Friday, 26 November 2021

ಪ್ರಯಾಗ್ ರಾಜ್:ಒಂದೇ ಕುಟುಂಬದ ನಾಲ್ವರು ಕೊಲೆಯಾದ ಸ್ಥಿತಿಯಲ್ಲಿ ಪತ್ತೆ, ಬಾಲಕಿಯ ಮೇಲೆ ಅತ್ಯಾಚಾರ ಶಂಕೆ


ಪ್ರಯಾಗ್ ರಾಜ್:ಒಂದೇ ಕುಟುಂಬದ ನಾಲ್ವರು ಕೊಲೆಯಾದ ಸ್ಥಿತಿಯಲ್ಲಿ ಪತ್ತೆ, ಬಾಲಕಿಯ ಮೇಲೆ ಅತ್ಯಾಚಾರ ಶಂಕೆ

ಲಕ್ನೋ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 16 ವರ್ಷದ ಬಾಲಕಿ ಹಾಗೂ  10 ವರ್ಷದ ಬಾಲಕ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಗುರುವಾರ ಬೆಳಗ್ಗೆ ಅವರ ಮನೆಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು NDTV ವರದಿ ಮಾಡಿದೆ

ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬದ ಸಂಬಂಧಿಕರು, ಬಾಲಕಿ ಸಾಯುವ ಮೊದಲು ಅತ್ಯಾಚಾರಕ್ಕೊಳಗಾಗಿರಬಹುದು 'ಮೇಲ್ಜಾತಿ' ಯವರುಎಂದು ಕರೆಯಲ್ಪಡುವ ನೆರೆಯ ಕುಟುಂಬವು ಈ  ಅಪರಾಧ ಎಸಗಿದೆ ಎಂದು ಆರೋಪ ಮಾಡಿದ್ದಾರೆ.

ಪೊಲೀಸರು 11 ಮಂದಿಯ ವಿರುದ್ಧ ಸಾಮೂಹಿಕ ಅತ್ಯಾಚಾರ ಹಾಗೂ  ಕೊಲೆ ಸೇರಿದಂತೆ ಹಲವು ಪ್ರಕರಣದಡಿ ಎಫ್‌ಐಆರ್ ದಾಖಲಿಸಿದ್ದಾರೆ. ಕೆಲವರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪ್ರಯಾಗರಾಜ್ ಪೊಲೀಸ್ ಮುಖ್ಯಸ್ಥರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಉಸ್ತುವಾರಿಯಾಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಧ್ಯಾಹ್ನ 3 ಗಂಟೆಗೆ ಪ್ರಯಾಗ್‌ರಾಜ್‌ಗೆ ಭೇಟಿ ನೀಡಲಿದ್ದು, ಹತ್ಯೆಗೀಡಾದವರ ಕುಟುಂಬ ಸದಸ್ಯರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.

ಮನೆಯಲ್ಲಿ 50 ವರ್ಷದ ವ್ಯಕ್ತಿ, ಆತನ 45 ವರ್ಷದ ಪತ್ನಿ ಹಾಗೂ  ಅವರ ಮಕ್ಕಳ ಶವ ಪತ್ತೆಯಾಗಿದೆ. ಕುಟುಂಬದವರ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿರಬಹುದು ಹಾಗೂ  ಅವರ ಮೃತದೇಹದ ಮೇಲೆ ಗಂಭೀರ ಗಾಯಗಳಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯ ಶವ ಮನೆಯೊಳಗಿನ ಕೊಠಡಿಯಲ್ಲಿ ಪತ್ತೆಯಾಗಿದ್ದರೆ, ಉಳಿದ ಮೂರು ಶವಗಳು ಒಟ್ಟಿಗೆ ಅಂಗಳದಲ್ಲಿ ಪತ್ತೆಯಾಗಿದ್ದವು


SHARE THIS

Author:

0 التعليقات: