Friday, 19 November 2021

ಯಾರೂ ಇಲ್ಲದೆ ಆಸ್ಪತ್ರೆಯಲ್ಲಿ ಕಳೆದ ವೃದ್ಧನಿಗೆ ಮುಹಿಮ್ಮಾತ್ ಆಶ್ರಯ


 ಯಾರೂ ಇಲ್ಲದೆ ಆಸ್ಪತ್ರೆಯಲ್ಲಿ ಕಳೆದ ವೃದ್ಧನಿಗೆ ಮುಹಿಮ್ಮಾತ್ ಆಶ್ರಯ

ಕಾಸರಗೋಡು: ಸ್ವಂತವಾಗಿ ಮನೆ ಮತ್ತು ಹೋಗಲು ಯಾವುದೇ ಸ್ಥಳ ಇಲ್ಲದೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ನೋವಿನಿಂದ ಇದ್ದ ತಲಶ್ಯೇರಿಯ ಮುಹಮ್ಮದ್ ಅವರಿಗೆ ಕುಂಬಳೆ ಮುಹಿಮ್ಮಾತ್  ಇನ್ನು ಮುಂದೆ ಆಶ್ರಯ ನೀಡಲಿದೆ.

ಮುಹಮ್ಮದ್ ರವರ ದಯನೀಯ ಅವಸ್ಥೆ ವಾರ್ತೆ ಆದ ಕಾರಣದಿಂದ ಮುಹಿಮ್ಮಾತ್ ನಾಯಕರು ಮತ್ತು ಎಸ್ ವೈ ಎಸ್ ಸಾಂತ್ವನ ಕಾರ್ಯಕರ್ತರು ಆಸ್ಪತ್ರೆಗೆ ತಲುಪಿ ಆಶ್ವಾಸ ನೀಡಿದರು. 

ಮುಹಮ್ಮದ್ ಅವರನ್ನು ಸಂರಕ್ಷಿಸಲು ಕಾಸರಗೋಡು ಪೊಲೀಸ್ ಸ್ಟೇಷನ್ ಹೌಸ್ ಆಫೀಸರ್ ಅಧಿಕೃತವಾಗಿ ಪತ್ರದ ಮೂಲಕ ವಿನಂತಿಸಿದ ಕಾರಣ ತಕ್ಷಣವೇ ಮುಹಿಮ್ಮಾತ್ ನಾಯಕರು ಆಸ್ಪತ್ರೆಗೆ ಭೇಟಿ ಕೊಟ್ಟು ಅವರಿಗೆ ಮುಹಿಮ್ಮಾತ್ ಸೇಫ್ ಹೋಮಿನ ಅಡಿಯಲ್ಲಿ ಎಲ್ಲಾ ವಿಧದ ಸಂರಕ್ಷಣೆ ನೀಡುವುದಾಗಿ ಭರವಸೆ ನೀಡಿದರು.

ಮುಹಿಮ್ಮಾತ್ ಸೆಕ್ರೆಟರಿ ಅಬ್ದುಲ್ ಖಾದರ್ ಸಖಾಫಿ,  ಸೇಫ್ ಹೋಂ ಡೈರೆಕ್ಟರ್  ಮೂಸ ಸಖಾಫಿ ಕಳತ್ತೂರ್, ಕಾಸರಗೋಡು ವಲಯ ಸಾಂತ್ವನ ಸೆಕ್ರೆಟರಿ ಸಿರಾಜ್ ಕೋಟಕ್ಕುನ್ನು, ಸಾಂತ್ವನ ಟೀಮ್ ಸದಸ್ಯರಾಗಿರುವ ಫಾರೂಕ್ ಕುಬ್ಬನ್ನೂರ್ , ಮುಹಮ್ಮದ್ ಕುಂಞಿ ಉಳುವಾರ್ ಮುಂತಾದವರು ಆಸ್ಪತ್ರೆಗೆ ತಲುಪಿ ಮುಹಮ್ಮದ್ ಅವರನ್ನು ಸ್ವೀಕರಿಸಿದರು. 

ಈ ತಿಂಗಳು ಮೊದಲನೆಯದಾಗಿ ಕಾರ್ಯಾಚರಣೆ ಆರಂಭಿಸಿದ ಮುಹಿಮ್ಮಾತ್ ಸೇಫ್ ಹೋಮಿನಲ್ಲಿ ಇದೀಗ ಆಶ್ರಯ ಇಲ್ಲದ 18 ಮಂದಿಗೆ ಆಶ್ರಯ ನೀಡಲಾಗುತ್ತಿದೆ.


SHARE THIS

Author:

0 التعليقات: