ಮಧ್ಯರಾತ್ರಿ ಹಸುವೊಂದನ್ನು ರಕ್ಷಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಪಂಜಾಬ್ ಮುಖ್ಯಮಂತ್ರಿ ಚನ್ನಿ
ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಅವರು ರವಿವಾರ ರಾತ್ರಿ ತಮ್ಮ ಮನೆಗೆ ಹೋಗುವ ಹಾದಿಯಲ್ಲಿ ಕಂದಕದಲ್ಲಿ ಬಿದ್ದಿದ್ದ ಹಸುವೊಂದನ್ನು ರಕ್ಷಿಸುವ ಪ್ರಯತ್ನಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರ ಮನಸ್ಸು ಗೆದ್ದಿದ್ದಾರೆ.
"ನಾನು ನಿವಾಸಕ್ಕೆ ಹಿಂತಿರುತ್ತಿದ್ದಾಗ ಹಸುವೊಂದು ಹೊಂಡದಲ್ಲಿ ಬಿದ್ದಿತ್ತು. ಹಸುವಿನ ರಕ್ಷಣೆಗಾಗಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ" ಎಂದು ಚನ್ನಿ ರವಿವಾರ ಮಧ್ಯರಾತ್ರಿಯ ಸುಮಾರಿಗೆ ಟ್ವೀಟ್ ಮಾಡಿ, 17 ನಿಮಿಷಗಳ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಮುಖ್ಯಮಂತ್ರಿಯವರು ಪಂಜಾಬಿ ಭಾಷೆಯಲ್ಲಿ ಗುಂಪಿನೊಂದಿಗೆ ಹಸುವನ್ನು ಸುರಕ್ಷಿತವಾಗಿ ಎಳೆಯುವ ಅತ್ಯುತ್ತಮ ಮಾರ್ಗದ ಕುರಿತು ಚರ್ಚಿಸಿ ಸಲಹೆ ನೀಡುತ್ತಿರುವುದು ವೀಡಿಯೊದಲ್ಲಿದೆ,. ಹಸುವನ್ನು ಹೊರ ತೆಗೆಯಲು ಗುಂಪು ಹಗ್ಗಗಳನ್ನು ಬಳಸಿದಾಗ ಚನ್ನಿ ಕೂಡ ಟಾರ್ಚ್ ಹಿಡಿದಿರುವುದು ಕಂಡುಬಂದಿದೆ.
ಚನ್ನಿ ಅವರ ವೀಡಿಯೊ 15,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಹಾಗೂ 2,000 ಲೈಕ್ಗಳನ್ನು ಗಳಿಸಿದೆ.
ಅನೇಕರು ಅವರ ಬಗ್ಗೆ ಪ್ರಶಂಸೆಯ ಸುರಿಮಳೆಗೈದರು. ಕೆಲವರು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರೊಂದಿಗೆ ಹೋಲಿಕೆ ಮಾಡಿದರು.
0 التعليقات: