ಇದೇ ಮೊದಲ ಬಾರಿ ಭಾರತದಲ್ಲಿ ಪುರುಷರಿಗಿಂತ ಹೆಚ್ಚು ಮಹಿಳೆಯರು !

ಹೊಸದಿಲ್ಲಿ: ಇದೇ ಮೊದಲ ಬಾರಿಗೆ ಐದನೇ ರಾಷ್ಟ್ರೀಯ ಹಾಗೂ ಕುಟುಂಬ ಆರೋಗ್ಯ ಸಮೀಕ್ಷೆಯ (ಎನ್ ಎಫ್ ಎಚ್ ಎಸ್-5) ಹಂತ-II ವರದಿಯ ಪ್ರಕಾರ ಭಾರತದಲ್ಲಿ 1,000 ಪುರುಷರಿಗೆ 1,020 ಮಹಿಳೆಯರಿದ್ದಾರೆ ಎಂದು deccanherald.com ವರದಿ ಮಾಡಿದೆ.
ಯಾವುದೇ ಎನ್ ಎಫ್ ಎಚ್ ಎಸ್ ಸಮೀಕ್ಷೆ ಅಥವಾ ಜನಗಣತಿಯಲ್ಲಿ ಲಿಂಗ ಅನುಪಾತದಲ್ಲಿ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಹೆಚ್ಚಿರುವುದು ಇದೇ ಮೊದಲು. 2005-06 ಎನ್ ಎಫ್ ಎಚ್ ಎಸ್ -3 ವರದಿಯಲ್ಲಿ ಅನುಪಾತವು 1000:1000 ಆಗಿತ್ತು. ಆದಾಗ್ಯೂ, 2015-16ರಲ್ಲಿ ಎನ್ ಎಫ್ ಎಚ್ ಎಸ್ ವರದಿಯಲ್ಲಿ ಇದು 991:1000 ಕ್ಕೆ ಇಳಿದಿದೆ.
“ಜನಗಣತಿಯಿಂದ ನಿಜವಾದ ಚಿತ್ರಣ ಹೊರಹೊಮ್ಮುತ್ತದೆಯಾದರೂ ಜನನದ ಸಮಯದಲ್ಲಿ ಸುಧಾರಿತ ಲಿಂಗ ಅನುಪಾತ ಹಾಗೂ ಲಿಂಗ ಅನುಪಾತವು ಗಮನಾರ್ಹ ಸಾಧನೆಯಾಗಿದೆ. ಮಹಿಳಾ ಸಬಲೀಕರಣಕ್ಕಾಗಿ ನಮ್ಮ ಕ್ರಮಗಳು ನಮ್ಮನ್ನು ಸರಿಯಾದ ದಿಕ್ಕಿನಲ್ಲಿ ನಡೆಸಿವೆ ಎಂದು ಫಲಿತಾಂಶಗಳನ್ನು ನೋಡಿದಾಗ ನಾವು ಹೇಳಬಹುದು”ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಮಿಷನ್ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ವಿಕಾಸ್ ಶೀಲ್ Hindustan Times ಗೆ ತಿಳಿಸಿದ್ದಾರೆ.
1020:1000ರ ಲಿಂಗ ಅನುಪಾತವು ದೇಶವು ಸಾಧಿಸಿದ ಮಹತ್ವದ ಮೈಲಿಗಲ್ಲು ಆಗಿದ್ದರೂ ಕಳೆದ ಐದು ವರ್ಷಗಳಲ್ಲಿ ಜನನದ ಸಮಯದಲ್ಲಿ ಲಿಂಗ ಅನುಪಾತವು 929 ರಷ್ಟಿದೆ.
0 التعليقات: