Monday, 1 November 2021

ಮುಹಮ್ಮದ್‌ ಶಮಿಗೆ ಬೆಂಬಲ: ಟ್ವಿಟರ್‌ ನಲ್ಲಿ ವಿರಾಟ್‌ ಕೊಹ್ಲಿ ಪುತ್ರಿಗೆ ಅತ್ಯಾಚಾರ ಬೆದರಿಕೆ !


ಮುಹಮ್ಮದ್‌ ಶಮಿಗೆ ಬೆಂಬಲ:
ಟ್ವಿಟರ್‌ ನಲ್ಲಿ ವಿರಾಟ್‌ ಕೊಹ್ಲಿ ಪುತ್ರಿಗೆ ಅತ್ಯಾಚಾರ ಬೆದರಿಕೆ !

ಹೊಸದಿಲ್ಲಿ: ಇದೀಗ ಡಿಲೀಟ್ ಆಗಿರುವ @Criccrazyygirl ಖಾತೆಯಿಂದ ಭಾರತ ಪುರುಷರ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ  ಅವರ ಪುತ್ರಿ ಒಂಬತ್ತು ತಿಂಗಳ ವಮಿಕಾ ಕೊಹ್ಲಿಗೆ ಅತ್ಯಾಚಾರ ಬೆದರಿಕೆ ಹಾಕಿರುವ ಟ್ವೀಟ್ ಬಂದಿದ್ದು, ಇದು ಎಲ್ಲರನ್ನು ಭಯಭೀತರನ್ನಾಗಿಸಿದೆ ಎಂದು The quint  ವರದಿ ಮಾಡಿದೆ

ಅತ್ಯಾಚಾರದ ಬೆದರಿಕೆಯನ್ನು ಟ್ವೀಟ್ ಮಾಡಿದ ವ್ಯಕ್ತಿಯ ಗುರುತನ್ನು ಇನ್ನಷ್ಟೇ ಪರಿಶೀಲಿಸಬೇಕಾಗಿದೆ. ಪಾಕಿಸ್ತಾನದ ಮೂಲದ ಖಾತೆಯೆಂದು ಮೊದಲು ಪ್ರಚಾರ ಮಾಡಲಾಗಿತ್ತು. ಆದರೆ, ಈ ಹಿಂದೆ ಮೂರು ಬಾರಿ ಈ ಖಾತೆಯ ಹೆಸರು ಬದಲಾವಣೆ ಮಾಡಲಾಗಿದ್ದು, ಬಲಪಂಥೀಯ ವಿಚಾರಧಾರೆಗಳನ್ನು ಪೋಸ್ಟ್‌ ಮಾಡುತ್ತಿತ್ತು ಎಂದು altnews ಸಹಸಂಸ್ಥಾಪಕ ಮುಹಮ್ಮದ್‌ ಝುಬೈರ್‌ ಟ್ವೀಟ್‌ ಮಾಡಿದ್ದಾರೆ.

ಈಗ ಯುಎಇ ಹಾಗೂ ಒಮಾನ್ ನಲ್ಲಿ ನಡೆಯುತ್ತಿರುವ ಪುರುಷರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಕ್ರಿಕೆಟ್ ತಂಡವು 10 ವಿಕೆಟ್‌ಗಳ ಸೋಲನ್ನು ಅನುಭವಿಸಿದ ನಂತರ ಆನ್‌ಲೈನ್‌ನಲ್ಲಿ ದಾಳಿಗೊಳಗಾದ ತಂಡದ ಸಹ ಆಟಗಾರ ಮುಹಮ್ಮದ್ ಶಮಿಯವರನ್ನು ಬೆಂಬಲಿಸಿ ಮಾತನಾಡಿದ್ದಕ್ಕಾಗಿ ನಾಯಕ ಕೊಹ್ಲಿ ಕಟುವಾದ ಟ್ರೋಲಿಂಗ್ ಎದುರಿಸುತ್ತಿರುವ ಸಮಯದಲ್ಲಿ ಈ ಟ್ವೀಟ್ ಬಂದಿದೆ.

ಪಾಕ್ ವಿರುದ್ಧ  ಪಂದ್ಯದಲ್ಲಿ  3.5 ಓವರ್‌ಗಳಲ್ಲಿ 43 ರನ್‌ಗಳನ್ನು ಬಿಟ್ಟುಕೊಟ್ಟ ನಂತರ ಶಮಿ ಅವರು ಇನ್‌ಸ್ಟಾಗ್ರಾಮ್ ಹಾಗೂ ಟ್ವಿಟರ್‌ನಲ್ಲಿ ಕೆಟ್ಟ ಆನ್‌ಲೈನ್ ಟ್ರೋಲಿಂಗ್ ಮತ್ತು ನಿಂದನೆಗೆ ಒಳಗಾಗಿದ್ದರು. ಶಮಿ ಅವರ ದೇಶಭಕ್ತಿಯನ್ನು ಪ್ರಶ್ನಿಸುತ್ತಿರುವ ಟ್ರೋಲ್‌ಗಳನ್ನು ಕೊಹ್ಲಿ ತರಾಟೆಗೆ ತೆಗೆದುಕೊಂಡಿದ್ದರು.

ಅಕ್ಟೋಬರ್‌ನಲ್ಲಿ ಐಪಿಎಲ್ 2020 ರ ಸಮಯದಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರ ಕಳಪೆ ಪ್ರದರ್ಶನದ ನಂತರ ಮಾಜಿ ನಾಯಕ ಧೋನಿ ಅವರ ಐದು ವರ್ಷದ ಮಗಳು ಝಿವಾ ಧೋನಿ ಅವರಿಗೂ ಅತ್ಯಾಚಾರ ಬೆದರಿಕೆಗಳನ್ನು ಒಡ್ಡಲಾಗಿತ್ತು.

ಕಚ್ ಜಿಲ್ಲೆಯ ನಾಮ್ನಾ ಕಪಾಯ ಗ್ರಾಮದ ನಿವಾಸಿಯಾಗಿರುವ ಈತ ಧೋನಿ ಪತ್ನಿ ಸಾಕ್ಷಿ ಧೋನಿ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬೆದರಿಕೆ ಸಂದೇಶ ಹಾಕಿದ್ದ. ಈತನನ್ನು ಬಳಿಕ ಬಂಧಿಸಲಾಗಿತ್ತು.SHARE THIS

Author:

0 التعليقات: