Tuesday, 2 November 2021

‘ಅವರನ್ನು ಕ್ಷಮಿಸಿ, ತಂಡವನ್ನು ರಕ್ಷಿಸಿ’:ವಿರಾಟ್ ಕೊಹ್ಲಿಗೆ ರಾಹುಲ್ ಗಾಂಧಿ ಟ್ವಿಟರ್ ಸಂದೇಶ


 ‘ಅವರನ್ನು ಕ್ಷಮಿಸಿ, ತಂಡವನ್ನು ರಕ್ಷಿಸಿ’:ವಿರಾಟ್ ಕೊಹ್ಲಿಗೆ ರಾಹುಲ್ ಗಾಂಧಿ ಟ್ವಿಟರ್ ಸಂದೇಶ

ಹೊಸದಿಲ್ಲಿ: ಪಾಕಿಸ್ತಾನ ವಿರುದ್ಧದ ಟ್ವೆಂಟಿ-20 ವಿಶ್ವಕಪ್ ಪಂದ್ಯದಲ್ಲಿನ ಸೋಲಿನ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ನಿಂದನೆಗೆ ಗುರಿಯಾಗಿದ್ದ ಸಹ ಆಟಗಾರ ಮುಹಮ್ಮದ್ ಶಮಿಯವರನ್ನು ಬೆಂಬಲಿಸಿ ಮಾತನಾಡಿದ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯವರ ಒಂಬತ್ತು ತಿಂಗಳ ಮಗುವಿಗೆ ಅತ್ಯಾಚಾರ ಬೆದರಿಕೆ ಬಂದ ನಂತರ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬೆಂಬಲ ಸಂದೇಶವನ್ನು ಟ್ವೀಟ್ ಮಾಡಿದ್ದಾರೆ.

"ಪ್ರೀತಿಯ ವಿರಾಟ್, ಈ ಜನರು ದ್ವೇಷದಿಂದ ತುಂಬಿದ್ದಾರೆ. ಏಕೆಂದರೆ ಯಾರೂ ಅವರಿಗೆ ಯಾವುದೇ ಪ್ರೀತಿಯನ್ನು ನೀಡುವುದಿಲ್ಲ. ಅವರನ್ನು ಕ್ಷಮಿಸಿ, ತಂಡವನ್ನು ರಕ್ಷಿಸಿ" ಎಂದು ರಾಹುಲ್ ಗಾಂಧಿ ಮಂಗಳವಾರ ಸಂಜೆ ಟ್ವೀಟ್ ಮಾಡಿದ್ದಾರೆ.

ಇಂದು ಮುಂಜಾನೆ ದಿಲ್ಲಿ ಮಹಿಳಾ ಆಯೋಗವು ದಿಲ್ಲಿ ಪೊಲೀಸರಿಗೆ ನೋಟಿಸ್ ಕಳುಹಿಸಿದ್ದು, ಕೊಹ್ಲಿ ಮಗುವಿನ ವಿರುದ್ಧ ಭಯಾನಕ ಬೆದರಿಕೆ ಪ್ರಕರಣದ  ಕುರಿತು ಕ್ರಮ ತೆಗೆದುಕೊಳ್ಳಲಾಗಿರುವ ವರದಿಯನ್ನು ಕೇಳಿದೆ.

ವಿರಾಟ್ ಕೊಹ್ಲಿ ಹಾಗೂ  ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಮಗಳ ವಿರುದ್ಧದ ಬೆದರಿಕೆಗಳು ತುಂಬಾ ನಾಚಿಕೆಗೇಡಿನ ಸಂಗತಿ' ಎಂದು ಡಿಸಿಡಬ್ಲ್ಯೂ ಅಧ್ಯಕ್ಷರು ಹೇಳಿದ್ದಾರೆ ಹಾಗೂ  ಬೆದರಿಕೆ ಹಾಕುತ್ತಿರುವವರನ್ನು ತರಾಟೆಗೆ ತೆಗೆದುಕೊಂಡರು.


SHARE THIS

Author:

0 التعليقات: