ಓಬಿಸಿ ವಿದ್ಯಾರ್ಥಿಗಳ ಶಿಷ್ಯ ವೇತನ ಕಿತ್ತುಕೊಂಡ ಬಿಜೆಪಿ: ಸಿದ್ದರಾಮಯ್ಯ ಆರೋಪ

ಬೆಂಗಳೂರು: `ಉನ್ನತ ಶಿಕ್ಷಣ ಪ್ರೋತ್ಸಾಹಕ ಕಾಂಗ್ರೆಸ್ ವರ್ಸ್ಸ್ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ವಿರೋಧಿ ಬಿಜೆಪಿ. ವಿದ್ಯಾಸಿರಿ ಯೋಜನೆಯಡಿ ಮೂರುವರೆ ಲಕ್ಷ ವಿದ್ಯಾರ್ಥಿಗಳಿಗೆ 398 ಕೋಟಿ ರೂ.ವಿದ್ಯಾರ್ಥಿ ವೇತನ. ಹಿಂದುಳಿದ ವರ್ಗದ ಪಿಎಚ್ಡಿ ವಿದ್ಯಾರ್ಥಿಗಳ ಶಿಷ್ಯ ವೇತನ ಕಿತ್ತುಕೊಂಡ ಬಿಜೆಪಿ ಸರಕಾರ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ದೂರಿದ್ದಾರೆ.
ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, `ರೈತಪರ ಕಾಂಗ್ರೆಸ್ ವರ್ಸ್ಸ್ ರೈತ ವಿರೋಧಿ ಬಿಜೆಪಿ. 2017-18ರ ಅವಧಿಯಲ್ಲಿ ಬಿಜೆಪಿ ಸರಕಾರ ಕೃಷಿ ಕ್ಷೇತ್ರಕ್ಕೆ ನೀಡಿದ ಅನುದಾನ 7,637 ಕೋಟಿ ರೂ., 2013-2018ರ ವರೆಗಿನ ಅವಧಿಯಲ್ಲಿ ಕಾಂಗ್ರೆಸ್ ಸರಕಾರ ಕೃಷಿ ಕ್ಷೇತ್ರಕ್ಕೆ ನೀಡಿದ್ದ ಅನುದಾನ 19,651 ಕೋಟಿ ರೂ., ಎಂದರೆ ಶೇ.256ರಷ್ಟು ಹೆಚ್ಚು' ಎಂದು ಅಂಕಿ-ಅಂಶಗಳನ್ನು ನೀಡಿ ವಾಗ್ದಾಳಿ ನಡೆಸಿದ್ದಾರೆ.
0 التعليقات: