Wednesday, 17 November 2021

ಭಾರತದಲ್ಲಿರುವ ಈ ರೈಲ್ವೆ ನಿಲ್ದಾಣಕ್ಕೆ ಹೋಗಲು ಬೇಕು ಪಾಕಿಸ್ತಾನದ ವೀಸಾ.!


ಭಾರತದಲ್ಲಿರುವ ಈ ರೈಲ್ವೆ ನಿಲ್ದಾಣಕ್ಕೆ ಹೋಗಲು ಬೇಕು ಪಾಕಿಸ್ತಾನದ ವೀಸಾ.!

ವಿದೇಶಕ್ಕೆ ಹೋಗುವಾಗ ವೀಸಾ ಅನಿವಾರ್ಯ. ವೀಸಾ ಇಲ್ಲದೆ ವಿದೇಶಕ್ಕೆ ಹೋಗಲು ಸಾಧ್ಯವಿಲ್ಲ. ಆದ್ರೆ ನಮ್ಮ ದೇಶದಲ್ಲಿ ಯಾವುದೇ ಪ್ರದೇಶದಲ್ಲಿ ಸುತ್ತಾಡಲು ವೀಸಾ ಬೇಕಾಗುವುದಿಲ್ಲ. ಹೀಗಂದುಕೊಂಡಿದ್ದರೆ ತಪ್ಪು. ಭಾರತದ ಒಂದು ಜಾಗಕ್ಕೆ ಹೋಗಲು ಭಾರತೀಯರಿಗೆ ವೀಸಾ ಅಗತ್ಯವಿದೆ.

ಹೌದು, ಆ ಜಾಗಕ್ಕೆ ಹೋಗಲು ಭಾರತೀಯರು, ಪಾಕಿಸ್ತಾನದ ವೀಸಾ ಹೊಂದಿರಬೇಕು. ಒಂದು ವೇಳೆ ಪಾಕಿಸ್ತಾನದ ವೀಸಾ ಇಲ್ಲದೆ ನೀವು ಆ ಜಾಗಕ್ಕೆ ಹೋದ್ರೆ, ಜೈಲು ಸೇರೋದು ನಿಶ್ಚಿತ. ಇಲ್ಲವೆ ದಂಡ ವಿಧಿಸಲಾಗುತ್ತದೆ. ಆ ಸ್ಥಳ ಬೇರೆ ಯಾವುದೋ ಅಲ್ಲ. ಪಂಜಾಬಿನ ಅಮೃತಸರದಲ್ಲಿರುವ ಅಟಾರಿ ರೈಲು ನಿಲ್ದಾಣ.

ಅಟಾರಿ ದೇಶದ ಏಕೈಕ ಅಂತರಾಷ್ಟ್ರೀಯ ಏರ್ ಕಂಡೀಷನರ್ ರೈಲು ನಿಲ್ದಾಣವಾಗಿದೆ. ಇದು ಪಾಕಿಸ್ತಾನದ ಗಡಿಯಲ್ಲಿದೆ. ಈ ನಿಲ್ದಾಣವು ದಿನದ 24 ಗಂಟೆಗಳ ಕಾಲ ಗುಪ್ತಚರ ಸಂಸ್ಥೆಗಳು ಮತ್ತು ಭದ್ರತಾ ಏಜೆನ್ಸಿಗಳಿಂದ ಸುತ್ತುವರೆದಿರುತ್ತದೆ. ಈ ಠಾಣೆಗೆ ಬರುವ ವ್ಯಕ್ತಿ ಪಾಕಿಸ್ತಾನದ ವೀಸಾ ಹೊಂದಿಲ್ಲದಿದ್ದರೆ, ವಿದೇಶಿ ಕಾಯಿದೆಯ ಸೆಕ್ಷನ್ 14 ರ ಅಡಿಯಲ್ಲಿ ಅವನ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಈ ಕಾಯ್ದೆಯಡಿ ಪ್ರಕರಣ ದಾಖಲಾದ್ರೆ ಜಾಮೀನು ಪಡೆಯುವುದು ಸುಲಭವಲ್ಲ.

ದೇಶದ ಅತ್ಯಂತ ವಿಐಪಿ ರೈಲು ಸಂಜೋತಾ ಎಕ್ಸ್ ಪ್ರೆಸ್ ಪಾಕಿಸ್ತಾನಕ್ಕೆ ಹೊರಡುವುದು ಅದೇ ರೈಲು ನಿಲ್ದಾಣದಿಂದ. ರೈಲ್ವೆ ಟಿಕೆಟ್ ಖರೀದಿಸುವಾಗ, ಪ್ರಯಾಣಿಕರು ಪಾಸ್‌ಪೋರ್ಟ್ ಸಂಖ್ಯೆಯನ್ನು ನೀಡಬೇಕು.



SHARE THIS

Author:

0 التعليقات: