Saturday, 13 November 2021

ಬಿಟ್ ಕಾಯಿನ್ ಹಗರಣ ದೊಡ್ಡದು, ಅದನ್ನು ಮುಚ್ಚಿಹಾಕುವುದು ಅದಕ್ಕಿಂತ ದೊಡ್ಡ ಹಗರಣ: ರಾಹುಲ್ ಗಾಂಧಿ


 ಬಿಟ್ ಕಾಯಿನ್ ಹಗರಣ ದೊಡ್ಡದು, ಅದನ್ನು ಮುಚ್ಚಿಹಾಕುವುದು ಅದಕ್ಕಿಂತ ದೊಡ್ಡ ಹಗರಣ: ರಾಹುಲ್ ಗಾಂಧಿ

ಹೊಸದಿಲ್ಲಿ: ಬಿಟ್ ಕಾಯಿನ್ ಹಗರಣ ದೊಡ್ಡದು. ಆದರೆ ಅದನ್ನು ಮುಚ್ಚಿಹಾಕುವುದು ಅದಕ್ಕಿಂತ ದೊಡ್ಡ ಹಗರಣ. ಏಕೆಂದರೆ ಇದು ಯಾರೊ ಒಬ್ಬರ ನಕಲಿ ದೊಡ್ಡ ಅಹಂ ಅನ್ನು ಮರೆಮಾಚುತ್ತಿದೆ ಎಂದು  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ನಡುವೆ ರಾಜಕೀಯ ಜಟಾಪಟಿಗೆ ಕಾರಣವಾಗಿರುವ ಬಿಟ್ ಕಾಯಿನ್ ಹಗರಣದ ಕುರಿತು ಇಂದು ಟ್ವೀಟಿಸಿದ್ದಾರೆ.

ಬಿಟ್ ಕಾಯಿನ್ ಹಗರಣದಲ್ಲಿ ಬಿಜೆಪಿ ನಾಯಕರು ಶಾಮೀಲಾಗಿದ್ದು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಕಾಂಗ್ರೆಸ್ ಪಕ್ಷ ಆಗ್ರಹಿಸುತ್ತಿದೆ. ಹಗರಣದಲ್ಲಿ ಕಾಂಗ್ರೆಸ್ ನಾಯಕರ ಮಕ್ಕಳು ಇದ್ದಾರೆ ಎಂದು ಬಿಜೆಪಿ ಪ್ರತ್ಯಾರೋಪ ಮಾಡಿದೆ.


SHARE THIS

Author:

0 التعليقات: