್ಲಿ ಹೂಳಲಾಗಿದ್ದ ಹೆಣಗಳು ಈಗ ನೀರಿನ ರಭಸಕ್ಕೆ ಮೇಲೆದ್ದಿವೆ. ಹತ್ತಾರು ಕೆರೆ-ಕಟ್ಟೆ, ಹಳ್ಳ- ಕೊಳ್ಳಗಳು ಬಾರಿ ಮಳೆಗೆ ಮೈದುಂಬಿ ಹರಿದಿದ್ದರಿಂದ ನೀರಿನ ಕೊರೆತಕ್ಕೆ ಹೆಣಗಳು ಮೇಲೆದ್ದು ತೇಲುತ್ತಿವೆ ಎನ್ನಲಾಗ್ತಿದೆ. ಜೊತೆಗೆ ತೋಟಗಳಲ್ಲಿ ಹಾಕಲಾಗಿದ್ದ ತೆಂಗಿನ ಕಾಯಿ ಕೂಡ ಹಳ್ಳಗಳ ಮೂಲಕ ನದಿಗೆ ಬಂದು ತೇಲುತ್ತಿವೆ.
ಕಣ್ವ ಜಲಾಶಯ ಸದ್ಯ 28 ಅಡಿಗಳಾಗಿದ್ದು, ಜಲಾಶಯದ ನೀರಿನ ಮಟ್ಟ 33.5 ಅಡಿ ಇದೆ. ಜಲಾಶಯ ತುಂಬದಿದ್ದರೂ ಹತ್ತಾರು ಕೆರೆ ತುಂಬಿ ಕೊಡಿ ಬಿದ್ದಿದ್ದರಿಂದ ವಿರುಪಾಕ್ಷಿಪುರ ಹೋಬಳಿ ಭಾಗದ ಸಾದಾರಹಳ್ಳಿ, ಹುಣಸನಹಳ್ಳಿ, ಕೊಂಡಾಪುರ, ಮಾದಾಪುರ, ಬಾಣಗಹಳ್ಳಿ, ಅಂಬಾಡಹಳ್ಳಿ, ನೆಲಮಾಕನಹಳ್ಳಿ ಸಾಮಂದಿಪುರ ಸರಹದ್ದಿನಲ್ಲಿ ಮೈದುಂಬಿ ಹರಿಯುತ್ತಿದ್ದು, ನದಿ ನೀರು ಶಿಂಷಾನದಿಯಲ್ಲಿ ಸಂಗಮಗೊಂಡು ಮುತ್ತತ್ತಿ ಬಳಿ ಕಾವೇರಿ ನದಿಗೆ ಸೇರುತ್ತಿದೆ. ಹತ್ತಾರು ವರ್ಷಗಳ ನಂತರ ಈ ರೀತಿ ಮೈದುಂಬಿ ಹರಿಯುತ್ತಿರುವ ಕಣ್ವ ನದಿ, ಮಳೆ ನೀರಿನ ರಭಸಕ್ಕೆ ಹೆಣಗಳು ತೇಲಿ ಬರುತ್ತಿದೆ.
ಜನರು ಕಂಗಾಲು:
ಈಗ ಬೀಳುತ್ತಿರುವ ಬಾರಿ ಮಳೆಯಿಂದಾಗಿ ಹಳ್ಳ-ಕೊಳ್ಳಗಳಲ್ಲಿ ನೀರು ಹರಿದು ಕೆರೆ ಕೋಡಿ ಹರಿಯುತ್ತಿವೆ. ಇದರಿಂದ ಕೆರೆ ಕೋಡಿಯಿಂದ ಹೊರ ಬಂದ ನೀರು ಕಣ್ವ ನದಿಗೆ ಹರಿಯುತ್ತಿದ್ದು, ನದಿಗೆ ಹತ್ತಾರು ವರ್ಷಗಳ ನಂತರ ಜೀವ ಕಳೆ ಬಂದಿದೆ. ಜೊತೆಗೆ ಈಗ ಬೀಳುತ್ತಿರುವ ಮಳೆಯಿಂದಾಗಿ ನರೇಗಾ ಯೋಜನೆಯಡಿ ನಿರ್ಮಿಸಿದ ಚನ್ನಪಟ್ಟಣ ತಾಲೂಕಿನ ನೂರಾರು ಚೆಕ್ ಡ್ಯಾಂಗಳು ತುಂಬಿಕೊಂಡು ನಳನಳಿಸುತ್ತಿವೆ. ಇನ್ನಷ್ಟು ಚೆಕ್ ಡ್ಯಾಂಗಳು ಕಳಪೆ ಕಾಮಗಾರಿಯಿಂದ ಹಾನಿಗೊಳಗಾಗಿವೆ.
ಬಂಡೂರು ಕೆರೆ ಮತ್ತು ಬಿ. ವಿ. ಹಳ್ಳಿ ಕೆರೆ ಕೋಡಿ ಬಿದ್ದಿರುವುದರಿಂದ ನೂರಾರು ಎಕರೆ ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ನಷ್ಟವಾಗಿದೆ. ಅಲ್ಲದೇ ಸಾಕಷ್ಟು ಭೂ ಸವಕಳಿ ಉಂಟಾಗಿ ಲಕ್ಷಾಂತರ ರೂ ನಷ್ಟವಾಗಿದೆ. ಸೋಮವಾರ ರಾತ್ರಿ ಸುರಿದ ಮಳೆಗೆ ವಿರೂಪಾಕ್ಷಿಪುರ ಹಾಗೂ ಬಿ. ವಿ. ಹಳ್ಳಿ ಕೆರೆ ತುಂಬಿ ಕೋಡಿ ಹೊಡೆದ ಪರಿಣಾಮ ಕೆ. ಜಿ. ಮಹಡಿ ಗ್ರಾಮದಲ್ಲಿ ಜಮೀನಿಗೆ ನೀರು ನುಗ್ಗಿ ರೈತರು ಬೆಳೆದಿದ್ದ ರಾಗಿ, ತೆಂಗು, ಭತ್ತ, ಬಾಳೆ ಬೆಳೆ ಸಂಪೂರ್ಣ ನಾಶವಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದ ಹಾಗೆ ಆಗಿದೆ ರೈತರ ಪರಿಸ್ಥಿತಿ.
ಮನೆ ಮುಂದೆ ಹಾಕಿದ ತೆಂಗಿನಕಾಯಿ ಹಾಗೂ ಗೊಬ್ಬರದ ಮೂಟೆಗಳು ನೀರುಪಾಗಿವೆ. ಇನ್ನೂ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರೀಶಿಲನೆ ಮಾಡಿದರು. ರೈತರಿಗೆ ಸೂಕ್ತ ಪರಿಹಾರ ನೀಡುವ ಭರವಸೆವನ್ನು ನೀಡಿದ್ದಾರೆ. ರೈತರಿಗೆ ಮಳೆಯಿಂದ ಆಗಿರುವ ಆಗಿರುವ ನಷ್ಟಕ್ಕೆ ನೆರೆ ಪರಿಹಾರ ಯೋಜನೆಯಡಿ ತಾಲೂಕು ಮತ್ತು ಜಿಲ್ಲಾಡಳಿತ ನೈಜ ಸ್ಥಿತಿ ಅನುಸರಿಸಿ ಸೂಕ್ತ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.
0 التعليقات: